ವಿಶಾಖಪಟ್ಟಣಂನಲ್ಲಿ ಮತ್ತೊಂದು ದುರಂತ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿಯ ಔಷಧಿ ತಯಾರಿಕ ಘಟಕವೊಂದರಲ್ಲಿ ಮಧ್ಯರಾತ್ರಿ ವೇಳೆಗೆ ಭಾರೀ ಸ್ಫೋಟ ಸಂಭವಿಸಿದ್ದು ಕಾರ್ಮಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಪರವಾಡಾ ಪ್ರದೇಶದ ಜೆ. ಎಂ ಫಾರ್ಮಾಸಿಟಿಯಲ್ಲಿ ಈ ಸ್ಪೋಟ ಸಂಭವಿಸಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನುAಟುಮಾಡಿದೆ. ಫಾರ್ಮಾ ಸಿಟಿಯಲ್ಲಿ ಮೊದಲು ಸ್ಫೋಟ ಸಂಭವಿಸಿ, ಅದರ ನಂತರ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಸುಮಾರು ೯ ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಸಾಗರ ತ್ಯಾಜ್ಯ ನಿರ್ವಹಣೆ ಮಾಡಲಾಗುವ ರಾಮ್ ಕಿ ದ್ರಾವಕಗಳ ಘಟಕದಲ್ಲಿ ಸ್ಪೋಟ ಸಮಭವಿಸಿದೆ ಎಂದು ತಿಳಿಸಿವೆ. ಸುತ್ತಮುತ್ತಲಿನಲ್ಲಿ ಔಷಧಿ ಸಸ್ಯಗಳನ್ನು ಕೂಡ ನೆಡಲಾಗಿದ್ದು, ಹಲವಾರು ಕಾರ್ಖಾನೆಗಳು ಕೂಡ ಕಾರ್ಯನಿರ್ವಹಿಸುತ್ತಿದೆ. ಬೆಂಕಿ ಹರಡದಂತೆ ಅಗ್ನಿಶಾಮಕ ವಾಹನಗಳನ್ನು ನಿಯೋಜಿಲಾಗಿದೆ ಎಂದು ವಿಶಾಕಪಟ್ಟಣ ಜಿಲ್ಲಾಧಿಕಾರಿ ವಿ. ವಿನಯ್ ಚಂದ್ ತಿಳಿಸಿದ್ದಾರೆ. ಘಟನೆಯಲ್ಲಿ ಒಬ್ಬ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು, ಇತರ ಮೂವರು ಅದೃಷ್ಟವಶಾತ್ ಪಾರಾಗಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ನಗರದ ಗಜುವಾಕಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಂದ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನವಜಾತು ಶಿಶುವಿಗೆ ಬ್ಲಡ್ ಪ್ಲಾಸ್ಮಾ ಕೊರತೆ

Tue Jul 14 , 2020
ನವಜಾತ ಶಿಶುವಿಗೆ ಬ್ಲಡ್ ಪ್ಲಾಸ್ಮಾ ಕೊಂಡೊಯುತ್ತಿದ್ದ ವೇಳೆ ಕುಟುಂಬಸ್ಥರು ಅಪಘಾತಕ್ಕಿಡಾಗಿದ್ದು, ಪ್ಲಾಸ್ಮಾ ಸಿಗದೆ ಮಗು ಸಾವನ್ನಪ್ಪಿದೆ. ದೆಹಲಿಯಲ್ಲಿ ಜುಲೈ ೧೧ರಂದು ಈ ಘಟನೆ ನಡೆದಿದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬದ ಮೂವರು ಮಗುವಿಗಾಗಿ ಪ್ಲಾಸ್ಮಾ ತೆಗೆದುಕೊಂಡು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಮೂವರು ಗಾಯಗೊಂಡಿದ್ದು. ಸೂಕ್ತ ಸಮಯಕ್ಕೆ ಪ್ಲಾಸ್ಮಾ ಸಿಗದೆ ಆಸ್ಪತ್ರೆಯಲ್ಲಿದ್ದ ಮಗು ಸಾವನ್ನಪ್ಪಿದೆ. ವೇಗವಾಗಿ ಡ್ರೆöÊವ್ ಮಾಡಿ ಅಪಘಾತಕ್ಕೆ ಕಾರಣವಾದ ಕಾರ್ ಚಾಲಕನನ್ನು ಅರೆಸ್ಟ್ ಮಾಡಿರುವುದಾಗಿ ದೆಹಲಿ […]

Advertisement

Wordpress Social Share Plugin powered by Ultimatelysocial