ಮಹಿಳೆಯರೇ ಪ್ರತಿದಿನ 10,000 ಹೆಜ್ಜೆಗಳನ್ನ ಕಂಪ್ಲೀಟ್‌ ಮಾಡೋದಕ್ಕೆ ಆಗ್ತಿಲ್ವಾ? ಇಲ್ಲಿದೆ ಟಿಪ್ಸ್‌!

ರೋಗ್ಯವೇ ಭಾಗ್ಯ ಅಂತಾರೆ. ಆದ್ರೆ ದುಡಿಯೋ ಗೌಜಿನಲ್ಲಿ ಜನ ಆರೋಗ್ಯವನ್ನು ಮರೆತಂತಿದೆ.ಕೂತು ಕೆಲಸ ಮಾಡೋದ್ರಿಂದ ಸಿಕ್ಕಾಪಟ್ಟೆ ಕಾಯಿಲೆಗಳು ಮೈಗಂಟಿಕೊಂಡಿರುತ್ತವೆ. ಈ ಸಮಸ್ಯೆ ಪರಿಹಾರ ಹುಡ್ಕೊಂಡು ಡಾಕ್ಟರ್‌ ಹತ್ರ ಹೋದ್ರೆ ದಿನಾ ವಾಕ್‌ ಮಾಡಿ. ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆದ್ರೆ ಸಾಕು ಅಂತ ಡಾಕ್ಟರ್‌ ಸೂಚನೆಯನ್ನು ನೀಡ್ತಾರೆ.

ಇದೇ ಜೋಷ್‌ನಲ್ಲಿ ವಾಕ್‌ ಮಾಡೋದಕ್ಕೆ ಹೊರಟ ಜನ ಒಂದೇ ದಿನಕ್ಕೆ ಸುಸ್ತಾಗಿ ಹೋಗ್ತಾರೆ. ಇನ್ನೂ ನಾಳೆ ಹೇಗಪ್ಪಾ ಅಷ್ಟೊಂದು ನಡೆಯೋದು ಅನ್ನೋ ಚಿಂತೆ ಶುರುವಾಗುತ್ತದೆ.

ನೀವು ಆರೋಗ್ಯವಾಗಿರಬೇಕಾ? ಪ್ರತಿದಿನ ಹತ್ತು ಸಾವಿರ ಹೆಜ್ಜೆಗಳು ನಡೆಯಲೇಬೇಕು ಅಂತ ಶಪತ ಹಾಕಿದ್ದೀರಾ? ನಿಮ್ಮಿಂದ ಹತ್ತು ಸಾವಿರ ಹೆಜ್ಜೆಗಳನ್ನು ಇಡೋದು ಕಷ್ಟವಾಗ್ತಿದ್ಯಾ? ಎಂತವರಾದ್ರು ನಿಶ್ವಿಂತೆಯಿಂದ ಹತ್ತು ಸಾವಿರ ಹೆಜ್ಜೆಗಳನ್ನು ಆರಾಮಾಗಿ ಕಂಪ್ಲೀಟ್‌ ಮಾಡಬಹುದು. ಅದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌.

10,000 ಹೆಜ್ಜೆಗಳನ್ನು ಕಂಪ್ಲೀಟ್‌ ಮಡೋದು ಎಷ್ಟು ಮುಖ್ಯ?

