ವೋಟರ್ ಐಡಿ ಕಳೆದು/ಹರಿದಿದ್ದರೆ ಹೊಸದಾಗಿ ಪಡೆಯುವುದು ಹೇಗೆ?

 

ಬೆಂಗಳೂರು, ಫೆಬ್ರವರಿ 14: ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಗುರುತಿನ (Voter ID) ಚೀಟಿ ಕಳೆದು ಹೋಗಿದ್ದರೆ, ಅಥವಾ ತುಂಬಾ ಹಳೆಯದಾಗಿ ಬಳಸಲು ಯೋಗ್ಯವಾಗಿರದಿದ್ದಲ್ಲಿ ಹೊಸ ಚೀಟಿ ಪಡಯಲು ಅವಕಾಶ ನೀಡಲಾಗಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ 2023ರ ಕಾರ್ಯ ಚಟುವಟಿಕೆಗಳು, ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಸೇರಿದಂತೆ ಅಗತ್ಯ ಎಲ್ಲ ಸಿದ್ಧತೆಗಳು ಒಂದೊಂದಾಗೆ ನಡೆಯುತ್ತಿವೆ.

ಅದೇ ರೀತಿ ಬೃಹತ್ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) 243 ವಾರ್ಡ್‌ಗಳಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿತ್ತು.

ಇದೀಗ ಅದರ ಬೆನ್ನಲ್ಲೆ ಮತದಾರರ ಗುರುತಿನ ಚೀಟಿ ಕಳೆದುಹೋದ ಅಥವಾ ಬಳಸಲು ಯೋಗ್ಯವಾಗಿರದ ಗುರುತಿನ ಚೀಟಿ ಹೊಂದಿರುವವರು ಹೊಸ ಚೀಟಿ ಪಡೆಯಬಹುದು. ಅದಕ್ಕಾಗಿ ಅರ್ಜಿ ಸಲ್ಲಿಸಬೇಕು. ಆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು, ಯಾವ ನಿಯಮ ಪಾಲಿಸಬೇಕು ಎಂದು ಬಿಬಿಎಂಪಿ ತಿಳಿಸಿರುವ ಮಾಹಿತಿ ಇಲ್ಲಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಬೇಕು. 2023 ಜನವರಿ 01ರಂದು ಅಂತಿಮಗೊಳಿಸಿ ಮತದಾರರ ಪಟ್ಟಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತ ಚುನಾವಣಾ ಆಯೋಗ ತಿಳಿಸಿರುವಂತೆ ಕಳೆದ 2022 ವರ್ಷ ಜೂನ್ 22 ರಲ್ಲಿನ ಅವಕಾಶಗಳಂತೆ ಈಗಾಗಲೇ ಮತದಾರರು ನೊಂದಣಿಯಾಗಿದ್ದಾರೆ. ಮತದಾರರ ಗುರುತಿನ ಚೀಟಿ ಕಳೆದು ಹೋಗಿದ್ದರೆ ಇಲ್ಲವೇ ಹರಿದು ಹೋಗಿ ಬಳಸಲು ಯೋಗ್ಯವಾಗಿರದಿದ್ದರೆ ಅಂತವರು ಹೊಸ ಚೀಟಿ ಪಡೆಯಿರಿ.

ಅದಕ್ಕಾಗಿ ಹೊಸ ಮತದಾರರ ಚೀಟಿಗಾಗಿ ನಮೂನೆ 8 ಅನ್ನು (EPIC Replacement) NVSP ಅಥವಾ Voter Helpline App ಮುಖೇನ ಹೊಸ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬೇಕು. ಈ ಶುಲ್ಕ ರಹಿತ ಅರ್ಜಿ ಸಲ್ಲಿಸಿದ ಬಳಿಕ ಮುಂದಿನ 30 ದಿನದಲ್ಲಿ ತಮ್ಮ ಮನೆ ಬಾಗಿಲಿಗೇ ಭಾರತೀಯ ಅಂಚೆ ಇಲಾಖೆ ಮೂಲಕ ಹೊಸ ಗುರುತಿನ ಚೀಟಿ ಸಿಗುತ್ತದೆ.

ಒಂದು ವೇಳೆ ಮತದಾರರ ಗುರುತಿನ ಚೀಟಿ ತಲುಪದೇ ಇದ್ದಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಮತದಾರರ ನೊಂದಣಾಧಿಕಾರಿ/ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ಪ್ರಸ್ತುತ ಸ್ಥಿತಿಯ ಮಾಹಿತಿಯನ್ನು ಪಡೆಬಹುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ; ದೈವಸ್ಥಾನದ ಟ್ರಸ್ಟ್​ ಸದಸ್ಯರಲ್ಲಿಯೇ ಹಣಕ್ಕಾಗಿ ಕಿತ್ತಾಟ

Wed Feb 15 , 2023
    ಮೈಸೂರು: ಆರ್.ಟಿ.ನಗರದಲ್ಲಿ ಮಂಗಳೂರಿನ ದೈವಗಳು ಗುಡಿಗಳು ತಲೆ ಎತ್ತಿದ್ದು, ಜನರ ನಂಬಿಕೆಯಾದ ಕೊರಗಜ್ಜ ದೈವದ ಹೆಸರಿನಲ್ಲಿ ದಂಧೆ ನಡೆಯುತ್ತಿದ್ದೆಯಾ ಎಂಬ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವ ಕೊರಗಜ್ಜನ ದೈವಸ್ಥಾನದ ಪಕ್ಕದಲ್ಲಿಯೇ, ಇದೀಗ ದೈವ ರಾಜ ಗುಳಿಗ ಹೆಸರಿನಲ್ಲಿ ಮತ್ತೊಂದು ದೈವಸ್ಥಾನ ನಿರ್ಮಾಣವಾಗಿದೆ.   ಇದಲ್ಲದೆ ದೈವಸ್ಥಾನದ ಟ್ರಸ್ಟ್​ ಸದಸ್ಯರಲ್ಲಿಯೇ ಹಣಕ್ಕಾಗಿ ಕಿತ್ತಾಟ ಆರಂಭವಾಗಿದ್ದು, ದೈವಸ್ಥಾನದ ಅರ್ಚಕ ಹುಂಡಿಯನ್ನು ತನ್ನ ಮನೆಗೆ ಕೊಂಡೊಯ್ದಿರುವ […]

Advertisement

Wordpress Social Share Plugin powered by Ultimatelysocial