ಯಾವ ಋತುವಿನಲ್ಲಿ ಯಾವ ಆಹಾರ ಸೇವನೆ ಸೂಕ್ತ!

ಯಾವ ಋತುವಿನಲ್ಲಿ ಯಾವ ಆಹಾರ ಸೇವನೆ ಸೂಕ್ತ, ಯಾವ ಆಹಾರ ನಿಷಿದ್ಧ, ಆಯಾಯ ಋತುಗಳಲ್ಲಿ ಮಾನವರನ್ನು ಕಾಡುವ ಸಾಮಾನ್ಯ ಕಾಯಿಲೆಗಳಿಗೆ ಆಹಾರ ಸೇವನಾಕ್ರಮದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳೇನು, ದೇಹದ ಪ್ರಮುಖ ಅಂಗಗಳ ರಕ್ಷಣೆ, ಆರೈಕೆ ಹೇಗೆ…ಹೀಗೆ ನಮ್ಮ ಹತ್ತು ಹಲವು ಆರೋಗ್ಯ ಸಂಬಂಧಿ ಪ್ರಶ್ನೆಗಳಿಗೆ ಆಯುರ್ವೇದದಲ್ಲಿ ಸಮರ್ಪಕವಾದ ಪರಿಹಾರ ಮಾರ್ಗೋಪಾಯಗಳನ್ನು ಸೂಚಿಸಲಾಗಿದೆ.

ಬೇಸಗೆ ಋತುವಿನ ಆಹಾರಕ್ರಮ, ಅಂಗಾಂಗಗಳ ಆರೈಕೆ ಬಗೆಗೆ ಇಲ್ಲಿ ತಜ್ಞರು ಬೆಳಕು ಚೆಲ್ಲಿದ್ದಾರೆ.

ಪ್ರಪಂಚದಲ್ಲಿ ಮನುಷ್ಯನಿಗೆ ಜೀವನಶೈಲಿಯನ್ನು ಕಲಿಸಿ ಕೊಟ್ಟ ದೇಶವೇ ಭಾರತ. ಈ ಮಾನವನ ದೇಹ ಪ್ರಕೃತಿ ಯಿಂದ ನಿರ್ಮಾಣವಾಗಿದ್ದು, ದೇಹ ನಿರ್ಮಿತ ಧಾತುಗಳಿಗೆ ಈ ಪ್ರಕೃತಿಯೇ ಮೂಲ ಪೋಷಕಾಂಶ. ಜಗತ್ತಿನಲ್ಲಿ ಎಂಥ ವರೇ ಆಗಿರಲಿ ರೋಗ, ದುಃಖ, ಮುಪ್ಪು ಹಾಗೂ ಸಾವು ಈ ನಾಲ್ಕರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇದು ತಣ್ತೀ ಜ್ಞಾನವಲ್ಲ ಪ್ರಾಕೃತಿಕ ನಿಯಮ. ಈ ಸತ್ಯವನ್ನು ಅರಿತವರು ನಾವು ಹೇಗೆ ನಮ್ಮ ಬದುಕನ್ನು ಕಾಲಕ್ಕೆ ಅನುಸಾರವಾಗಿ ನಮ್ಮ ಶರೀರವನ್ನು ಕಾಪಾಡಿಕೊಳ್ಳುವುದು?

ಆಯುರ್ವೇದ ಗ್ರಂಥವಾದ “ಅಷ್ಟಾಂಗ ಹೃದಯ’ ಎಂಬ ಪುಸ್ತಕದಲ್ಲಿ ಪ್ರತಿಯೊಂದು ಋತು ವಿನಲ್ಲಿ ಪಾಲಿಸಬೇಕಾದಂತಹ ಋತು ಚರ್ಯೆಯನ್ನು ಸವಿಸ್ತಾರವಾಗಿ ವಿವರಿಸಲಾ ಗಿದೆ. ಯಾವ ಋತುವಿನಲ್ಲಿ ಯಾವ ಆಹಾರ ಸೇವಿಸಬೇಕು, ದಿನ ನಿತ್ಯ ಯಾವ ಕರ್ಮಗಳನ್ನು ಪಾಲನೆ ಮಾಡಬೇಕು, ಯಾವು  ದನ್ನು ತ್ಯಜಿಸಬೇಕು ಎಂಬ ಬಗೆಗೆ ಇಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ.

