ಬಿರೇನ್​ ಸಿಂಗ್​​ರ ಅಳಿಯ ಆರ್​​.ಕೆ ಇಮೋ ಸಿಂಗ್​​ ಚುನಾವಣಾ ಅಫಿಡವಿಟ್​ ಸಲ್ಲಿಸಿದ್ದರು!

ಮಣಿಪುರ ಸಿಎಂ ಎನ್​. ಬಿರೇನ್​ ಸಿಂಗ್​​ರ ಅಳಿಯ ಆರ್​​.ಕೆ ಇಮೋ ಸಿಂಗ್​​ ಚುನಾವಣಾ ಅಫಿಡವಿಟ್​ ಸಲ್ಲಿಸಿದ್ದು ಇದರಲ್ಲಿ ತಮ್ಮ ಬಳಿ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬುದನ್ನು ಘೋಷಣೆ ಮಾಡಿದ್ದಾರೆ. ತಮ್ಮ ಮಾವ ಸಿಎಂ ಎನ್​ ಬಿರೇನ್​ ಸಿಂಗ್​​ಗಿಂತ ಇಮೋ ಸಿಂಗ್​ ಐದು ಪಟ್ಟು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.ಆರ್​.ಕೆ ಇಮೋ ಸಿಂಗ್​ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸಗೋಲ್​ ಬಂದ್​ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಮಣಿಪುರ ಸಿಎಂ ಬಿರೇನ್​​ ಸಿಂಗ್​​ 1,08,46,392 ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಆದರೆ ಅವರ ಅಳಿಯ ಆರ್​.ಕೆ ಇಮೋ ಸಿಂಗ್​ 5,10,94,917.93 ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.ಆರ್​ಕೆ ಇಮೋ ಬಳಿ 1,14,37,779.93 ರೂಪಾಯಿ ಮೌಲ್ಯದ ಚರಾಸ್ಥಿ ಇದರಲ್ಲಿ 2,16,400 ರೂಪಾಯಿ ನಗದು, ಒಟ್ಟು 7 ಬ್ಯಾಂಕ್​ ಖಾತೆಗಳಲ್ಲಿ 37 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಹೊಂದಿದ್ದಾರೆ. ಇವರ ಬಳಿಯಲ್ಲಿ ಎರಡು ಕಾರುಗಳು ಇವೆ. 6.5 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಜಿಪ್ಸಿ ಹಾಗೂ 16,68,905 ರೂಪಾಯಿ ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ ,18,38,688 ರೂಪಾಯಿ ಮೌಲ್ಯದ ಹಾರ್ಲೆ ಡೆವಿಡ್ಸನ್​ ಬೈಕ್​​ನ್ನು ಹೊಂದಿದ್ದಾರೆ. ಇವರ ಬಳಿ ಶಾಟ್​ ಗನ್​ ಹಾಗೂ 38 ಪಿಸ್ತೂಲ್​ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವರ ಪ್ರಮಾಣ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಶಿಕಲಾ'ಜೀರೋ ಟ್ರಾಫಿಕ್​ಗೆʼ ಹೈಕೋರ್ಟ್​ ನಿರಾಕರಿಸಿದೆ.

Tue Feb 8 , 2022
  ಬೆಂಗಳೂರು: ಸಚಿವರ ಪ್ರಮಾಣ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಶಿಕಲಾ ಜೊಲ್ಲೆ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ‘ಜೀರೋ ಟ್ರಾಫಿಕ್​’ ವ್ಯವಸ್ಥೆ ಕಲ್ಪಿಸಿದ ಪ್ರಕರಣವನ್ನು ಮರುವಿಚಾರಣೆ ನಡೆಸಲು ಹೈಕೋರ್ಟ್​ ನಿರಾಕರಿಸಿದೆ.ಜೀರೋ ಟ್ರಾಫಿಕ್​ ವ್ಯವಸ್ಥೆ ನೀಡಿದ್ದ ಪೊಲೀಸರ ಕ್ರಮ ಪ್ರಶ್ನಿಸಿ ವಕೀಲ ಜಿ. ಬಾಲಾಜಿ ನಾಯ್ಡು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.ಅರ್ಜಿಯನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಪ್ರಕರಣ ಸಂಬಂಧ […]

Advertisement

Wordpress Social Share Plugin powered by Ultimatelysocial