ಪ್ರತಿನಿತ್ಯ ಹತ್ತುಸಾವಿರ ಹೆಜ್ಜೆಗಳನ್ನು ಕಂಪ್ಲೀಟ್‌ ಮಾಡಿದ್ರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ. 10,000 ಹೆಜ್ಜೆ ಅಂದ್ರೆ ಬರೋಬ್ಬರಿ ಐದು ಮೈಲಿಗಳು. ಅಷ್ಟಕ್ಕು ಈ ಕಾನ್ಸೆಪ್ಟ್‌ ಶುರುವಾಗಿದ್ದು ಎಲ್ಲಿಂದ? ಜಪಾನ್‌ ಕಂಪನಿಯೊಂದು 1965 ರಲ್ಲಿ ಮ್ಯಾನ್ಪೋ-ಕೀ ಎಂದು ಕರೆಯಲ್ಪಡುವ ಸಾಧನವನ್ನು ಅಭಿವೃದ್ಧಿಪಡಿಸಿತು. ಹೀಗೆಂದರೆ “10,000 ಸ್ಟೆಪ್ಸ್ ಮೀಟರ್” ಎಂದು ಇಲ್ಲಿಂದ 10,000 ಸ್ಟೆಪ್ಸ್‌ ನಡೆಯುವ ಕಲ್ಪನೆ ಶುರುವಾಗುತ್ತದೆ.

ಆದ್ರೆ ಇತ್ತೀಚಿಗೆ ಅದು ಒಂದು ರೀತಿ ಮಾರ್ಕೆಟ್‌ ಸಾಧನವಾಗಿ ಬದಲಾಗಿದೆ. ಇತ್ತೀಚಿಗೆ ಮಾರ್ಕೆಟ್‌ಗೆ ಬರುವ ಎಲ್ಲಾ ಸಾಧನಗಳು ಆರೋಗ್ಯದ ಕಿಟ್‌ ಅನ್ನು ಹೊತ್ತು ಬರುತ್ತವೆ. ಎಲ್ಲಾ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಸ್ಟೆಪ್ಸ್‌ ಕೌಂಟ್‌, ಹಾರ್ಟ್‌ಬೀಟ್‌, ರನ್ನಿಂಗ್ ಹೀಗೆ ನಮ್ಮ ದಿನನಿತ್ಯದ ಚಟುವಟಿಕೆಗೆ ಸಹಾಯ ಮಾಡುವ ಪ್ರತಿಯೊಂದು ಮಾಹಿತಿಯನ್ನು ನಾವು ಸುಲಭವಾಗಿ ತಿಳಿದುಕೊಳ್ಳಬಹುದು.

ಗೃಹಿಣಿ ಹಾಗೂ ಕೆಲಸ ಮಾಡುವ ಮಹಿಳೆಯರಿಗೆ ಉಪಯೋಗಕಾರಿ

ಆರೋಗ್ಯಕರ ಜೀವನಶೈಲಿ ಮನುಷ್ಯನಿಗೆ ತುಂಬಾನೇ ಮುಖ್ಯ. ಕೋಟ್ಯಾಂತರ ರೂಪಾಯಿ ಸಂಪಾದನೆ ಇದ್ದರೂ ಸರಿಯಾದ ಆರೋಗ್ಯ ಇಲ್ಲವಾದರೆ ಏನು ಪ್ರಯೋಜನ ಅಲ್ವಾ? ಪುರುಷರು ಬೆಳ್ಳಂ ಬೆಳಗ್ಗೆ ಎದ್ದು ನಡಿಗೆ, ವ್ಯಾಯಾಮದಲ್ಲಿ ತೊಡಗಿಸಿಕೊಂಡು ಆರೋಗ್ಯವಾಗಿರುತ್ತಾರೆ. ಆದ್ರೆ ಗೃಹಿಣಿಯರು ಅಥವಾ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬೆಳ್ಳಂ ಬೆಳಗ್ಗೆ ಹೋಗೋದು ಕಷ್ಟ. ಮನೆಯಲ್ಲಿ ಬೆಳಗ್ಗಿನ ತಿಂಡಿಯಿಂದ ಹಿಡಿದು ಮಕ್ಕಳನ್ನು ತಯಾರಿ ಮಾಡುವವರೆಗೂ ಎಲ್ಲಾ ಕೆಲಸಗಳನ್ನು ಮಾಡಲೇಬೇಕು. ಹೀಗಾಗಿ ಇಂತಹ ಮಹಿಳೆಯರಿಗೆ ಸಿಂಪಲ್‌ ಆಗಿ ಯಾವ ರೀತಿ ಹತ್ತು ಸಾವಿರ ಹೆಜ್ಜೆಗಳನ್ನು ಕಂಪ್ಲೀಟ್‌ ಮಾಡಬಹುದು ಎಂಬುವುದರ ಬಗ್ಗೆ ಕೆಲವೊಂದು ಟಿಪ್ಸ್‌ಗಳನ್ನ ಕೊಡ್ತೀವಿ. ಈ ಟಿಪ್ಸ್‌ ಫಾಲೋ ಮಾಡಿದ್ರೆ ಖಂಡಿತ ಪ್ರತಿ ನಿತ್ಯ 10,000 ಹೆಜ್ಜೆ ಪೂರ್ಣಗೊಳಿಸಿ ಆರೋಗ್ಯಕರ ಜೀವನಶೈಲಿ ನಿಮ್ಮದಾಗಿಸಿ.

