ವೈದ್ಯ ದಂಪತಿಗೆ ಸೋಂಕು

85 ವರ್ಷದ ವೃದ್ಧರೊಬ್ಬರು ಕೋವಿಡ್-19 ಸೋಂಕು ತಗುಲಿ ಮೃತಪಟ್ಟಿದ್ದರು. ಸಾವಿಗೂ ಮುನ್ನ ಮೃತ ವೃದ್ಧ ಕನಕಪುರದ ಎಂ.ಜಿ ರಸ್ತೆಯಲ್ಲಿರುವ ನವೋದಯ ಆರೋಗ್ಯ ಕೇಂದ್ರ  ಡಾ.ಚೇತನ್ ಟೇಂಕರ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದರು. ಈ ಹಿನ್ನಲೆಯಲ್ಲಿ ಇದೀಗ ಚಿಕಿತ್ಸೆ ನೀಡಿದ ಖಾಸಗಿ ವೈದ್ಯ ದಂಪತಿಗೆ ಸೋಂಕು ದೃಢಪಟ್ಟಿದೆ. ಇವರಿಬ್ಬರೂ ವೈದ್ಯರಾದ ಕಾರಣ ಇವರ ಬಳಿ ಚಿಕಿತ್ಸೆ ಪಡೆದ ನಾಗರೀಕರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಲು ಕನಕಪುರದ ಸ್ಥಳೀಯ ಆಡಳಿತ ಸೂಚನೆ ಹೊರೆಡಿಸದೆ. ಜೂನ್ 6 ರಿಂದ ಈವರೆಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಎಲ್ಲರೂ ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಕನಕಪುರ ನಗರಸಭೆಯ ಆಯುಕ್ತರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

 

 

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಾದಂತ ಇಂದು ಮಾಸ್ಕ್ ದಿನಾಚರಣೆ

Thu Jun 18 , 2020
ರಾಜ್ಯದಾದ್ಯಂತ ಇಂದು ಮಾಸ್ಕ್ ದಿನಾಚರೆಣೆಗೆ ಬಿ.ಬಿ.ಎಂ.ಪಿ. ಹಾಗೂ ಆರೋಗ್ಯ ಇಲಾಖೆ ವತಿಯಿಂದ ಚಾಲನೆ ನೀಡಿದ ಮುಖ್ಯಮಂತ್ರಿಗಳು ವಿಧಾನಸೌಧದಿಂದ ಕಬ್ಬನ್ ಪಾರ್ಕ್ ವರೆಗೂ ಪಾದಯಾತ್ರೆ ಮಾಡಿ ಎಲ್ಲಾ ಜಿಲ್ಲೆಗಳಲ್ಲೂ ಮಾಸ್ಕ್ ದಿನವನ್ನು ಆಚರಿಸಲಾಗುತ್ತಿದ್ದು, ಪಾದಯಾತ್ರೆ ವೇಳೆ ಮಾಸ್ಕ್ ಧರಿಸುವುದು ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್-19 ನಿಯಂತ್ರಣ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ […]

Advertisement

Wordpress Social Share Plugin powered by Ultimatelysocial