ಟೊಮೆಟೊ ಬೆಲೆ ದಿಢೀರ್‌ ಏರಿಕೆ..!

ಕಳೆದ ತಿಂಗಳು ಒಂದು ಕೆ.ಜಿ 10 ರಿಂದ 15 ರೂಪಾಯಿ ಇದ್ದ ಟೊಮೆಟೊ ಬೆಲೆ. ಈಗ ಬರೋಬ್ಬರಿ 60 ರಿಂದ 70 ರೂಪಾಯಿಗೆ ಏರಿಕೆಯಾಗಿದೆ. ದಿಢೀರನೆ ಒಂದು ಕೆ.ಜಿಗೆ 60 ರೂಪಾಯಿ ಏರಿಕೆ ಕಂಡಿದೆ. ಪೆಟ್ರೋಲ್, ಡೀಸೆಲ್ ಆಯ್ತು ಈಗ ಟೊಮೆಟೊ ಸರದಿ. ಮಹಾಮಾರಿ ಕೊರೊನಾ ಮಧ್ಯೆ ಟೊಮೆಟೊ ಬೆಲೆ ಕೂಡ ಗಗನಕ್ಕೇರಿದೆರಾಜ್ಯದ ಭಾರೀ ಮಳೆಗೆ ಟೊಮೆಟೊ ದುಬಾರಿಯಾಗಿದೆ. ಒಂದು ಕೆ.ಜಿಗೆ 10 ರೂಪಾಯಿ ಇದ್ದ ಟೊಮೆಟೊ ದಿಢೀರನೆ ಏರಿಕೆ ಕಂಡಿದೆ.

ಕಳೆದ ತಿಂಗಳು ಒಂದು ಕೆ.ಜಿ 10 ರಿಂದ 15 ರೂಪಾಯಿ ಇದ್ದ ಟೊಮೆಟೊ ಬೆಲೆ. ಈಗ ಬರೋಬ್ಬರಿ 60 ರಿಂದ 70 ರೂಪಾಯಿಗೆ ಏರಿಕೆಯಾಗಿದೆ. ದಿಢೀರನೆ ಒಂದು ಕೆ.ಜಿಗೆ 60 ರೂಪಾಯಿ ಏರಿಕೆ ಕಂಡಿದೆ. ರಾಜ್ಯದಲ್ಲಾಗುತ್ತಿರುವ ಭಾರೀ ಮಳೆಗೆ ಬೆಳೆ ನಾಶವಾಗಿದೆ. ಜೊತೆಗೆ ನೆರೆ ರಾಜ್ಯಗಳಿಂದ, ಬೆಂಗಳೂರಿನ ಸುತ್ತಮುತ್ತಲಿನ ಭಾಗಗಳಿಂದ ಬರುತ್ತಿದ್ದ ಟೊಮೆಟೊ ಬರುತ್ತಿಲ್ಲ. ಹೀಗಾಗಿ ಟೊಮೆಟೊ ಹಣ್ಣಿನ ಬೆಲೆ ಏರಿಕೆ ಕಾಣುತ್ತಿದೆ.

ಮಹಾರಾಷ್ಟ್ರದಿಂದಲೂ ಬಾರಿ ನಗರಕ್ಕೆ ಟೊಮೆಟೊ ಪೂರೈಕೆಯಾಗಿಲ್ಲ. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ 100 ರೂಪಾಯಿ ದಾಟಿದ್ರೂ ಅಚ್ಚರಿಯಿಲ್ಲ. ದಿನ ಬಳಕೆ ಸಾಮಾಗ್ರಿಗಳ ಬೆಲೆ ಏರಿಕೆ ನಡುವೆ ಮತ್ತೊಂದು ದುಬಾರಿ ಹೊಡೆತ ಕೊಟ್ಟಿದೆ. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ 20 ರಿಂದ 22 ಕೆ.ಜಿ ತೂಕದ ಬಾಕ್ಸ್ ಗೆ ಬರೋಬ್ಬರಿ 1,200 ರೂ ಇದೆ. ಆನ್ ಲೈನ್ ಮೂಲಕ ಖರೀದಿ ಮಾಡುವವರಿಗೆ ಡಬಲ್ ಶಾಕ್. ವಿವಿಧ ಶಾಪಿಂಗ್ ಆಪ್ ಮೂಲಕ ಟೊಮೆಟೊ ಖರೀದಿಸುವವರಿಗೆ ಕೆ.ಜಿ 80 ರೂಗೆ ಸಿಗುತ್ತಿದೆ. ಎಪಿಎಂಸಿಗೆ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ, ಚಿಂತಾಮಣಿ ಭಾಗಗಳಿಂದ ಬರುತ್ತಿದ್ದ ಟೊಮೆಟೊ ಪ್ರಮಾಣ ಶೇ.40 ರಷ್ಟು ಇಳಿಮುಖವಾಗಿದೆ

Please follow and like us:

Leave a Reply

Your email address will not be published. Required fields are marked *

Next Post

ಕ್ವಾಲಿಪೈಯರ್‌ 1 ರಲ್ಲಿ ಚೆನ್ನೈ ಹಾಗೂ ಡೆಲ್ಲಿ ನಡುವೆ ಗೆಲುವು ಯಾರಿಗೆ..?

Sun Oct 10 , 2021
ಇಂದು ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌  ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಗುರು- ಶಿಷ್ಯರ ನಡುವೆ ಕಾದಾಟ ನಡಿತಿದೆ.ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಿಷಭ್‌ ಪಂತ್‌ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿ ಆಗಲಿವೆ. ಈ ರೋಚಕ ಪಂದ್ಯದಲ್ಲಿ ಗುರು ಶಿಷ್ಯರ ಕಾಳಗ ಹೇಗಿರಲಿದೆ ಅನ್ನೂ ಕುತೂಹಲ, ಮತ್ತಷ್ಟು ಇಮ್ಮಡಿಗೊಳಿಸಿದೆ. ಲೀಗ್ ಹಂತದಲ್ಲಿ ಆಡಿರುವ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ 20 ಅಂಕಗಳೊಂದಿಗೆ […]

Advertisement

Wordpress Social Share Plugin powered by Ultimatelysocial