ಕಾನೂನು ಸುವ್ಯವಸ್ಥೆಗೆ 15 ಅಂಶಗಳ ಸೂತ್ರ.

ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗಳನ್ನು ಕಾಪಾಡಲು ಕೇಂದ್ರ ವಲಯದ ಐ.ಜಿ.ಪಿ.ರವಿಕಾಂತೇಗೌಡರ ಸೂಚನೆಯಂತೆ ಜಿಲ್ಲೆಯಲ್ಲಿ ೧೫ ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು.ಮುಂಬರಲಿರುವ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕೈಗೊಳ್ಳಬೇಕಾದ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳ ಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದರು.
ನಗರದ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರದ ಕವಾಯಿತು ಪೇರೆಡ್‌ನಲ್ಲಿ ಪೊಲೀಸರ ದೈಹಿಕ ಸಾಮಾರ್ಥ್ಯಕ್ಕೆ ಹಾಗೂ ಸಮವಸ್ತ್ರಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ಸಂದರ್ಭದಲ್ಲಿ ಕೆಲವರಿಗೆ ಹಲವು ಸೂಚನೆಗಳನ್ನು ನೀಡಿದ ನಂತರ ಧ್ವಜಾ ವಂದನೆ ಸ್ವೀಕರಿಸಿನ ನಂತರ ಅವರು ಪೊಲೀಸರನ್ನು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ ಹಿಂದಿನ ಎಸ್.ಪಿ.ದೇವರಾಜ್ ಅವರು ಉತ್ತಮ ಮಾರ್ಗದರ್ಶನ ನೀಡಿರುವುದನ್ನು ಪಾಲಿಸುವಂತಾಗ ಬೇಕು,ಅವರಿಗೆ ನೀವು ನೀಡಿರುವಂತ ಸಹಕಾರವನ್ನು ನನಗೂ ನೀಡುವಂತಾಗ ಬೇಕು ಎಂದು ಹೇಳಿದರು,
ಜಿಲ್ಲೆಯಲ್ಲಿ ಪತ್ತೆಯಾಗದ ಪ್ರಕರಣಗಳನ್ನು ಪತ್ತೆ ಮಾಡಲು ವಿಶೇಷ ತಂಡ ರಚಿಸಲಾಗುವುದು, ತಂಡವನ್ನು ಮೇಲ್ದರ್ಜೆಗೆ ಏರಿಕೆ ಮಾಡಲು ಅಧುನಿಕ ತಂತ್ರಜ್ಞಾನದ ಪರಿಕರಗಳ ಕುರಿತು ಇಲಾಖೆಗೆ ಪ್ರಸ್ರಾವನೆ ಕಳುಹಿಲಾಗಿದೆ.ವಂಚನೆ ಪ್ರಕರಣಗಳ ತನಿಖೆಯನ್ನು ಶಕ್ತಿಮೀರಿ ಪ್ರಯತ್ನಿಸ ಬೇಕು, ಕಾನೂನು ಸುವ್ಯವಸ್ಥೆಗಳಲ್ಲಿ ಮೇಲಿನಾಧಿಕಾರಿಗಳ ಅದೇಶಗಳಿಗೆ ಕಾಯದೆ ತುರ್ತು ಸಂದರ್ಭದಲ್ಲಿ ನೀವೆ ಕ್ರಮಗಳನ್ನು ಜರುಗಿಸುವ ಅಧಿಕಾರ ಇದೆ. ಅದರೆ ಇದನ್ನು ದುರ್‍ಬಳಿಸಿ ಕೊಳ್ಳದಂತೆ ಸದ್ಬಳಿಸಿ ಕೊಳ್ಳ ಬೇಕೆಂದು ಕಿವಿ ಮಾತು ತಿಳಿಸಿದರು,
