ಖ್ಯಾತ ನಿರ್ದೇಶಕ ಎಸ್‌.ಎಸ್ ರಾಜಮೌಳಿಗೆ ಇಂದು 48ನೇ ಜನ್ಮದಿನದ ಸಂಭ್ರಮ

ಟಾಲಿವುಡ್ ಜಕ್ಕಣ್ಣ ಎಂಬ ಬಿರುದು ಹೊಂದಿರುವ ದಕ್ಷಿಣ ಭಾರತ ಸಿನಿರಂಗದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರಿಗೆ ಇಂದು 48 ನೇ ಜನ್ಮದಿನದ ಸಂಭ್ರಮ. ತಮ್ಮ 20 ವರ್ಷದ ಸಿನಿ ಪಯಣದಲ್ಲಿ ಅವರು ನಿರ್ದೇಶನ ಮಾಡಿದ್ದು ಕೇವಲ 11 ಚಿತ್ರಗಳಾದರೂ ಅವರು ಭಾರತೀಯ ಚಿತ್ರರಂಗದ ನಂಬರ್ 1 ಡೈರೆಕ್ಟರ್ ಎಂಬ ಹಿರಿಮೆಯನ್ನು ಉಳಿಸಿಕೊಂಡಿದ್ದಾರೆ.

ಅವರ ಜನ್ಮದಿನಕ್ಕೆ ಟಾಲಿವುಡ್, ಬಾಲಿವುಡ್ ಸೇರಿದಂತೆ ತಮಿಳು, ಕನ್ನಡ ಹಾಗೂ ಮಲೆಯಾಳಂ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ನಟರಾದ ಮಹೇಶ್ ಬಾಬು, ರಾಮ್ ಚರಣ್, ಅಜಯ್ ದೇವಗನ್, ಜೂನಿಯರ್ ಎನ್ಟಿಆರ್, ಪ್ರಭಾಸ್, ಅಲ್ಲು ಅರ್ಜುನ್, ನಟಿ ಆಲಿಯಾ ಭಟ್ ಸೇರಿದಂತೆ ಅನೇಕರು ಜಕ್ಕಣ್ಣನಿಗೆ ಶುಭಾಶಯ ಕೋರಿದ್ದಾರೆ.

2001 ರಲ್ಲಿ ಜೂನಿಯರ್ ಎನ್ಟಿಆರ್ಅಭಿನಯದ ಸ್ಟುಡೆಂಟ್ ನಂಬರ್ 1 ಸಿನಿಮಾ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಇಳಿದ ರಾಜಮೌಳಿ ಸಿಂಹಾದ್ರಿ, ಸೈ, ಛತ್ರಪತಿ, ವಿಕ್ರಮಾರ್ಕುಡು, ಯಮದೋಂಗಾ, ಮಗಧೀರ, ಮರ್ಯಾದಾ ರಾಮಣ್ಣ, ಈಗಾ, ಬಾಹುಬಲಿ ಎಂಬ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ಇದೀಗ ಅವರಆರ್ಆರ್ಆರ್ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಈಗಾ ಸಿನಿಮಾಕ್ಕೆ ಮಾತ್ರ ರಾಜಮೌಳಿ ಅವರು ಕಥೆ ಬರೆದಿದ್ದು ಬಿಟ್ಟರೆ, ಉಳಿದಂತೆ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಕೊಡುವ ಕಥೆಗಳನ್ನು ಅದ್ಭುತವಾಗಿ ಸಿನಿಮಾ ಮಾಡಿ ಒಬ್ಬ ಅದ್ಭುತ ಫಿಲ್ಮ ಮೇಕರ್ ಎನಿಸಿಕೊಂಡಿದ್ದಾರೆ. ರಾಜಮೌಳಿ ಅವರು ಮಹಾಭಾರತದ ಬಗ್ಗೆ ದೊಡ್ಡ ಬಜೆಟ್ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ…

Please follow and like us:

Leave a Reply

Your email address will not be published. Required fields are marked *

Next Post

ಟೊಮೆಟೊ ಬೆಲೆ ದಿಢೀರ್‌ ಏರಿಕೆ..!

Sun Oct 10 , 2021
ಕಳೆದ ತಿಂಗಳು ಒಂದು ಕೆ.ಜಿ 10 ರಿಂದ 15 ರೂಪಾಯಿ ಇದ್ದ ಟೊಮೆಟೊ ಬೆಲೆ. ಈಗ ಬರೋಬ್ಬರಿ 60 ರಿಂದ 70 ರೂಪಾಯಿಗೆ ಏರಿಕೆಯಾಗಿದೆ. ದಿಢೀರನೆ ಒಂದು ಕೆ.ಜಿಗೆ 60 ರೂಪಾಯಿ ಏರಿಕೆ ಕಂಡಿದೆ. ಪೆಟ್ರೋಲ್, ಡೀಸೆಲ್ ಆಯ್ತು ಈಗ ಟೊಮೆಟೊ ಸರದಿ. ಮಹಾಮಾರಿ ಕೊರೊನಾ ಮಧ್ಯೆ ಟೊಮೆಟೊ ಬೆಲೆ ಕೂಡ ಗಗನಕ್ಕೇರಿದೆ. ರಾಜ್ಯದ ಭಾರೀ ಮಳೆಗೆ ಟೊಮೆಟೊ ದುಬಾರಿಯಾಗಿದೆ. ಒಂದು ಕೆ.ಜಿಗೆ 10 ರೂಪಾಯಿ ಇದ್ದ ಟೊಮೆಟೊ ದಿಢೀರನೆ ಏರಿಕೆ […]

Advertisement

Wordpress Social Share Plugin powered by Ultimatelysocial