ವಾರಕ್ಕೆ ನಾಲ್ಕೇ ದಿನ ಕೆಲಸದ ಅವಧಿ; ಭರ್ಜರಿ ಯಶಸ್ಸಿನ ಬಳಿಕ ಮುಂದುವರಿಕೆಗೆ UK ಕಂಪನಿಗಳ ಒಲವು

 

ಯುನೈಟೆಡ್ ಕಿಂಗ್ಡಮ್ ನ ಹಲವು ಕಂಪನಿಗಳು ಪರೀಕ್ಷಾರ್ಥವಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಮಾತ್ರ ಕೆಲಸದ ಅವಧಿಯನ್ನು ನೀಡಿದ್ದು, ಇದರಲ್ಲಿ ಭರ್ಜರಿ ಯಶಸ್ಸು ಸಾಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶೇಕಡ 92 ಕಂಪನಿಗಳು ಇದನ್ನೇ ಮುಂದುವರಿಸಿಕೊಂಡು ಹೋಗಲು ಬಯಸಿವೆ ಎಂದು ಹೇಳಲಾಗಿದೆ.

 

61 ಬೃಹತ್ ಕಂಪನಿಗಳು ಆರು ತಿಂಗಳ ಈ ಪೈಲೆಟ್ ಸ್ಕೀಮ್ ಅಡಿ ಜೂನ್ ನಿಂದ ಡಿಸೆಂಬರ್ ಅಂತ್ಯದವರೆಗೆ ಈ ನಿಯಮ ಅಳವಡಿಸಿಕೊಂಡಿದ್ದು, ಉದ್ಯಮದಲ್ಲಿ ಯಶಸ್ಸು ಕಾಣುವುದರ ಜೊತೆಗೆ ಉದ್ಯೋಗಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲೂ ಗಣನೀಯ ಸುಧಾರಣೆ ಕಂಡು ಬಂದಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

ಹೀಗಾಗಿ 61 ಕಂಪನಿಗಳ ಪೈಕಿ 56 ಕಂಪನಿಗಳು ಅರ್ಥಾತ್ ಶೇಕಡಾ 92 ಕಂಪನಿಗಳು ಇದನ್ನು ಮುಂದುವರಿಸಿಕೊಂಡು ಹೋಗಲು ಬಯಸಿವೆ. ಈ ಪೈಕಿ 18 ಕಂಪನಿಗಳು ಈ ನಿಯಮವನ್ನು ಶಾಶ್ವತವಾಗಿ ಅಳವಡಿಸಿಕೊಳ್ಳಲಿವೆ. ಕೇವಲ ಶೇಕಡ 4ರಷ್ಟು ಕಂಪನಿಗಳು ಮಾತ್ರ ಈ ಮೊದಲಿಗಿದ್ದ ನಿಯಮವನ್ನು ಮತ್ತೆ ಆರಂಭಿಸಲು ಚಿಂತಿಸಿವೆ.

ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಈ ಪೈಲೆಟ್ ಸ್ಕೀಮ್ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಾಜೆಕ್ಟ್ ಎಂದು ಪರಿಗಣಿಸಲಾಗಿತ್ತು. ಬೋಸ್ಟನ್ ಕಾಲೇಜಿನ ಪ್ರೊಫೆಸರ್ ಜೂಲಿಯಟ್, ಆಕ್ಸ್ಫರ್ಡ್ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ಸಂಶೋಧಕರ ಸಹಯೋಗದೊಂದಿಗೆ ಅಧ್ಯಯನ ನಡೆಸಿದ್ದರು.

ಈ ಪೈಲೆಟ್ ಸ್ಕೀಮ್ ನಲ್ಲಿ ಪಾಲ್ಗೊಂಡಿದ್ದ ಕಂಪನಿಗಳು ತಮ್ಮ ಅನುಭವವನ್ನು ಅಂಕಗಳ ಆಧಾರದ ಮೇಲೆ ನೀಡಿದ್ದು, 10ಕ್ಕೆ ಸರಾಸರಿ 8.5 ಅಂಕ ಬಂದಿದೆ. ಉತ್ಪಾದನೆಯಲ್ಲಿ ಸುಧಾರಿಸಿರುವ ಜೊತೆಗೆ ಆದಾಯದಲ್ಲೂ ಶೇ.35 ಏರಿಕೆ ಕಂಡು ಬಂದಿದೆ ಎಂದು ಹೇಳಿವೆ.

ಇನ್ನು ಉದ್ಯೋಗಿಗಳ ವಿಷಯಕ್ಕೆ ಬಂದರೆ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ. ಅಲ್ಲದೆ ಕಂಪನಿಗಳು ಈ ನಿಯಮ ಅಳವಡಿಸಿಕೊಂಡ ಬಳಿಕ ಒತ್ತಡ ರಹಿತರಾಗಿರುವುದರ ಜೊತೆಗೆ ಇತರೆ ದೈಹಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಿಳಾ ಉದ್ಯೋಗಿಗಳ ವಿಚಾರದಲ್ಲೂ ಗಮನಾರ್ಹ ಬದಲಾವಣೆ ಕಂಡು ಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವವಿವಾಹಿತರಿಬ್ಬರು ತಮ್ಮ ಆರತಕ್ಷತೆಗೆ ಮುನ್ನವೇ ಶವವಾಗಿ ಪತ್ತೆ

Wed Feb 22 , 2023
ರಾಯ್‍ಪುರ.ಫೆ.22- ನವವಿವಾಹಿತರಿಬ್ಬರು ತಮ್ಮ ಆರತಕ್ಷತೆಗೆ ಮುನ್ನವೇ ಶವವಾಗಿ ಪತ್ತೆಯಾಗಿರುವ ಘಟನೆ ಛತ್ತಿಸ್‍ಗಢದಲ್ಲಿ ನಡೆದಿದೆ. ಮೃತಪಟ್ಟಿರುವ ಅಸ್ಲಾಂ(24) ಮತ್ತು ಕಹಕಸ ಬಾನು(22) ಭಾನುವಾರ ವಿವಾಹವಾಗಿದ್ದು, ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು. ಇಬ್ಬರು ಆರತಕ್ಷತೆಗಾಗಿ ಕೊನೆಯೊಳಗೆ ತಯಾರಾಗುತ್ತಿದ್ದರು, ಈ ವೇಳೆ ವಧು ಜೋರಾಗಿ ಕಿರುಚಿಕೊಂಡಿರುವ ಸದ್ದು ಕೇಳಿ ಮನೆಯವರೆಲ್ಲ ಕೋಣೆಯತ್ತ ಧಾವಿಸಿದ್ದಾರೆ. ಕೋಣೆ ಬಾಗಿಲು ಒಳಭಾಗದಿಂದ ಲಾಕ್ ಆಗಿತ್ತು. ಸಂಬಂಧಿಕರು ಕಿಟಕಿಯಲ್ಲಿ ಇಣುಕಿ ನೋಡಿದಾಗ ಇಬ್ಬರು ರಕ್ತ ಮಡುವಿನಲ್ಲಿ ಬಿದ್ದಿರುವುದು ಕಂಡು […]

Advertisement

Wordpress Social Share Plugin powered by Ultimatelysocial