ಹೊಸಬರ “ಹುಲಿಭೇಟೆ” ಗೆ ಸಾಥ್ ನೀಡಿದ ಗಣ್ಯರು. ಈಗ ಟೀಸರ್ ಬಂದಿದೆ. ಮಾಸಾಂತ್ಯಕ್ಕೆ ಸಿನಿಮಾ ಬರಲಿದೆ‌

ಹೊಸ ಯುವ ಉತ್ಸಾಹಿ ತಂಡದ ಸಮಾಗಮದಲ್ಲಿ “ಹುಲಿಭೇಟೆ ಚಿತ್ರ ತಯಾರಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್ ಎ ಚಿನ್ನೇಗೌಡ,
ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೆ.ಎಂ.ವೀರೇಶ್ ಮುಂತಾದ ಗಣ್ಯರು ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.

ನಾನು ಚಿತ್ರ ಆರಂಭಿಸಿದಾಗ ಕೆಲವು ಅಡೆತಡೆಗಳು ಎದುರಾದವು. ಮಕ್ಕಳಿಗೆ ಕಷ್ಟ ಬಂದಾಗ ಮೊದಲು ನೆನಪಾಗುವುದು ತಾಯಿ. ನನಗೆ ತಾಯಿಯ ತರಹ ವಾಣಿಜ್ಯ ಮಂಡಳಿ ಹಾಗೂ ತಂದೆಯ ಸ್ಥಾನದಲ್ಲಿ ನಿರ್ಮಾಪಕರ ಸಂಘ. ಈ ಎರಡು ಸಂಸ್ಥೆಗಳ ಸಹಕಾರದಿಂದ ನನಗೆ ಎದುರಾದ ಕಷ್ಟ ದೂರವಾಗಿದೆ. ಆ ಎರಡೂ ಸಂಸ್ಥೆಗಳಿಗೆ ಧನ್ಯವಾದ. ಚಿತ್ರದ ಬಗ್ಗೆ ಹೇಳುವುದಾದರೆ ಭೂಗತಲೋಕದ ಒಂದಿಷ್ಟು ಕಥೆ ಜೊತೆಗೆ ನವೀರಾದ ಪ್ರೇಮಕಾವ್ಯ ಸಹ ಇದರಲ್ಲಿದೆ.ಕಲ್ಯಾಣ ಕರ್ನಾಟಕದ ಭಾಗದಲ್ಲೇ ಚಿತ್ರೀಕರಣ ನಡೆದಿದೆ . ಮೇ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಸಹಕಾರ ನೀಡಿರುವ ಸಮಸ್ತರಿಗೂ ವಂದನೆ ತಿಳಿಸಿದರು ನಿರ್ದೇಶಕ ರಾಜ್ ಬಹದ್ದೂರ್ ‌.

ಕೇವಲ ಒಂದುವರೆ ಸಾವಿರ ರೂಪಾಯಿಯಿಂದ ಆರಂಭವಾದ ಸಿನಿಮಾವಿದು. ಕ್ಯಾಮೆರಾ ಅಸಿಸ್ಟೆಂಟ್ ಹಾಗೂ ಇನ್ನಿತರ ಕೆಲಸ ಮಾಡಿರುವ ನನಗೆ ನಟನೆಯಲ್ಲಿ ಆಸಕ್ತಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ತಂದೆ-ತಾಯಿಯ ಬೆಂಬಲ ದೊರಕಿತು. ಈ ಸಿನಿಮಾ ಆರಂಭವಾಯಿತು. ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಅನಿರೀಕ್ಷಿತವಾಗಿ ನಮ್ಮ ತಂದೆ ನನ್ನಿಂದ ದೂರಾದರು. ಆದರೂ ಧೃತಿಗೆಡದೆ ನನ್ನ ತಾಯಿ, ನೀನು ಈ ಸಿನಿಮಾ ಪೂರ್ಣಮಾಡು ಎಂದು ನನ್ನ ಜೊತೆಗೆ ನಿಂತರು ಎಂದು ಹೇಳುತ್ತಾ ನಾಯಕ ವಿಶ್ವ ಭಾವುಕರಾದರು.

ನಾಯಕಿ ರೋಹಿಣಿ ಹಾಗೂ ಛಾಯಾಗ್ರಾಹಕ ಧನಪಾಲ್ “ಹುಲಿಭೇಟೆ” ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸತತ 15 ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿದ್ದಾರೆ.

Thu May 5 , 2022
   ಐಪಿಎಲ್‌ನ ಮೊದಲ ಸೀಸನ್‌ನಿಂದ ಆರ್​ಸಿಬಿ ಪರ ಆಡುತ್ತಿರುವ ಆಟಗಾರ ಅಂದರೆ ಅದು ವಿರಾಟ್ ಕೊಹ್ಲಿ. ಹೀಗಿರುವಾಗ ಯಾಕೆ ನೀವು ಇನ್ನೂ ಒಂದೇ ತಂಡದಲ್ಲಿ ಇದ್ದೀರಿ. ಆರ್​ಸಿಬಿ ಬಿಡಬೇಕು ಎಂದು ನಿಮಗೆ ಅನಿಸಲಿಲ್ಲವಾ ಎಂದು ಪ್ರಶ್ನೆಯನ್ನ ಕೇಳಲಾಯಿತು. ಕೊಹ್ಲಿ 2008 ರಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. 2011ರಿಂದ ತಂಡದ ನಾಯಕರಾಗಿ ಮುನ್ನೆಡಿಸಿದ್ದವರು ವಿರಾಟ್. ಅದಾದ ನಂತರ ಸತತ 10 ವರ್ಷಗಳ ಕಾಲ ಆರ್​ಸಿಬಿ ತಂಡವನ್ನ ಮುನ್ನೆಡಿಸಿದ ಕೀರ್ತಿ ಅವರಿಗೆ ಇದೆ. ಇದಕ್ಕೆ […]

Advertisement

Wordpress Social Share Plugin powered by Ultimatelysocial