5 ಸಾವಿರ ಭಕ್ತರಿಗೆ ಉಚಿತ ಪ್ರವಾಸ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡ್‌ನಲ್ಲಿ ಕ್ಷೇತ್ರದ ೫ ಸಾವಿರ ಭಕ್ತರಿಗೆ ನೂರಕ್ಕೂ ಹೆಚ್ಚು ಬಸ್‌ಗಳಲ್ಲಿ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನ, ಹೊರನಾಡು ಅನ್ನಪೊರ್ಣೇಶ್ವರಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಉಚಿತ ಪ್ರವಾಸ ಆಯೋಜಿಸಲಾಗಿತ್ತು.
ಸ್ಥಳೀಯ ಶಾಸಕರು, ವಸತಿ ಸಚಿವರಾದ ವಿ.ಸೋಮಣ್ಣರವರು ಭಕ್ತರಿಗೆ ಶುಭಕೋರಿ ಬೀಳ್ಕೊಡುಗೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ವಿ. ಸೋಮಣ್ಣರವರು ಪ್ರತಿಯೊಬ್ಬರ ಜೀವನದಲ್ಲಿ ಯಶ್ವಸಿಯ ಹಿಂದೆ ದೈವದ ಪ್ರೇರಣೆ, ಆಶೀರ್ವಾದ ಇರುತ್ತದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರು ನನ್ನ ಕುಟುಂಬದಂತೆ, ಅವರ ನೋವು-ನಲಿವುಗಳಿಗೆ ಮನೆ ಮಗನಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಜನರು ಕಷ್ಟ ಇರಲಿ, ಸುಖವೇ ಬರಲಿ ದೈವದ ಮೊರೆ ಹೋಗುತ್ತಾರೆ. ಎಲ್ಲರಿಗೂ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲು ಆನಾನುಕೂಲವಿರುತ್ತದೆ. ಭಕ್ತರಿಗೆ ಅನುಕೂಲವಾಗಲಿ ಎಂದು ಉಚಿತ ತೀರ್ಥಸ್ಥಳಗಳಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ದಾಸಶೇಷ್ಠ ಕನಕದಾಸರು ಹೇಳಿದಂತೆ ಕುಲ,ಕುಲವೆಂದು ಹೊಡೆದಾಡದಿರಿ ಎಂಬಂತೆ ಎಲ್ಲರು ನಮ್ಮವರು ಎಂದು ಕೂಡಿ ಬಾಳಬೇಕು. ತಾವು ನೀಡಿದ ಒಂದೊಂದು ಮತ ನಾನು ಗೋವಿಂದರಾಜನಗರ ಅಭಿವೃದ್ದಿ ಕೆಲಸಗಳ ಮಾಡಲು ಶಕ್ತಿ, ಧೈರ್ಯ ಬಂದಿದೆ. ಒಬ್ಬ ಕೆಲಸಗಾರ ಮಾಡಿದ ದುಡಿಮೆಗೆ ಸಂಬಳ ಬಯಸುತ್ತಾನೆ, ಅದೇ ರೀತಿಯಲ್ಲಿ ಮತದಾರ ದೇವರುಗಳ ಸೇವೆ ಮಾಡಿದ್ದೇನೆ, ನಿಮ್ಮ ಸಹಕಾರ, ಬೆಂಬಲ ಇರಲಿ ಎಂದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ೫೭ ದೇವಸ್ಥಾನಗಳನ್ನು ನವೀಕರಣವನ್ನು ಭಕ್ತ ಜನರ ಆಶಯದಂತೆ ಮಾಡಲಾಗಿದೆ. ಮಾಗಡಿರೋಡ್ ಪೊಲೀಸ್ ಠಾಣೆಯನ್ನು ನವೀಕರಣ ಮಾಡಲಾಗಿದೆ, ಡಿ.ಸಿ.ಪಿ. ಕಛೇರಿಯನ್ನು ಮಾಗಡಿರೋಡ್ ಮತ್ತು ೨ ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಇರುವ ಪ್ರಥಮ ದರ್ಜೆ ಕಾಲೇಜು ಹಾಗೂ ೧ ಕಿ.ಮೀ ಉದ್ದದ ಮೇಲ್ಸೇತುವೆಯನ್ನು ,ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣವನ್ನು ಜ. ೨೯ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.
ದಾಸರಹಳ್ಳಿ ವಾರ್ಡ್‌ನಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ತಿಂಗಳು ೧೬ ರಂದು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಯೋಗಿ ಆದಿತ್ಯನಾಥ್‌ರವರ ಅಮೃತಹಸ್ತದಿಂದ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾನೂನು ಸುವ್ಯವಸ್ಥೆಗೆ 15 ಅಂಶಗಳ ಸೂತ್ರ.

Sun Jan 22 , 2023
ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗಳನ್ನು ಕಾಪಾಡಲು ಕೇಂದ್ರ ವಲಯದ ಐ.ಜಿ.ಪಿ.ರವಿಕಾಂತೇಗೌಡರ ಸೂಚನೆಯಂತೆ ಜಿಲ್ಲೆಯಲ್ಲಿ ೧೫ ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು.ಮುಂಬರಲಿರುವ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕೈಗೊಳ್ಳಬೇಕಾದ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳ ಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದರು. ನಗರದ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರದ ಕವಾಯಿತು ಪೇರೆಡ್‌ನಲ್ಲಿ ಪೊಲೀಸರ ದೈಹಿಕ ಸಾಮಾರ್ಥ್ಯಕ್ಕೆ ಹಾಗೂ ಸಮವಸ್ತ್ರಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ಸಂದರ್ಭದಲ್ಲಿ ಕೆಲವರಿಗೆ ಹಲವು […]

Advertisement

Wordpress Social Share Plugin powered by Ultimatelysocial