ಡಿಕೆಶಿ ಬಂಧನ ಬಳಿಕ ರಾಜಕೀಯ ‌ನಿವೃತ್ತಿ ಪಡೆಯುತ್ತೇನೆ ಎಂದ ರಮೇಶ ಜಾರಕಿಹೊಳಿ.

ಬೆಳಗಾವಿ: ನನ್ನ ಸಿಡಿ‌ ಪ್ರಕರಣದಲ್ಲಿ ‌ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್, ಉದ್ಯಮಿ‌ ಪರಶಿವಮೂರ್ತಿ, ನರೇಶ, ಶ್ರವಣ, ಡಿ.ಕೆ. ಶಿವಕುಮಾರ್ ವಾಹನ ಚಾಲಕ ಹಾಗೂ ಮಂಡ್ಯ ಮೂಲದ ಇಬ್ಬರು ಪ್ರಮುಖ ಆರೋಪಿಗಳನ್ನು ‌ಕೂಡಲೇ ಬಂಧಿಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್​ ರಾಜಕಾರಣ‌ ಮಾಡಲು ಯೋಗ್ಯನಲ್ಲ. ಷಡ್ಯಂತ್ರದ ಮೂಲಕ ರಾಜಕಾರಣ ಹಾಳು ಮಾಡುವ ಮತ್ತು ನನ್ನ ರಾಜಕೀಯ ಜೀವನ ಮುಗಿಸಲು ಪ್ರಯತ್ನಿಸಿರುವ ಡಿ.ಕೆ.ಶಿವಕುಮಾರ್​ ಅವರನ್ನು ರಾಜಕೀಯವಾಗಿ ಮುಗಿಸಿ, ಬಂಧಿಸದ ಬಳಿಕವೇ ರಾಜಕೀಯ ದಿಂದ ನಿವೃತ್ತಿ ಆಗುತ್ತಾನೆ ಎಂದು ಘೋಷಿಸಿದರು.

ಸಿಡಿ ಪ್ರಕರಣದಲ್ಲಿ ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ.‌ ಡಿ.ಕೆ.‌ಶಿವಕುಮಾರ್ ಅವರೇ ಸಿಡಿ‌ ಪ್ರಕರಣದ ಸೂತ್ರದಾರ. ಈ ಕುರಿತು ಕೂಡಲೇ ಆಡಿಯೋ ಬಿಡುಗಡೆ ಮಾಡಿತ್ತೇನೆ. ಈ ವಿಷಯದಲ್ಲಿ ನಾನು ಯಾರಿಗೂ ಹೆದರುವ ವ್ಯಕ್ತಿ ನಾನಲ್ಲ. ಇದನ್ನು ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರದ‌ ಮೂಲಕ ಶಿಫಾರಸ್ಸು ಮಾಡುತ್ತೇನೆ. ಇದು ವೈಯಕ್ತಿಕ ವಿಷಯವಾಗಿರುವುದರಿಂದ ಪಕ್ಷದ ನಾಯಕರು, ಮುಖಂಡರಿಗೂ ಇದಕ್ಕೂ ಸಂಬಂಧ ಇಲ್ಲ ಎಂದರು.

10 ಸಾವಿರ‌ ಕೋಟಿ ರೂ.‌ಹಗರಣ ಕಾರಣ
ನಾನು ನೀರಾವರಿ ಸಚಿವ ಸ್ಥಾನ ವಹಿಸಿಕೊಂಡ ಬಳಿಕ ಅಕ್ರಮ ಟೆಂಡರ್​ಗಳಿಗೆ ಅಂಕಿತ ಹಾಕಲು ಡಿ.ಕೆ.ಶಿವಕುಮಾರ್​ ಗ್ಯಾಂಗ್ ಒತ್ತಡ ಹಾಕಿತ್ತು. ಆದರೆ, ನಾನು ಅಂತಹ ಕೆಲಸಕ್ಕೆ ‌ಕೈ ಹಾಕಲಿಲ್ಲ. ಅಲ್ಲದೆ, ಬೆಂಗಳೂರು ಶಾಂತಿನಗರದ ಹತ್ತು ಸಾವಿರ ಕೋಟಿ ರೂ. ಫೈಲ್​ಗೆ ಒಪ್ಪಿಗೆ ನೀಡದಿರುವುದಕ್ಕೆ ಇಬ್ಬರ ನಡುವೆ ವೈಮಸ್ಸು ಆರಂಭವಾಯಿತು. ಬಳಿಕ ನಾನು ಬಿಜೆಪಿ ಸೇರಿದ ಕಾರಣವೇ ನನ್ನ ಸಿಡಿ ಹೊರ ಬರಲು ಪ್ರಮುಖ ಕಾರಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹಾಳಾಗಲು ವಿಷ ಕನ್ಯೆ ಕಾರಣ
ರಾಜ್ಯದಲ್ಲಿ ಕಾಂಗ್ರೆಸ್ ಹಾಳಾಗಲು ವಿಷಕನ್ಯೆ ಹಾಗೂ ಡಿ.ಕೆ.ಶಿವಕುಮಾರ್​ ಕಾರಣ. ಈ ವಿಷ್ಯಕನ್ಯೆ ಸಾಕಷ್ಟು ಜನರ ರಾಜಕೀಯ ಜೀವನ ಹಾಳು ಮಾಡಿದ್ದಾರೆ.‌ ಅಲ್ಲದೆ, ಕಾಂಗ್ರೆಸ್ ‌ಕೂಡ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

`ಡಾಲರ್ಸ್ ಪೇಟೆ’ ಚಿತ್ರೀಕರಣ ಪೂರ್ಣ.

Mon Jan 30 , 2023
ಡಾಲರ್ಸ್ ಪೇಟ್ ಚಿತ್ರದ ಮೂಲಕ ಮೋಹನ್ ಎನ್ ಮುನಿ ನಾರಾಯಣಪ್ಪ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿರುವಾ ಮಾಡಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿತ್ತು. ಇದೀಗ ಚಿತ್ರದ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡಿ ಕುತೂಹಲ ಹೆಚ್ಚಿಸಿದೆ.ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಲೂಸಿಯ ಖ್ಯಾತಿಯ ನಿರ್ದೇಶಕ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಚಿತ್ರದಲ್ಲಿ ಸೌಮ್ಯ […]

Advertisement

Wordpress Social Share Plugin powered by Ultimatelysocial