ನಾವು ಅನುಸರಿಸುವ ಕ್ಯಾಲೆಂಡರ್‌ ಪ್ರಕಾರ 6 ಋತುಗಳಿವೆ. ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರದ್‌, ಹೇಮಂತ ಋತುಗಳು. ಪ್ರತಿಯೊಂದು ಋತುಗಳನ್ನು ಎರಡು ಮಾಸಗಳಾಗಿ ವಿಂಗಡಿಸಿದ್ದಾರೆ. ಆ ಪ್ರಕಾರ ನಾವೀಗ ಗ್ರೀಷ್ಮ -ವರ್ಷ ಋತುವಿನಲ್ಲಿ ಇದ್ದೇವೆ. ಇದನ್ನು “ಬೇಸಗೆ ಕಾಲ’ ಎನ್ನುತ್ತೇವೆ. ನಮಗೆಲ್ಲ ಬೇಸಗೆ ಕಾಲ ಬಂದ ತತ್‌ಕ್ಷಣ ನಾವು ತಂಪಾದ ಪಾನೀಯಗಳು, ಐಸ್‌ಕ್ರೀಮ್‌ಗಳು ಹಾಗೂ ಹವಾನಿಯಂತ್ರಕದ ಮೊರೆ ಹೋಗುತ್ತೇವೆ. ಇವುಗಳನ್ನು ಅನುಭವಿಸುತ್ತಾ ಆರೋಗ್ಯವನ್ನು ಪ್ರಕೃತಿಗೆ ಅನುಗುಣವಾಗಿ ಹೇಗೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದನ್ನು ಮರೆತು ಬಿಡುತ್ತೇವೆ. ಋತುವಿಗನುಗುಣ ವಾಗಿ ನಾವು ಆಹಾರ ಸೇವನೆ ಹಾಗೂ ಜೀವನಶೈಲಿಯನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ರೋಗ ಮುಕ್ತ, ಸ್ವಸ್ಥ ಆರೋಗ್ಯ ನಮ್ಮದಾಗುತ್ತದೆ.

ಒಬ್ಬ ವ್ಯಕ್ತಿ ಆರೋಗ್ಯವಂತನಾಗಿರಬೇಕಾದರೆ ಆತನ ದೇಹದಲ್ಲಿ ತ್ರಿದೋಷಗಳು (ವಾತ, ಪಿತ್ತ, ಕಫ‌) ಸಪ್ತ ಧಾತುಗಳು (ರಸ, ರಕ್ತ, ಮಾಂಸ, ಮೇಧ, ಅಸ್ಥಿ, ಮಜ್ಜ, ಶುಕ್ರ) ಹಾಗೂ ಮಲ ಕಾರ್ಯಗಳು ಸರಿಯಾದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಬೇಕು. ಆರೋಗ್ಯವಂತರಾಗಿರಲು ನಮ್ಮ ಆಹಾರಕ್ರಮ ಮತ್ತು ಅದರಲ್ಲಿರುವ ಷಡ್‌ರಸಗಳು (ಮಧುರ, ಆಮ್ಲ, ಲವಣ, ಕಟು, ರಿಕ್ತ, ಕಷಾಯ) ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಎಲ್ಲ ರುಚಿಯ ಆಹಾರವನ್ನು ಸತತ ಸೇವನೆ ಮಾಡುವುದರಿಂದ ಬಲ ವೃದ್ಧಿಯಾಗಿ ಆರೋಗ್ಯದಿಂದಿರಲು ಸಾಧ್ಯ. “ಸರ್ವರ ಸಾಭ್ಯಾಸೇ ಆರೋಗ್ಯಕರಾಣಾಮ್‌’. ನಿತ್ಯದ ನಮ್ಮ ಆಹಾರದಲ್ಲಿ ಏಕರಸ ಅಭ್ಯಾಸ ಮಾಡುವುದರಿಂದ ದೇಹ ದೌರ್ಬಲ್ಯಕ್ಕೊಳಗಾಗುತ್ತದೆ. ಹಾಗೆಯೇ ಯಾವ ರಸವೂ ಅತಿಯಾಗಬಾರದು ಹಾಗೂ ಕಡಿಮೆಯಾಗಬಾರದು.

