ಮೈಸೂರು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ- ಅಜ್ಜಿ.|mysore|

ವರನಿಗೆ 85 ವರ್ಷ, ವಧುವಿಗೆ 65 ವರ್ಷ.
ಮೈಸೂರಿನ ಉದಯಗಿರಿಯ ಗೌಸಿಯಾನಗರದಲ್ಲಿ ಸತಿಪತಿಗಳಾದ ವೃದ್ಧರು.
ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲೇ ಮದುವೆ.
ಕುರಿ ಸಾಕಾಣಿಕೆ ಮಾಡಿ ತನ್ನ 9 ಮಕ್ಕಳಿಗೆ ಮದುವೆ ಮಾಡಿರುವ ಹಾಜಿ ಮುಸ್ತಫಾ.
ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂರನ್ನು ಕಳೆದುಕೊಂಡಿದ್ದ ಮುಸ್ತಫಾ.
ಮಕ್ಕಳಿಗೆಲ್ಲ ಮದುವೆ ಮಾಡಿದ್ದರಿಂದ
ಗೌಸಿಯಾನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದ ಮುಸ್ತಫಾ‌.
ಒಂಟಿ ಜೀವನಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿದ್ದ ಅಜ್ಜ.
ಮುಸ್ತಫಾ ಕಣ್ಣಿಗೆ ಬಿದ್ದಳು ಅದೇ ಏರಿಯಾದ ಫಾತಿಮಾ ಬೇಗಂ.
ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ.
ಫಾತಿಮಾ ಬೇಗಂರನ್ನು ಮದುವೆಯಾಗಲು ಮನವಿ ಮಾಡಿದ್ದ ಮುಸ್ತಫಾ.
ಮುಸ್ತಫಾನಿಗೆ ನಿರಾಸೆ ಮಾಡದೆ ಮದುವೆಯಾಗಲು ಒಪ್ಪಿದ್ರು ಫಾತಿಮಾ ಬೇಗಂ.
ಇಳಿ ವಯಸ್ಸಿನಲ್ಲಿ ಮದುವೆಯಾಗಲು ಇಚ್ಛಿಸಿದ ತಂದೆಗೆ ಶುಭ ಹಾರೈಸಿದ ಮಕ್ಕಳು.
ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದ್ರೂ ತಂದೆಯ ನಿರ್ಧಾರಕ್ಕೆ ಜೈ ಎಂದು ನಿಖಾ ಮಾಡಿದ ಮಕ್ಕಳು.
ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ‌ ಫಾತಿಮಾಬೇಗಂರನ್ನು ವರಿಸಿದ ಮುಸ್ತಫಾ.
ಇಳಿ ವಯಸ್ಸಿನಲ್ಲಿ ಆಸರೆ ಬಯಸಿದ ಮುಸ್ತಫಾರ ಆಸೆ ಈಡೇರಿಸಿದ ಫಾತಿಮಾ ಬೇಗಂ.
ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ ಅಜ್ಜಿ ಫುಲ್‌ಖುಷ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID CASE:ಮೈಸೂರಿನಲ್ಲಿ 4,601 ಪ್ರಕರಣಗಳು ಆಘಾತಕಾರಿ ವರದಿಯಾಗಿದೆ;

Sun Jan 23 , 2022
ವಾರಾಂತ್ಯದ ಕರ್ಫ್ಯೂ ಹಿಂತೆಗೆದುಕೊಂಡ ಒಂದು ದಿನದ ನಂತರ, ಶನಿವಾರದಂದು 4,601 ಧನಾತ್ಮಕ ಪರೀಕ್ಷೆಯೊಂದಿಗೆ COVID-19 ಪ್ರಕರಣಗಳಲ್ಲಿ ಮೈಸೂರು ಆತಂಕಕಾರಿಯಾದ ಏಕದಿನದ ಏರಿಕೆಯನ್ನು ವರದಿ ಮಾಡಿದೆ. ಇದುವರೆಗೆ ಕೋವಿಡ್-19 ಪ್ರಕರಣಗಳಲ್ಲಿ ಮೈಸೂರು ಕಂಡ ಅತ್ಯಂತ ಆಘಾತಕಾರಿ ಜಿಗಿತ ಇದಾಗಿದ್ದು, ಕಳೆದ ವರ್ಷ ಎರಡನೇ ತರಂಗದಲ್ಲಿ ವರದಿಯಾದ ಸುಮಾರು 3,500 ಪ್ರಕರಣಗಳು ಹಿಂದಿನ ಅತಿ ಹೆಚ್ಚು. ಶನಿವಾರದ ದಾಖಲೆ ಸಂಖ್ಯೆಯ ಪ್ರಕರಣಗಳೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 12,000-ಅಂಕವನ್ನು ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ […]

Advertisement

Wordpress Social Share Plugin powered by Ultimatelysocial