ಮನೆ ಮಾರಿದ ನಟಿ ಸೋನಂ ಕಪೂರ್!

ತಾಯಿಯಾಗಿರುವ ನಟಿ ಸೋನಂ ಕಪೂರ್ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಸೋನಂ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಮೂರು ವರ್ಷಕ್ಕೂ ಮೇಲಾಯ್ತು. ನಡುವಲ್ಲಿ ಅಪ್ಪ ಅನಿಲ್ ಕಪೂರ್‌ ಸಿನಿಮಾ ಒಂದರಲ್ಲಿ ಮುಖ ತೋರಿಸಿ ಹೋಗಿದ್ದಾರೆ ಅಷ್ಟೆ.

ಆದಾಯಕ್ಕಾಗಿ ಸಿನಿಮಾದಲ್ಲಿ ನಟಿಸುತ್ತಲೇ ಇರಬೇಕು ಎಂಬ ಜರೂರತ್ತೇನು ಸೋನಂಗಿಲ್ಲ.

ಆಕೆಯ ಪತಿ ದೊಡ್ಡ ಉದ್ಯಮಿ ಸಹ ಹೌದು. ಆದರೆ ಹೊಸ ಸುದ್ದಿಯೆಂದರೆ ಸಕಲ ಐಶಾರಾಮಿತ್ವಗಳಿರುವ ಸೋನಂ ಕಪೂರ್ ಇತ್ತೀಚೆಗೆ ತಮ್ಮ ಮನೆಯೊಂದನ್ನು ಮಾರಿದ್ದಾರಂತೆ!

ಬಹುತೇಕ ಸಮಯವನ್ನು ಪತಿಯೊಟ್ಟಿಗೆ ಲಂಡನ್‌ನಲ್ಲಿ ಕಳೆವ ನಟಿ ಸೋನಂ ಕಪೂರ್ ಅಲ್ಲಿವೇ ಹೆಚ್ಚು ವಾಸವಿರುವ ಕಾರಣ ಮುಂಬೈನ ಬಾಂಡ್ರಾ-ಕುರ್ಲಾ ಬಳಿಯ ಐಶಾರಾಮಿ ಅಪಾರ್ಟ್‌ಮೆಂಟ್ ಒಂದನ್ನು ಮಾರಾಟ ಮಾಡಿದ್ದಾರೆ.

2015 ರಲ್ಲಿ ಸೋನಂ ಕಪೂರ್ ಖರೀದಿಸಿದ್ದ ಈ ಅಪಾರ್ಟ್‌ಮೆಂಟ್‌ ಅನ್ನು ಇತ್ತೀಚೆಗೆ 32.50 ಕೋಟಿ ರುಪಾಯಿಗೆ ಸೋನಂ ಕಪೂರ್ ಮಾರಾಟ ಮಾಡಿದ್ದಾರೆ. 5,533 ಚದರ ಅಡಿಯ ವಿಶಾಲವಾದ ಪ್ರೀಮಿಯನ್ ಮನೆಯಾಗಿದ್ದು, ಸಿಗ್ನೇಚರ್ ಐಸ್‌ಲೆಂಡ್ ಅಪಾರ್ಟ್‌ಮೆಂಟ್‌ನ ಮೂರನೇ ಫ್ಲೋರ್‌ನಲ್ಲಿದೆ. ಬಾಂಡ್ರಾ ಈಸ್ಟ್‌ನ ಐಶಾರಾಮಿ ಕಾಂಪ್ಲೆಕ್ಸ್‌ಗಳಲ್ಲಿ ಇದು ಸಹ ಒಂದು.

ಸಂಸ್ಥೆಯೊಂದಕ್ಕೆ ಸೋನಂ ಕಪೂರ್ ಈ ಆಸ್ತಿಯನ್ನು ಮಾರಿದ್ದು, ನೊಂದಣಿ ಕಾರ್ಯವು ಡಿಸೆಂಬರ್ 29 ಕ್ಕೆ ನಡೆದಿದೆ. ಎಸ್‌ಎಂಎಫ್‌ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯು ಸೋನಂರ ಆಸ್ತಿಯನ್ನು ಖರೀದಿಸಿದ್ದು, ಸ್ಟಾಂಪ್ ಡ್ಯೂಟಿಯಾಗಿ 1.95 ಕೋಟಿ ರುಪಾಯಿಗಳನ್ನು ತೆತ್ತಿದೆ. ಸ್ಟ್ಯಾಂಪ್ ಡ್ಯೂಟಿ ಆಧಾರದ ಮೇಲೆ ಆಸ್ತಿಯ ಒಟ್ಟು ಮೌಲ್ಯವನ್ನು ಅಂದಾಜಿಸಲಾಗಿದೆ.

ಸೋನಂ ಕಪೂರ್, ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಪುತ್ರಿ. 200 ರಲ್ಲಿ ‘ಸಾವರಿಯಾ’ ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಸೋನಂ ಕಪೂರ್ ಆ ಬಳಿಕ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 2019 ರಲ್ಲಿ ಬಿಡುಗಡೆ ಆಗಿದ್ದ ‘ದಿ ಜೋಯಾ ಫ್ಯಾಕ್ಟರ್’ ಸೋನಂ ನಟಿಸಿದ ಕೊನೆಯ ಸಿನಿಮಾ. 2018 ರಲ್ಲಿ ಉದ್ಯಮಿ ಆನಂದ್ ಅಹುಜಾರನ್ನು ವಿವಾಹವಾದರು. ಈ ಜೋಡಿಗೆ ಇತ್ತೀಚೆಗಷ್ಟೆ ಒಂದು ಗಂಡು ಮಗು ಜನಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಶ್ವೇತಾ - ನಕ್ಷತ್ರ ಮಧ್ಯೆ ವಿಶೇಷ ಟಾಸ್ಕ್

Thu Jan 5 , 2023
  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಇಷ್ಟು ದಿನ ನಕ್ಷತ್ರಳನ್ನ ಸೊಸೆ ಅಂತ ಶಕುಂತಲಾ ದೇವಿ ಪರಿಗಣಿಸುತ್ತಿರಲಿಲ್ಲ. ಅಷ್ಟೇ ಯಾಕೆ.. ಮಯೂರಿ ಹಾಗೂ ಶೆರ್ಲಿ ಅವರುಗಳನ್ನೂ ಶಕುಂತಲಾ ದೇವಿ ‘ಸೊಸೆ’ ಎಂದು ಪರಿಗಣಿಸಿಲ್ಲ. ಇದೀಗ ಚಂದ್ರಶೇಖರ್ ಕೊಟ್ಟಿರುವ ಟಾಸ್ಕ್‌ನಲ್ಲಿ ನಕ್ಷತ್ರ ಗೆದ್ದುಬಿಟ್ಟರೆ.. ಆಡಿದ ಮಾತಿನಂತೆ ಶಕುಂತಲಾ ದೇವಿ ನಡೆಯಲೇಬೇಕಿದೆ.ನಕ್ಷತ್ರಗೆ ಅವಮಾನ ಮಾಡಿದ್ದ ಶಕುಂತಲಾ […]

Advertisement

Wordpress Social Share Plugin powered by Ultimatelysocial