ವಿವಾಹ ಸಂಭ್ರಮದಲ್ಲಿದ್ದ ವಧು ಹೃದಯಾಘಾತದಿಂದ ಸಾವು,

ಗುಜರಾತ್: ವಿವಾಹ ಸಂಭ್ರಮದಲ್ಲಿದ್ದ ವಧು ಹೃದಯಾಘಾತದಿಂದ ಸಾವನ್ನಪ್ಪಿರುವ ಈ ಅಹಿತಕರ ಘಟನೆ ಗುಜರಾತ್‌ನ ಭಾವನಗರದಲ್ಲಿರುವ ಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ.ಕುಟುಂಬವು ಮಗಳ ಮದುವೆ ಸಂಭ್ರಮದಲ್ಲಿತ್ತು.ಮದುವೆಯ ಕಾರ್ಯಗಳು ಸಹ ನಡೆಯುತ್ತಿತ್ತು. ಆದ್ರೆ, ಜವರಾಯ ಇದನ್ನು ಸಹಿಸಲಾಗದೇ, ವಧುವಿನ ಪ್ರಾಣಪಕ್ಷಿಯನ್ನು ಹಾರಿಸಿಕೊಂಡು ಹೋಗಿದ್ದಾನೆ.ವಧು ಹೇತಲ್ ಮೃತ ದುರ್ದೈವಿ. ಈಕೆ ವಿಶಾಲ್ ಎಂಬುವರನ್ನು ವಿವಾಹವಾಗಬೇಕಿತ್ತು. ಮದುವೆಯ ಸಂಭ್ರಮದಲ್ಲಿದ್ದ ಹೇತಲ್‌ಗೆ ತಲೆತಿರುಗುವಿಕೆಯಿಂದ ಮೂರ್ಛೆ ಹೋದರು. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ಆಕೆ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಅಹಿತಕರ ಘಟನೆಯ ನಂತರವೂ ಸಂಬಂಧಿಕರು ಪರ್ಯಾಯ ಯೋಜನೆಗೆ ಮುಂದಾಗಿದ್ದರಿಂದ ವಿವಾಹ ಮಹೋತ್ಸವ ಮುಂದುವರಿದಿತ್ತು. ಹೇತಲ್ ಸಾವಿನಿಂದ ಶೋಕತಪ್ತ ಕುಟುಂಬಸ್ಥರು ವಧುವಿನ ತಂಗಿಯನ್ನು ವರ ವಿಶಾಲ್‌ಗೆ ಕೊಟ್ಟು ಮದುವೆ ಮಾಡುವಂತೆ ಸೂಚಿಸಿದ್ದಾರೆ. ಇದೆಲ್ಲದರ ನಡುವೆ ಹೇತಾಲ್ ಅವರ ದೇಹವನ್ನು ಸಮಾರಂಭ ಮುಗಿಯುವವರೆಗೂ ಕೋಲ್ಡ್ ಸ್ಟೋರೇಜ್ ನಲ್ಲಿ ಇಡಲಾಗಿತ್ತು ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಳೆಯಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ : ಎಷ್ಟಿದೆ ಶುಲ್ಕ..?

Mon Feb 27 , 2023
  ಬೆಂಗಳೂರು: ಫೆ.28ರಿಂದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಆರಂಭವಾಗಲಿದೆ.ರಾಷ್ಟ್ರೀಯ ಹೆದ್ದಾರಿ -275 ಭಾಗ, ಬೆಂಗಳೂರು-ನಿಡಘಟ್ಟ ವಿಭಾಗದ 6 ಲೇನ್ ಬಳಕೆಗಾಗಿ ಟೋಲ್ ಶುಲ್ಕಗಳು ನಾಳೆಯಿಂದ ಜಾರಿಯಾಗಲಿದೆ. ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಬೆಂಗಳೂರು-ನಿಡಘಟ್ಟವರೆಗಿನ ಹೆದ್ದಾರಿಯಲ್ಲಿ ಸಾಗಲು ವಾಹನಗಳು ಟೋಲ್ ಕಟ್ಟಬೇಕಾಗಿದೆ. ಟೋಲ್ ದರ ಪಟ್ಟಿ ಹೀಗಿದೆ ಕಾರು, ಜೀಪ್, ವ್ಯಾನ್ಗಳಿಗೆ • ಏಕಮುಖ ಸಂಚಾರ ಕ್ಕೆ : 135 ರೂ. […]

Advertisement

Wordpress Social Share Plugin powered by Ultimatelysocial