ಕ್ವಾಲಿಪೈಯರ್‌ 1 ರಲ್ಲಿ ಚೆನ್ನೈ ಹಾಗೂ ಡೆಲ್ಲಿ ನಡುವೆ ಗೆಲುವು ಯಾರಿಗೆ..?

ಇಂದು ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌  ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಗುರು- ಶಿಷ್ಯರ ನಡುವೆ ಕಾದಾಟ ನಡಿತಿದೆ.ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಿಷಭ್‌ ಪಂತ್‌ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿ ಆಗಲಿವೆ. ಈ ರೋಚಕ ಪಂದ್ಯದಲ್ಲಿ ಗುರು ಶಿಷ್ಯರ ಕಾಳಗ ಹೇಗಿರಲಿದೆ ಅನ್ನೂ ಕುತೂಹಲ, ಮತ್ತಷ್ಟು ಇಮ್ಮಡಿಗೊಳಿಸಿದೆ.

ಲೀಗ್ ಹಂತದಲ್ಲಿ ಆಡಿರುವ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರೆ, ಲೀಗ್‌ನಲ್ಲಿ 14 ಪಂದ್ಯಗಳಲ್ಲಿ 9 ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಕ್ವಾಲಿಫೈಯರ್ ಒಂದರಲ್ಲಿ ಆಡುತ್ತಿದೆ. ಎರಡೂ ತಂಡಗಳೂ ಬಲಿಷ್ಠವಾಗಿದ್ದು ಕದನ ಕುತೂಹಲ ಮೂಡಿಸಿದೆ. ಇನ್ನೂ ಈ ಪಂದ್ಯ ದುಬೈನಲ್ಲಿ ನಡೆಯಲಿದ್ದು ಸಂಜೆ 7:30 ಕ್ಕೆ ಪ್ರಸಾರವಾಗಲಿದೆ.

 

ಆಟಗಾರರ ಸ್ಟ್ರೆಂತ್‌ ಮತ್ತು ವಿಕ್ನೆಸ್‌:

ಡೆಲ್ಲಿ ಆಟಗಾರರ ಸ್ಟ್ರೆಂತ್‌ ಹೇಳೂದಾದ್ರೆ ಆರಂಭಿರಾಗಿ ಶಿಖರ್‌ ಧವನ್‌ ಅದ್ಭತವಾಗಿ ರನ್‌ ಮಳೆ ಸುರಿಯುತಿದ್ದು ಇವರಿಗೆ ಪೃಥ್ವಿ ಶಾ ಸಾಥ್‌ ನೀಡಲಿದ್ದು,ಬೌಲರ್‌ಗಳು ಅದ್ಭತ ಪಾರ್ಮನಲ್ಲಿ ದಾಳಿ ನಡೆಸುತ್ತಿದ್ದಾರೆ.ಇನ್ನೂ ಲೀಗ್‌ನಲ್ಲಿ ಎರಡು ಪಂದ್ಯಗಳಲ್ಲು ಗೆದ್ದಿರುವ ಡೆಲ್ಲಿಗೆ ಆತ್ಮ ವಿಶ್ವಾಸ ಹೆಚ್ಚಿದೆ.ಪಂತ್‌ ಪಡೆ ಮಿಡಲ್‌ ಆರ್ಡರ್‌ ಬ್ಯಾಟ್ಸಮಾನ್‌ಗಳಿಂದ ನಿರೀಕ್ಷೆಯ ರನ್‌ಗಳು ಬರದೆ ಇರೋದು ಡೆಲ್ಲಿ ತಂಡಕೆ ತಲೆ ನೋವು ಆಗಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಸ್ಟ್ರೆಂತ್‌ ಅಂದ್ರೆ ಪಾಪ್‌ ಡು ಪ್ಲೆಸಿಸ್‌ ಹಾಗೂ ರುತುರಾಜ್‌ ಗಾಯಕ್ವಾಡ್‌ ಜೋಡಿ ಅದ್ಭುತವಾಗಿದ್ದು ,ಜಡೇಜಾ ಅವರ  ಆಲ್‌ ರೌಂಡರ್‌ ಪ್ರದರ್ಶನ ಗೇಮ್‌ ಚೇಂಜಿಂಗ್‌ ಆಗಿದ್ದು ಚೆನ್ನೈ ತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿದೆ.ಚೆನ್ನೈ ಮದ್ಯಮ ಕ್ರಮಾಂಕದ ಬ್ಯಾಟ್ಸ್ ಮಾನ್‌ಗಳು ರನ್‌ ಗಳಿಸಲೂ ಪರದಾಡುತಿದ್ದು, ದೆತ್‌ ಅಲ್ಲಿ ಉತ್ತಮ ಬೌಲಿಂಗ್‌ ಮಾಡದೆ ಇರುವುದು ಧೋನಿಗೆ ಹಿನ್ನಡೆ ಆಗಿದೆ.ಇವತ್ತು ಗೆಲ್ಲುವ ತಂಡ ನೇರವಾಗಿ ಪೈನಲ್‌ ಪ್ರವೇಶಿಸಲ್ಲಿದ್ದು, ಸೋತ ತಂಡ ಮತ್ತೋಂದು ಅವಕಾಶವನ್ನ ಪಡೆಯಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ನಿಧನ..!

Sun Oct 10 , 2021
ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ನಿಧನ ಹೊಂದಿದ್ದಾರೆ. ಕೆಲ ವರ್ಷಗಳಿಂದಲೂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಕೆಲವು ದಿನಗಳ ಹಿಂದಷ್ಟೆ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆಗೆ ಸ್ಪಂದಿಸದ ಸತ್ಯಜಿತ್ ದಡ ರಾತ್ರಿ ನಿಧನ ಹೊಂದಿದ್ದಾರೆ. ಹೆಗಡೆನಗರದಲ್ಲಿರುವ ಸತ್ಯಜಿತ್ ನಿವಾಸದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಇಸ್ಲಾಂ ಸಂಪ್ರದಾಯದಂತೆ ಅಂತಿಮಕ್ರಿಯೆ ಮಾಡಲಾಗುವುದು. ಸತ್ಯಜಿತ್ […]

Advertisement

Wordpress Social Share Plugin powered by Ultimatelysocial