ಅಟ್ರಾಸಿಟಿ ಪ್ರಕರಣಗಳಲ್ಲಿ ವಾಸ್ತವಾಂಶ ಇದ್ದಲಿ ಎಪ್.ಐ.ಆರ್ ದಾಖಲಿಸಿ ವಿನಾಕಾರಣ ತಿರುಗಾಡಿಸ ಬೇಡಿ, ಸಿವಿಲ್ ಪ್ರಕರಣಗಳಲ್ಲಿ ಅನಗತ್ಯವಾಗಿ ಮೂಗು ತೋರಿಸಬೇಡಿ, ನಿಮಗೆ ಇರುವ ಅಧಿಕಾರ ವ್ಯಾಪ್ತಿಯನ್ನು ಮೀರಿ ಸಾರ್ವಜನಿಕರ ನಿಂದನೆಗಳಿಗೆ ಗುರಿಯಾಗಿ ಇಲಾಖೆಗೆ ಕೆಟ್ಟ ಹೆಸರು ತರಬೇಡಿ. ತಲೆ ಮರೆಸಿ ಕೊಂಡಿರುವವರ ಬಗ್ಗೆ ಪತ್ತೆ ಮಾಡಿ ಅವರಿಗೆ ಸಮಸ್ಸ್, ನೋಟಿಸ್‌ಗಳನ್ನು ಜಾರಿ ಮಾಡ ಬೇಕು, ಮಾದಕ ವಸ್ತುಗಳ ಮಾರಾಟವನ್ನು ಬಳಕೆಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಜರುಗಿಸ ಬೇಕೆಂದು ಸೂಚಿಸಿದರು.
ಮಹಿಳೆಯರು ಠಾಣೆಯ ಬಳಿ ದೂರುಗಳನ್ನು ನೀಡಲು ಬಂದಾಗ ಅಧಿಕಾರಿಗಳು ಅವರೊಂದಿಗೆ ಸೂಕ್ತವಾಗಿ ಸಂವಹನ ನಡೆಸಿ ದೂರುಗಳನ್ನು ಸ್ವೀಕರಿಸಬೇಕು.ಮಹಿಳೆಯರಿಗೆ ಸಮಸ್ಯೆಗಳಾದಾಗ ಅವರು ಠಾಣೆಗೆ ದೂರನ್ನು ನೀಡಲು ಬರುತ್ತಾರೆ. ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಡೆದ ವಿಚಾರದ ಬಗ್ಗೆ ದೂರುಗಳನ್ನು ಸ್ವೀಕರಿಸಿ ಮುಂದಿನ ಕ್ರಮವನ್ನು ವಹಿಸಬೇಕೆಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣಾ ತಂತ್ರ ಅಂತಿಮಗೊಳಿಸಿದ ಬಿಜೆಪಿ.

Sun Jan 22 , 2023
BJP: ಕರ್ನಾಟಕವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಕೇಂದ್ರ ಸಮಿತಿಯು ಇಲ್ಲಿನ ಪ್ರತಿ ವಿದ್ಯಮಾನವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊಸ ದಾಖಲೆ ಬರೆಯಲು ಸಜ್ಜಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ )ಬಿಜೆಪಿಯು (BJP) ಜಯಗಳಿಸಿ, ಅಧಿಕಾರಕ್ಕೆ ಬಂದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೊಸದೊಂದು ದಾಖಲೆಯನ್ನೇ ಬರೆದಂತೆ ಆಗುತ್ತದೆ. ಮೊದಲ ಪ್ರಧಾನಿ ಜವಾಹರ್​ ಲಾಲ್ ನೆಹರು ನಂತರ ಯಾರೊಬ್ಬರೂ ಸತತ ಎರಡು ಪೂರ್ಣ ಅವಧಿಗೆ ಅಧಿಕಾರ ನಿರ್ವಹಿಸಿದ ನಂತರ ಮೂರನೇ […]

Advertisement

Wordpress Social Share Plugin powered by Ultimatelysocial