1. ಗಂಟೆಗೆ ಒಮ್ಮೆ 1000 ಹೆಜ್ಜೆ ನಡೆಯಿರಿ

ಮಹಿಳೆಯರಿಗೆ ಕೆಲಸದ ಮಧ್ಯೆ ವಾಕ್‌ ಮಾಡೋದು ಕಷ್ಟ ಅನ್ನಿಸಿದ್ರೆ ಮನೆಯಲ್ಲಿಯೇ ಸಮಯ ಸಿಕ್ಕಿದಾಗ ಗಂಟೆಗೊಮ್ಮೆ ಹತ್ತು ನಿಮಿಷ ನಡೆದರೆ ಸಾಕು. ಪ್ರತಿ ಹತ್ತು ನಿಮಿಷಕ್ಕೆ ಸಾವಿರ ಹೆಜ್ಜೆಗಳನ್ನು ಸಂಪೂರ್ಣ ಮಾಡಬಹುದು. ಹೀಗೆ ಪ್ರತಿ ಗಂಟೆಗೂ ಹತ್ತು ನಿಮಿಷ ವಾಕ್‌ ಮಾಡುತ್ತಾ ಇರಿ ದಿನಕ್ಕೆ ಹತ್ತು ಸಾವಿರ ಹೆಜ್ಜೆಗಳನ್ನು ಪೂರ್ತಿ ಮಾಡಬಹುದು. ಮನೆಒಳಗೆ, ಥ್ರೆಡ್‌ಮಿಲ್‌, ಟೆರೇಸ್‌ಮೇಲೆ ಎಲ್ಲಿ ನಿಮಗೆ ಆರಾಮ ಅನ್ನಿಸುತ್ತದೋ ಅಲ್ಲಿ ವಾಕ್‌ ಮಾಡಿ ಸಾಕು.

2. ಮನೆಯಿಂದ ಹೊರಬಂದಾಗ ನಾಯಿಯನ್ನು ಕರೆದುಕೊಂಡು ಬನ್ನಿ

ಎಲ್ಲಾ ಕೆಲಸಗಳು ಮುಗಿದ ಮೇಲೆ ವಾಕ್‌ಗೆ ಅಂತ ಹೊರ ಬಂದಾಗ ಒಬ್ಬರೇ ಬರಬೇಡಿ. ಮನೆಯಲ್ಲಿ ನಾಯಿಯಿದ್ದರೆ ಅದನ್ನು ನಿಮ್ಮ ಜೊತೆ ಕರೆದುಕೊಂಡು ಬನ್ನಿ. ಆಗ ನೀವು ಕೂಡ ಕೊಂಚ ಆಕ್ಟೀವ್‌ ಆಗಿರ್ತಿರಾ. ಒಬ್ಬರೇ ಹೊರ ಬಂದರೆ ಬೇಜಾರು ಅನ್ನಿಸುತ್ತೆ ಮತ್ತು ಆಗಾಗ ಸುಸ್ತಾಗುತ್ತದೆ. ನಾಯಿ ಜೊತೆಗಿದ್ದರೆ ಅದರ ಜೊತೆ ಒಡನಾಟ ಮಾಡುತ್ತಾ ಸಾಗಬಹುದು.

