2021ರಲ್ಲಿ ಬಳ್ಳಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 180 ಮಂದಿ ಸಾವು

2021ರಲ್ಲಿ ಬಳ್ಳಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 180 ಮಂದಿ ಸಾವು: ಗಣಿ ಲಾರಿಗಳು, ಹದಗೆಟ್ಟ ರಸ್ತೆಗಳು ಕಾರಣ!

ಬಳ್ಳಾರಿ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 2021 ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಬರೋಬ್ಬರಿ 180 ಮಂದಿ ಮೃತಪಟ್ಟಿದ್ದಾರೆ ಮತ್ತು ಗಣಿಗಾರಿಕೆ ಲಾರಿಗಳಿಂದ ಹೆಚ್ಚು ಅಪಘಾತಗಳು ಸಂಭವಿಸಿವೆ. ಕಳೆದ ವರ್ಷ ಲಾಕ್‌ಡೌನ್‌ ನಿಂದ ಗಣಿ ಉದ್ಯಮವು ನಿಧಾನಗತಿಯಲ್ಲಿದ್ದಾಗಲೂ ಅಪಘಾತದಲ್ಲಿ 110 ಸಾವುಗಳು ವರದಿಯಾಗಿವೆ.

ಈ ಜಿಲ್ಲೆಗಳಲ್ಲಿ ಸುಮಾರು 5,000 ಟ್ರಕ್‌ಗಳು ಗಣಿಗಾರಿಕೆ ಉತ್ಪನ್ನಗಳನ್ನು ಸಾಗಿಸುತ್ತವೆ. ಭಾರೀ ವಾಹನಗಳ ಸಂಚಾರದಿಂದ ರಸ್ತೆಯ ಸ್ಥಿತಿಯೂ ಹಾಳಾಗಿದ್ದು, ಮತ್ತಷ್ಟು ಅಪಘಾತಗಳಿಗೆ ಕಾರವಾಗಿದೆ. ಅಂಕಿಅಂಶಗಳ ಪ್ರಕಾರ, ಈ ವರ್ಷ ಸಾವನ್ನಪ್ಪಿದ 180 ಜನರಲ್ಲಿ 110 ಜನರು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಾಗಿದ್ದಾರೆ.

ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಭರತ್ ರೆಡ್ಡಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 1,650 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. “ಬಳ್ಳಾರಿ ಜಿಲ್ಲೆಯಲ್ಲಿ ಪ್ರಮುಖ ಗಣಿಗಾರಿಕೆ ಘಟಕಗಳು ಇರುವುದರಿಂದ ಗಣಿಗಾರಿಕೆ ಟ್ರಕ್‌ಗಳ ಸಂಚಾರ ಹೆಚ್ಚಾಗಿದೆ. ಕಳೆದ ವರ್ಷ ಸಾಂಕ್ರಾಮಿಕ ಲಾಕ್‌ಡೌನ್‌ನಿಂದಾಗಿ ವಾಹನಗಳ ಸಂಖ್ಯೆ ಕಡಿಮೆಯಾಗಿತ್ತು” ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುವರ್ಣಸೌಧಕ್ಕೆ ಮಾಧ್ಯಮದವರಿಗೆ ನೋ ಎಂಟ್ರಿ: ಪತ್ರಕರ್ತರ ಪ್ರತಿಭಟನೆ

Wed Dec 22 , 2021
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ದೃಶ್ಯ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಪತ್ರಕರ್ತರು ಪ್ರತಿಭಟಿಸಿದರು. ನಂತರ ಸ್ಪೀಕರ್ ಮಧ್ಯಪ್ರವೇಶದಿಂದ ಗೊಂದಲ ನಿವಾರಣೆಯಾಗಿರುವುದು ವರದಿಯಾಗಿದೆ. ವಿಧಾನಸೌಧದಲ್ಲಿ ದೃಶ್ಯ ಮಾಧ್ಯಮದ ಪರ್ತಕರ್ತರನ್ನು ಒಳಹೋಗದಂತೆ ತಡೆದಿದ್ದು, ಇದರಿಂದ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ವಿಧಾನಸೌಧದ ಒಳಹೋಗಲು ಯತ್ನಿಸಿದ ಪತ್ರಕರ್ತರನ್ನು ಪೊಲೀಸರು ತಡೆದಿದ್ದಾರೆ. ಯಾವ ಕಾರಣಕ್ಕೂ ಒಳಗೆ ಬಿಡುವುದಿಲ್ಲ ಎಂದಿದ್ದು, ಮಾಧ್ಯಮದವರು ಪ್ರತಿಭಟನೆ ನಡೆಸುವುದಕ್ಕೆ ಕಾರಣವಾಗಿದೆ. ಮತಾಂತರ ನಿಷೇಧ ಕಾಯ್ದೆ ಚರ್ಚೆ ಹಿನ್ನೆಲೆಯಲ್ಲಿ ಮಾಧ್ಯಮದವರನ್ನು ಒಳಗೆ ಬಿಡಲಿಲ್ಲ […]

Advertisement

Wordpress Social Share Plugin powered by Ultimatelysocial