ಹೊಸ ವರ್ಷದ ಪಾರ್ಟಿ ನಿಲ್ಲಿಸಿ ಯುವತಿಗೆ ಪ್ರಪೋಸ್​

ಹುಡುಗಿಯನ್ನು ಪ್ರಪೋಸ್​ ಮಾಡಲು ಒಬ್ಬೊಬ್ಬರು ಒಂದೊಂದು ವಿಧಾನ ಅಳವಡಿಸಿಕೊಳ್ಳುತ್ತಾರೆ. ಅಂಥದ್ದೇ ಒಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಡಿರುವ ಪ್ರಪೋಸ್​ ಇದಾಗಿದೆ.ಒಬ್ಬ ಯುವಕ, ತಾನು ಇಷ್ಟಪಟ್ಟ ಹುಡುಗಿಗೆ ಪ್ರಪೋಸ್​ ಮಾಡಲು ಇಡೀ ಹೊಸ ವರ್ಷದ ಪಾರ್ಟಿಯನ್ನು ಸ್ಟಾಪ್​ ಮಾಡಿದ್ದಾನೆ.ಎಲ್ಲಿ ಏನಾಯಿತು ಎಂದು ಜನರು ಗೊಂದಲಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಅಲ್ಲಿಯೇ ಸಂಭ್ರಮಾಚರಣೆದಲ್ಲಿದ್ದ ಹುಡುಗಿಗೆ ಈತ ಪ್ರಪೋಸ್​ ಮಾಡಲು ಈ ವಿಧಾನ ಆಯ್ದುಕೊಂಡಿದ್ದಾನೆ.ಹುಡುಗಿ ಬಿಳಿ ಮಿನುಗು ಗೌನ್ ಧರಿಸಿದ್ದಳು. ಪಾರ್ಟಿ ಸ್ಟಾಪ್​ ಆದ ತಕ್ಷಣ ಹಲವರು ಗಲಿಬಿಲಿಗೆ ಒಳಗಾದರು. ಈ ಯುವತಿ ಕೂಡ ಏನಾಯಿತು ಎಂದು ಕೇಳಿದಳು. ನಂತರ ಯುವಕ, ಆ ಯುವತಿಯ ಬಳಿಗೆ ಬಂದು ಮಂಡಿಯೂರಿ, ಇದು ನಿನಗಾಗಿ ಎನ್ನುತ್ತಾನೆ.”ನೀವು ನನ್ನ ಜೀವನದ ಪ್ರೀತಿ, ಮತ್ತು ನೀವು ನನ್ನನ್ನು ವಿಶ್ವದ ಅತ್ಯಂತ ಸಂತೋಷದಾಯಕ ವ್ಯಕ್ತಿಯಾಗಿ ಮಾಡುತ್ತೀಯಾ. ನೀನು ನನ್ನನ್ನು ಮದುವೆಯಾಗುವೆಯಾ?” ಎಂದು ಕೇಳುತ್ತಾನೆ. ಹುಡುಗಿಗೆ ಅಚ್ಚರಿಯಾಗಿ, ಕೊನೆಗೆ ಖುಷಿಯಾಗುತ್ತದೆ. ಆಗ ಯುವಕ ಆಕೆಯ ಕೈಗೆ ನಿಶ್ಚಿತಾರ್ಥದ ಉಂಗುರ ತೊಡಿಸುತ್ತಾನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜೃಂಭಣೆಯಿಂದ ಜರುಗಿದ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ.

Fri Jan 6 , 2023
ವಿಜೃಂಭಣೆಯಿಂದ ಜರುಗಿದ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಯಲ್ಲಾಲಿಂಗೇಶ್ವರ ಮಠದ ಜಾತ್ರೆಯು ಅತಿ ವಿಜ್ರಂಭಣೆಯಿಂದ ನಡೆಯಿತು. ಬೆಳಗ್ಗೆ 8:00ಗೆ ದೇವರ ಪೂಜೆ ನಡೆದು 10 ಗಂಟೆಗೆ ಅನ್ನ ಪ್ರಸಾದ ಪ್ರಾರಂಭವಾಯಿತು ಪಟ್ಟಣ ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು ವರದಿ ಸಿದ್ದು ಜಮ್ಮಲದಿನ್ನಿ, ವಿಜಯಪುರ ಡಿಸ್ಟ್ರಿಕ್ಟ್ ರಿಪೋರ್ಟರ್. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial