ಊಟಕ್ಕೆ ಮೀನು ಫ್ರೈ ಇದ್ದರೆ ಅದರ ರುಚಿನೇ ಬೇರೆ.

ಊಟಕ್ಕೆ ಮೀನು ಫ್ರೈ ಇದ್ದರೆ ಅದರ ರುಚಿನೇ ಬೇರೆ. ಸುಲಭವಾಗಿ ಮಾಡುವಂತಹ ಮೀನಿನ ಫ್ರೈ ವಿಧಾನ ಇಲ್ಲಿದೆ. ನಿಮ್ಮಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:

ಮೀನು – ಅರ್ಧ ಕೆಜಿ, ಕಾಳುಮೆಣಸು – 2 ಟೇಬಲ್ ಸ್ಪೂನ್, ಖಾರದ ಪುಡಿ – 2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಶುಂಠಿ -2 ಟೇಬಲ್ ಸ್ಪೂನ್, ಬೆಳ್ಳುಳ್ಳಿ – 2 ಟೇಬಲ್ ಸ್ಪೂನ್, ಲಿಂಬೆಹಣ್ಣಿನ ರಸ – 3 ಟೇಬಲ್ ಸ್ಪೂನ್, ಕರಿಬೇವು – 15 ಎಸಳು, ಕೊತ್ತಂಬರಿಸೊಪ್ಪು – 1/4 ಕಪ್, ನೀರು – ಅಗತ್ಯವಿರುವಷ್ಟು, ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್, ಎಣ್ಣೆ – ಸ್ವಲ್ಪ.

ಮಾಡುವ ವಿಧಾನ:

ಒಂದು ಮಿಕ್ಸಿ ಜಾರಿಗೆ ಕಾಳುಮೆಣಸು, ಖಾರದ ಪುಡಿ, ಉಪ್ಪು, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿಸೊಪ್ಪು, ಲಿಂಬೆಹಣ್ಣಿನ ರಸ ಸೇರಿಸಿ ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಕಾರ್ನ್ ಫ್ಲೋರ್ ಸೇರಿಸಿಕೊಂಡು ಅಗತ್ಯವಿರುವಷ್ಟು ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಸ್ವಚ್ಛಗೊಳಿಸಿದ ಮೀನಿನ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ½ ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ.

ನಂತರ ಗ್ಯಾಸ್ ಮೇಲೆ ತವಾ ಇಟ್ಟು ಅದು ಬಿಸಿಯಾಗುತ್ತಲೆ ಎಣ್ಣೆ ಹಾಕಿ ನಂತರ ಈ ಮೀನಿನ ಹೋಳುಗಳನ್ನು ಹಾಕಿ ಎರಡೂ ಕಡೆ ಚೆನ್ನಾಗಿ ಬೇಯುವವರೆಗೆ ಫ್ರೈ ಮಾಡಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೆಂಗಿನಕಾಯಿಯ ದರ ಹೆಚ್ಚಾಗಬಹುದು ಎಂಬ ರೈತರು ಮತ್ತು ವ್ಯಾಪಾರಿಗಳ ನಂಬಿಕೆ!

Wed Apr 6 , 2022
ಬಸವಾಪಟ್ಟಣ: ಯುಗಾದಿ ಹಬ್ಬಕ್ಕಾದರೂ ತೆಂಗಿನಕಾಯಿಯ ದರ ಹೆಚ್ಚಾಗಬಹುದು ಎಂಬ ರೈತರು ಮತ್ತು ವ್ಯಾಪಾರಿಗಳ ನಂಬಿಕೆ ಹುಸಿಯಾಗಿದೆ. ಹಬ್ಬ ಕಳೆಯುತ್ತಿದ್ದಂತೆ ದರ ಇನ್ನೂ ಕಡಿಮೆ ಆಗುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಈ ಭಾಗದಲ್ಲಿ ಮೊದಲಿನಂತೆ ತೋಟಗಳಲ್ಲಿ ತೆಂಗನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಿಲ್ಲ. ಅಡಿಕೆ ತೋಟಗಳ ಅಂಚಿನಲ್ಲಿ ಮಾತ್ರ ತೆಂಗಿನ ಮರಗಳನ್ನು ಬೆಳೆಸುತ್ತಿದ್ದಾರೆ. ಹೀಗೆ ಬೆಳೆಯುವ ತೆಂಗಿನ ಫಸಲು ಕಡಿಮೆಯಾದರೂ ದರ ಮಾತ್ರ ಕುಂಟುತ್ತಲೇ ಸಾಗಿದೆ. ಎರಡು ವರ್ಷಗಳ ಹಿಂದೆ ಒಂದು ಕ್ವಿಂಟಲ್‌ ತೆಂಗಿಗೆ ₹ […]

Advertisement

Wordpress Social Share Plugin powered by Ultimatelysocial