ರಿಯಲ್ ಲೈಫ್ ಹೀರೋ ಸೋನು ಸೂದ್

ಒಡಿಶಾದಲ್ಲಿ ಸೋನು ಸೂದ್ರ ಪೋಸ್ಟರ್‌ ಒಂದನ್ನು ಹಾಕಿ ಅವರ ಅಭಿಮಾನಿಗಳು, ‘ಕೊರೋನಾ ಫೈಟರ್‌ ಕಿಂಗ್ ಸೋನು ಸೂದ್’ ಎಂದು ಮೆಚ್ಚುಗೆಯ ಕ್ಯಾಪ್ಷನ್ ಹಾಕಿದ್ದಾರೆ. ಹೌದು ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ತೆರಳಲು ನೆರವಿಗೆ ಬರುತ್ತಿರುವ ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರ ರಿಯಲ್ ಲೈಫ್ ಹೀರೊ ಆಗಿದ್ದಾರೆ. ಅವರ ಈ ಸತ್ಕಾರ್ಯಕ್ಕೆ ಇಡೀ ದೇಶವೇ ಮೆಚ್ಚಿಕೊಂಡಿದೆ. ಸೋನು ಜೊತೆಗೆ ಒಡಿಶಾ ನಟರಾದ ಸಬ್ಯಸಾಚಿ ಮಿಶ್ರಾ ಹಾಗೂ ರಾಣಿ ಪಂಡಾರನ್ನು ಸಹ ಮೆಚ್ಚಿಕೊಂಡು ಪೋಸ್ಟರ್‌ಗಳಲ್ಲಿ ಹಾಕಲಾಗಿದೆ. ಈ ಚಿತ್ರವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ರೀಟ್ವಿಟ್ ಮಾಡಿರುವ ಸೋನು, ಇದು ಬಹಳ ಸ್ವೀಟ್ ಆಗಿದೆ. ಆದರೆ ನಾನು ಇದಕ್ಕೆ ಅರ್ಹನಲ್ಲ. ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ನನ್ನನ್ನು ಚೆನ್ನಾಗಿ ಇಟ್ಟಿವೆ ಎಂದಿದ್ದಾರೆ.

 

 

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟç ಸಿಎಂ ನಿಂದ ಗ್ರೀನ್ ಸಿಗ್ನಲ್

Wed Jun 17 , 2020
ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಮಕ್ಕಳ ಶಿಕ್ಷಣ ಮೇಲೆ ಯಾವುದೇ ಪರಿಣಾಮ ಉಂಟಾಗದAತೆ ನೋಡಿಕೊಳ್ಳಲು ಸಿಎಂ ಉದ್ಧವ್ ಠಾಕ್ರೆ ಸರಕಾರ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಆನ್ ಲೈನ್ ಮಾಧ್ಯಮಗಳ ಮೂಲಕ ಪ್ರಾರಂಭಿಸಲು ಅವಕಾಶ ನೀಡಿದೆ.ಮುನ್ನೆಚ್ಚರಿಕೆಯೊಂದಿಗೆ ಶಾಲೆ ತೆರೆಯಿರಿ : ಕೋವಿಡ್-೧೯ ಪ್ರಕರಣಗಳಿಲ್ಲದ ಗ್ರಾಮಗಳ ಕೆಲವು ಭಾಗಗಳಲ್ಲಿ ಮುನ್ನೆಚ್ಚರಿಕೆಯೊಂದಿಗೆ ಶಾಲೆಗಳನ್ನು ತೆರೆಯಬಹುದು ಎಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಉದ್ಧವ್ ಠಾಕ್ರೆ ಅವರು ಶಿಕ್ಷಣ ಇಲಾಖೆ ಸಚಿವೆ ವರ್ಷಾ ಗಾಯಕ್ವಾಡ್, ರಾಜ್ಯದ ಮುಖ್ಯ […]

Advertisement

Wordpress Social Share Plugin powered by Ultimatelysocial