ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟನೆಗೆ ಸದಾವಕಾಶ – ನೀವೂ ಕೂಡ ಆಕ್ಟ್ ಮಾಡಬಹುದು

ಕನ್ನಡ ಸಿನಿಮಾ ರಂಗದಲ್ಲಿ ಇದೀಗ ಶೆಟ್ರ ಟ್ರೆಂಡಿಂಗ್ ನಡೀತಾ ಇದೆ. ಒಂದಾದ ಮೇಲೊಂದು ಶೆಟ್ರ ಸಿನಿಮಾಗಳು ರಿಲೀಸ್ ಆಗ್ತಿದ್ದು, ಎಲ್ಲವೂ ಸೂಪರ್ ಹಿಟ್ ಆಗ್ತಿದೆ. ಹೀಗಿರುವಾಗ  ನಾವೂ ಕೂಡ ಶೆಟ್ರ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ಮಾಡಿದ್ರೂ ಸಾಕಿತ್ತು ನಮಗೊಂದು ಅವಕಾಶ  ಸಿಕ್ಕಿದ್ರೆ ಚೆನ್ನಾಗಿರ್ತಿತ್ತು  ಎಂದು ಅದೇಷ್ಟೋ ಜನ ಅಂದುಕೊಂಡವರಿದ್ದಾರೆ. ಅಂತವರಿಗೆ ಇದೀಗ ಒಂದು ಸುವರ್ಣಾವಕಾಶ ಒದಗಿ ಬಂದಿದೆ. ಜನಸಾಮಾನ್ಯರೂ ಕೂಡ ಶೆಟ್ ಸಿನಿಮಾಗಳಲ್ಲಿ ಅಭಿನಯ ಮಾಡಬಹುದು. ನಿಜಕ್ಕೂ ಇದು ಸಾಧ್ಯಾನಾ? ಎಂದುಕೊಳ್ಳುತ್ತಿರುವವರಿಗೆ ಇಲ್ಲಿದೆ ಉತ್ತರ.

ನಟ ರಾಜ್ ಬಿ. ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಅವರ ಮುಂದಿನ ಚಿತ್ರಕ್ಕೆ ಕಲಾವಿದರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕಾಸ್ಟಿಂಗ್ ಕಾಲ್ ಕೊಟ್ಟು ಕಲಾವಿದರನ್ನು ತಮ್ಮ ಮುಂದಿನ ಸಿನಿಮಾಗೆ ಸೇರಿಸಿಕೊಳ್ಳಲು ನಟ ಮುಕ್ತ ಅವಕಾಶವೊಂದನ್ನು ಇಟ್ಟಿದ್ದಾರೆ.

ಗರುಡ ಗಮನ ವೃಷಭ ವಾಹನ ತಯಾರಕರಿಂದ ಪ್ರೊಡಕ್ಷನ್ ನಂಬರ್ 2. ಕಾಸ್ಟಿಂಗ್ ಕಾಲ್. ಕನ್ನಡ ಚಿತ್ರಕ್ಕಾಗಿ ಕಾಸ್ಟಿಂಗ್ ಕರೆ. ನಾವು ಕಲಾವಿದರಿಗಾಗಿ ಹುಡುಕುತ್ತಿದ್ದೇವೆ. 5-8 ವರ್ಷ ವಯಸ್ಸಿನ ಹೆಣ್ಣು ಮಗು (ತೆಳ್ಳನೆ, ಎಣ್ಣೆಗಪ್ಪು ಮೈಬಣ್ಣ), 6ರಿಂದ  ವರ್ಷ ಹಾಗೂ 10ರಿಂದ 15 ವರ್ಷದ ಬಾಲಕ (ತೆಳ್ಳನೆ-ಎಣ್ಣೆಗಪ್ಪು ಮೈಬಣ್ಣ), 35 ವರ್ಷ ಅಥವಾ 35 ವರ್ಷ ಮೇಲ್ಪಟ್ಟ ವಯಸ್ಸಿನ ಪುರುಷ ಹಾಗೂ ಮಹಿಳಾ ಕಲಾವಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Please follow and like us:

Leave a Reply

Your email address will not be published. Required fields are marked *

Next Post

ಸಿರಿ ರವಿಕುಮಾರ್ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರದ ನಾಯಕಿ!

Mon Dec 5 , 2022
ಖ್ಯಾತ ನಟಿ ರಮ್ಯ ನಿರ್ಮಾಣದ, ರಾಜ್ ಬಿ ಶೆಟ್ಟಿ ನಿರ್ದೇಶನದ “ಸ್ವಾತಿ ಮುತ್ತಿನ ಮಳೆ ಹನಿಯೇ” ಚಿತ್ರದ ನಾಯಕಿಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಿರಿ ರವಿಕುಮಾರ್ ಪ್ರೇರಣಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada     Please follow and like us:

Advertisement

Wordpress Social Share Plugin powered by Ultimatelysocial