ಆಯುರ್ವೇದ ಶಾಸ್ತ್ರದಲ್ಲಿ ಪಚನಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಕಾರಣ ನಾವು ಸೇವಿಸುವ ವಿರುದ್ಧ ಆಹಾರ ಕ್ರಮ. ಅವು ಯಾವುವೆಂದರೆ
– ಹಾಲು ಮತ್ತು ಮೀನು ಜತೆಯಲ್ಲಿ ಸೇವಿಸಬಾರದು.
– ಹಾಲಿನ ಜತೆ ಹುಳಿ ಹಣ್ಣು, ಪದಾರ್ಥಗಳನ್ನು ಸೇವಿಸಬಾರದು.
– ಮೊಸರನ್ನು ಬಿಸಿ ಮಾಡಿ ತಿನ್ನಬಾರದು.
– ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು.
– ಬಿಸಿ, ಖಾರ ಪದಾರ್ಥ ಸೇವನೆಯ ಅನಂತರ ತಂಪು ಪಾನೀಯ ಸೇವಿಸಬಾರದು.
ಈ ರೀತಿಯ ಆಹಾರ ಸೇವನೆಯನ್ನು ಆಯುರ್ವೇದದಲ್ಲಿ ತ್ಯಜಿಸಲಾಗಿದೆ.
ನಮ್ಮ ಆಹಾರ ಸೇವನೆ ಹೇಗಿರಬೇಕೆಂದರೆ ಸೇವಿಸುವವನ ದೈಹಿಕ ಪ್ರಕೃತಿಗೆ ಅನುಗುಣವಾಗಿರಬೇಕೇ ಹೊರತು, ಜೀವಸತ್ವದಿಂದ ಕೂಡಿದ್ದರೆ ಒಳ್ಳೆಯದು ಎಂದು ಎಲ್ಲವನ್ನು ತಿನ್ನುವುದಾಗಲಿ, ಕ್ರಮ ತಪ್ಪಿ ತಿನ್ನುವುದಾಗಲಿ ಸರಿಯಲ್ಲ.

ಆಹಾರ ಸೇವನಾ ಪ್ರಮಾಣ ಹೇಗಿರಬೇಕೆಂದರೆ ಹೊಟ್ಟೆಯ 2ನೆಯ ಭಾಗ ಘನಾಹಾರವೂ ಒಂದನೇಯ ಭಾಗ ದ್ರವಾ ಹಾರವೂ ನಾಲ್ಕನೆಯ ಭಾಗವನ್ನು ವಾತಾದಿ ದೋಷಗಳ ಕಾರ್ಯ ಕ್ಕಾಗಿ ಖಾಲಿ ಬಿಡಬೇಕು.

ಒಮ್ಮೆ ತಿಂದ ಆಹಾರದ ಪಚನಕ್ರಿಯೆ ಆರಂಭವಾಗಿ ಮುಗಿಯುವ ಮೊದಲೇ ಇನ್ನೊಮ್ಮೆ ಆಹಾರವನ್ನು ಸೇವಿಸುವುದು ಕ್ರಮವಲ್ಲ. ಇದರಿಂದ ಅಹಾರ ಸರಿಯಾಗಿ ಪಚನವಾಗುವುದಿಲ್ಲ. ಮಲಮೂತ್ರಗಳು ಸಕಾಲದಲ್ಲಿ ಸರಿಯಾಗಿ ದೇಹ ದಿಂದ ಹೊರಹೋಗುವುದು ಆಹಾರ ಜೀರ್ಣಿಸಿದರ ಮೊದಲ ಲಕ್ಷಣ. ದೇಹ ಪ್ರಕೃತಿಗೆ ಅನುಗುಣವಾಗಿ ಆಹಾರವನ್ನು ಸೇವಿಸಿ ಸ್ವಸ್ಥ ಆರೋಗ್ಯ ನಮ್ಮದಾಗಲಿ. ಇವುಗಳ ಜತೆಗೆ ಆತ್ಮ ಇಂದ್ರಿಯಗಳು ಕೂಡ ಪ್ರಸನ್ನತೆಯಿಂದ ಕೂಡಿರಬೇಕು. ಅದಕ್ಕಾಗಿ ನಿತ್ಯ ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮ, ಮುದ್ರೆಗಳ ಅಭ್ಯಾಸ ಉತ್ತಮ.

