ಸಂಸಾರ, ಗಂಡ ಹೆಂಡತಿ ಎಂದರೆ ಅಲ್ಲಿ ಜಗಳ ಮನಸ್ಥಾಪ ಕೋಪ ಸರ್ವೇ ಸಾಮಾನ್ಯ.

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಂಸಾರ, ಗಂಡ ಹೆಂಡತಿ ಎಂದರೆ ಅಲ್ಲಿ ಜಗಳ ಮನಸ್ಥಾಪ ಕೋಪ ಸರ್ವೇ ಸಾಮಾನ್ಯ. ಆದರೆ ಇದರ ಹೊರತಾಗಿಯೂ ಗಂಡ ಹೆಂಡತಿ ಸುಖವಾಗಿ ಯಾವಾಗಲೂ ಅನೋನ್ಯವಾಗಿರಬಹುದು. ಸತಿಪತಿಗಳಿಬ್ಬರೂ ಸಹಕರಿಸಿಕೊಂಡು ಸಹಬಾಳ್ವೆಯಿಂದ ಇರಬಹುದು.ಅದು ಹೇಗೆ ಅಂತಿರಾ ನೀವಿಬ್ಬರೂ ಹೀಗೆ ಇದ್ದುಬಿಟ್ಟರೆ ಸಂಸಾರದಲ್ಲಿ ತಾಪತ್ರಯ ಇರುವದೇ ಇಲ್ಲ.ಗಂಡ ಹೆಂಡತಿ ನಡುವೆ ಜಗಳಗಳು ಕಾಮನ್‌. ಆದರೆ ಆ ಜಗಳ ಕೋಪಗಳನ್ನು ಮುಂದಿನ ದಿನಕ್ಕೆ ತೆಗೆದುಕೊಂಡು ಹೋಗುವುದು ಬೇಡ. ಆದಷ್ಟು ಜಗಳಗಳನ್ನು ಕೂಡಲೇ ಅಂದೇ ಬಗೆಹರೆಸಿಕೊಳ್ಳಿ.ಫ್ಯಾಮಿಲಿ ಫಂಕ್ಷನ್‌ಗಳಲ್ಲಿ, ಫ್ರೆಂಡ್ಸ್‌ಪಾರ್ಟಿಗಳಲ್ಲಿ ಇಬ್ರೂ ಒಟ್ಟಿಗೆ ಹೋಗಿ, ಹೋದ ಜಾಗದಲ್ಲೆಲ್ಲಾ ನಿಮ್ಮ ನಿಮ್ಮ ಪಾರ್ಟನರ್‌ಗೆ ಗೌರವ, ಮರ್ಯಾದೆ ಕೊಡಿ. ಮತ್ತೊಬ್ಬರ ಮುಂದೆ ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸಬೇಡಿ. ಸಾಧ್ಯವಾದರೆ ನಿಮ್ಮವರ ಒಳ್ಳೆಯತನವನ್ನು ಮತ್ತೊಬ್ಬರಿಗೆ ಪರಿಚಯ ಮಾಡಿಸಿಕೊಡಿ. ಅತಿಯಾದ ಹೊಗಳಿಕೆ ಕೂಡ ಬೇಡ. ಇದರಿಂದ ಕೇಳುಗರಿಗೆ ಬೋರ್‌ ಆದೀತು. ಇಬ್ಬರಿಗೂ ಅವರವರ ಸಂಗಾತಿಯ ಮೇಲೆ ಗೌರವ ಪ್ರೀತಿ ಹುಟ್ಟುತ್ತದೆ.ದೀರ್ಘವಾದ ವಾದ ವಿವಾದಗಳು ಬೇಡ. ಸಂಸಾರದಲ್ಲಿ ಕೆಲವೊಮ್ಮೆ ಇಂತಹ ಸಂದರ್ಭ ಬರುತ್ತವೆ. ಮನೆಯಲ್ಲಿ ಕಲಹವಾದಾಗ ಇಬ್ಬರೂ ದೊಡ್ಡ ಧ್ವನಿಯಲ್ಲಿ ಚರ್ಚೆಗೆ ನಿಲ್ಲಬೇಡಿ. ಒಬ್ಬರಾದರೂ ಮೌನವಾಗಿದ್ದುಬಿಡಿ. ಮಾತುಕತೆ ಅಥವಾ ಚರ್ಚೆಗೆ ತುಂಬಾ ಅತಿರೇಕಕ್ಕೆ ಹೋಗದಂತೆ ಇಬ್ಬರೂ ಎಚ್ಚರ ವಹಿಸಿ. ಸಾಧ್ಯವಾದರೆ ಒಂದೆರೆಡು ಗಂಟೆ ಇಬ್ಬರೂ ಸುಮ್ಮನಿದ್ದುಬಿಡಿ. ನಂತರ ತನ್ನಂತಾನೆ ಎಲ್ಲವೂ ಸರಿಹೋಗುತ್ತದೆ.ಪರಸ್ಪರ ಭಾವನೆಗಳನ್ನು ಅರಿತುಕೊಳ್ಳಿ. ಪ್ರೀತಿಗೆ ಸ್ಪಂದಿಸಿ. ಇದು ಒಬ್ಬರೇ ಮಾಡಿದರೆ ಸಾಲದು ಸಂಗಾತಿಗಳಿಬ್ಬರೂ ತಮ್ಮವರ ಭಾವನೆಗಳಿಗೆ ಸ್ಪಂದಿಸಬೇಕು. ಕೆಲವು ಪ್ರೀತಿಯ ಮಾತುಗಳನ್ನಾಡಿ. ದಿನದ ಕೊನೆಯಲ್ಲಿ ಇಬ್ಬರೂ ಒಳ್ಳೆಯ ವಿಚಾರಗಳ ಕುರಿತು ಚರ್ಚೆ ಮಾಡಿ. ಭರವಸೆ ಮಾತುಗಳು ಸಂಸಾರಕ್ಕೆ ಧೈರ್ಯ ನೀಡುತ್ತವೆ.ಅದೆಷ್ಟೋ ಸಂಸಾರದಲ್ಲಿ ಹಣದ ವಿಷಯವಾಗಿಯೇ ಕಲಹಗಳಾಗೋದು. ಹಾಗಾಗಿ ಹಣದ ವಿಷಯವಾಗಿ ಇಬ್ಬರೂ ಪಾರದರ್ಶಕದಿಂದ ಇರಿ. ಖರ್ಚು ವ್ಯಚ್ಛಗಳನ್ನು ಒಬ್ಬರಿಗೊಬ್ಬರು ಒಪ್ಪಿಸಿ. ಕದ್ದುಮುಚ್ಚಿ ಹಣದ ವ್ಯವಹಾರ ಮಾಡಿದರೆ ಅಲ್ಲಿ ಅನುಮಾನ ಕಲಗಳು ಆಗುವ ಸಂಭವವಿರುತ್ತದೆ ಎಚ್ಚರ.ಸಂಗಾತಿಯ ಖಾಸಗೀತನಕ್ಕೆ ಗೌರವ ಕೊಡಿ. ಅವರಿಗೂ ಫ್ರೆಂಡ್ಸ್‌ ಫ್ಯಾಮಿಲಿ ಎಂದು ಇರುತ್ತಾರೆ. ನಿಮ್ಮ ಸಂಗಾತಿ ಯಾವಾಗಲೂ ನಿಮ್ಮ ಜೊತೆಗೆ ಇರಬೇಕೆಂದರೆ ಅದು ಅವರಿಗೆ ಕೆಲವೊಮ್ಮೆ ಉಸಿರುಗಟ್ಟಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಎಫ್‌ಪಿಐ ನಿವ್ವಳ ಮಾರಾಟಗಾರರು ಫೆಬ್ರವರಿಯಲ್ಲಿ ಇದುವರೆಗೆ 6,834 ಕೋಟಿ ರೂ