ಬೇಸಗೆ ಕಾಲದಲ್ಲಿ ಹಗಲು ದೀರ್ಘ‌ವಾಗಿರುವುದರಿಂದ ಮಧ್ಯಾಹ್ನ 12ರಿಂದ 2 ಗಂಟೆಯೊಳಗೆ ಊಟ ಮಾಡಬೇಕು. ಈ ಕಾಲದಲ್ಲಿ ಸೂರ್ಯನ ತಾಪ ತೀವ್ರವಾಗಿರುತ್ತದೆ. ಹಾಗೆಯೇ ವಾತ ವೃದ್ಧಿಸುತ್ತದೆ. ಆದ್ದರಿಂದ ಬೇಸಗೆ ಕಾಲದಲ್ಲಿ ನಮ್ಮ ದೇಹದ ಆರೈಕೆ ಮಾಡಿಕೊಳ್ಳುವುದು ಬಹಳ ಮುಖ್ಯ.

ಆಹಾರ ಪದ್ಧತಿ: ಈ ಗ್ರೀಷ್ಮ ಋತುವಿನಲ್ಲಿ ದೇಹದ ಉಷ್ಣಾಂಶ ಅಧಿಕವಿರುತ್ತದೆ. ಆದ್ದರಿಂದ ನಮ್ಮ ದೇಹವನ್ನು ತಂಪು ಮಾಡುವಂತಹ ಆಹಾರದ ಸೇವನೆ ಜತೆಗೆ ಲಘು ಆಹಾರ ಸೇವನೆ ಅಂದರೆ ಬೇಗನೇ ಜೀರ್ಣವಾಗುವ ಆಹಾರ.
ತರಕಾರಿ: ಸೌತೆಕಾಯಿ, ಮೂಲಂಗಿ, ಕುಂಬಳಕಾಯಿ, ಸೊಪ್ಪುಗಳು. ಹಣ್ಣುಗಳು: ಕಲ್ಲಂಗಡಿ, ದಾಳಿಂಬೆ, ಮಾವು, ಕಿತ್ತಳೆ, ಮೂಸಂಬಿ. ಪಥ್ಯ ಆಹಾರ: ತುಪ್ಪ, ಹಾಲು, ಸಕ್ಕರೆ, ಮಜ್ಜಿಗೆ. ಅಪಥ್ಯ ಆಹಾರ: ಅತಿಯಾದ ಹುಳಿ, ಉಪ್ಪು ಪದಾರ್ಥ ಸೇವನೆ ಹಾಗೂ ಮದ್ಯ ಸೇವನೆ. ಚರ್ಮದ ಆರೈಕೆ: ಬೇಸಗೆಯಲ್ಲಿ ಉಷ್ಣಾಂಶ ಜಾಸ್ತಿ ಇರುವುದರಿಂದ ಚರ್ಮದ ಕಾಯಿಲೆಗಳು ಉಂಟಾಗುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಊಟಕ್ಕೆ ಮೀನು ಫ್ರೈ ಇದ್ದರೆ ಅದರ ರುಚಿನೇ ಬೇರೆ.

Wed Apr 6 , 2022
ಊಟಕ್ಕೆ ಮೀನು ಫ್ರೈ ಇದ್ದರೆ ಅದರ ರುಚಿನೇ ಬೇರೆ. ಸುಲಭವಾಗಿ ಮಾಡುವಂತಹ ಮೀನಿನ ಫ್ರೈ ವಿಧಾನ ಇಲ್ಲಿದೆ. ನಿಮ್ಮಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಮೀನು – ಅರ್ಧ ಕೆಜಿ, ಕಾಳುಮೆಣಸು – 2 ಟೇಬಲ್ ಸ್ಪೂನ್, ಖಾರದ ಪುಡಿ – 2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಶುಂಠಿ -2 ಟೇಬಲ್ ಸ್ಪೂನ್, ಬೆಳ್ಳುಳ್ಳಿ – 2 ಟೇಬಲ್ ಸ್ಪೂನ್, ಲಿಂಬೆಹಣ್ಣಿನ ರಸ […]

Advertisement

Wordpress Social Share Plugin powered by Ultimatelysocial