Sun Feb 6 , 2022
    ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಫೆಬ್ರವರಿಯ ಮೊದಲ ನಾಲ್ಕು ವಹಿವಾಟು ಅವಧಿಗಳಲ್ಲಿ ಭಾರತೀಯ ಮಾರುಕಟ್ಟೆಗಳಿಂದ 6,834 ಕೋಟಿ ರೂ. ಠೇವಣಿದಾರರ ಅಂಕಿಅಂಶಗಳ ಪ್ರಕಾರ, ಎಫ್‌ಪಿಐಗಳು ಈಕ್ವಿಟಿಗಳಿಂದ ರೂ 3,627 ಕೋಟಿ, ಸಾಲ ವಿಭಾಗದಿಂದ ರೂ 3,173 ಕೋಟಿ ಮತ್ತು ಹೈಬ್ರಿಡ್ ಉಪಕರಣಗಳಿಂದ ರೂ 34 ಕೋಟಿ ತೆಗೆದುಕೊಂಡಿವೆ. ಹಿಂದೆ, ಎಫ್‌ಪಿಐಗಳು ಸತತ ನಾಲ್ಕನೇ ತಿಂಗಳು ನಿವ್ವಳ ಮಾರಾಟಗಾರರಾಗಿದ್ದರು. “ಕಳೆದ ವಾರ ಯುಎಸ್ ಫೆಡ್ ಪ್ರಕಟಣೆಯ ನಂತರ ಎಫ್‌ಪಿಐಗಳು […]

Advertisement

Wordpress Social Share Plugin powered by Ultimatelysocial