3. ಸ್ಮಾರ್ಟ್‌ ವಾಚ್‌ ಬಳಸಿ

ನೀವು ನಡೆಯಲು ಶುರು ಮಾಡಿದಾಗ ಸ್ಮಾರ್ಟ್‌ ವಾಚ್‌ ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಅದು ನಿಮ್ಮ ಬಳಿ ಇದ್ದರೆ ನೀವು ಎಷ್ಟು ದೂರ ಸಾಗಿದ್ದೀರಿ ಎಂಬುವುದು ಗೊತ್ತಾಗುತ್ತದೆ. ಹಾಗೂ ಮತ್ತಷ್ಟು ನಡೆಯಲು ಹುಮ್ಮಸ್ಸು ಹೆಚ್ಚಾಗುತ್ತದೆ. ಕೊನೆಯಲ್ಲಿ ನಿಮ್ಮ ಟಾರ್ಗೆಟ್‌ ಪೂರ್ತಿಯಾದಾಗ ಖಂಡಿತ ಖಷಿ ಪಡುತ್ತೀರಿ. ಹಾಗೂ ಇದು ದಿನಾಲೂ ನಡೆಯಲು ಮತ್ತಷ್ಟು ಪ್ರೇರಣೆ ನೀಡುತ್ತದೆ.

4. ಬ್ರೇಕ್‌ ತೆಗೆದುಕೊಳ್ಳಿ

ಕೆಲಸಕ್ಕೆ ಹೋಗುವವರಾದರೆ ಕೆಲಸದ ಮಧ್ಯದಲ್ಲಿ ನಡೆಯಲು ಅವಕಾಶ ಸಿಗುವುದಿಲ್ಲ. ಆದರೆ ಊಟದ ಸಮಯದಲ್ಲಿ ಬ್ರೇಕ್‌ ಸಿಕ್ಕಾಗ ಊಟ ಮುಗಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ವಾಕ್‌ ಮಾಡಿ. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೆಯೇ ನಿಮಗೆ ಮತ್ತೆ ಕೆಲಸ ಮುಂದುವರಿಸಲು ಎನರ್ಜಿ ಸಿಗುತ್ತದೆ.

5. ವಾಹನ ಬಳಸದಿರಲು ಪ್ರಯತ್ನಿಸಿ

ನೀವು ವಾಕ್‌ಗೆ ತೆರಳುವ ಜಾಗ ನಿಮ್ಮ ಮನೆಗೆ ಹತ್ತಿರವಾಗಿದ್ದರೆ ಆದಷ್ಟು ನಡೆದುಕೊಂಡು ಹೋಗಲು ಪ್ರಯತ್ನಿಸಿ. ಒಂದು ವೇಳೆ ತುಂಬಾ ದೂರವಿದ್ದಾಗ ಮಾತ್ರ ವಾಹನ ಬಳಸಿ ಆದಷ್ಟು ನೀವು ನಡೆಯುವ ಜಾಗದಿಂದ ವಾಹನವನ್ನು ದೂರವಿಟ್ಟು ಅಲ್ಲಿಂದಲೇ ನಡೆದುಕೊಂಡು ಹೋಗಿ.

6. ಹಾಡು ಕೇಳುತ್ತಾ ನಡೆಯಿರಿ

ನೀವು ಒಬ್ಬರೆ ವಾಕಿಂಗ್‌ಗೆ ಹೋಗುವುದಾದರೆ ಇಯರ್‌ ಫೋನ್‌ ಬಳಸಿ ಹಾಡು ಕೇಳುತ್ತಾ ನಡೆಯಿರಿ. ನಿಮಗಿಷ್ಟದ ಹಾಡು ಕೇಳುತ್ತಾ ನಡೆದಂತೆ ನಡೆಯಲು ಮತ್ತಷ್ಟು ಹುಮ್ಮಸ್ಸು ಬರುತ್ತದೆ. ಇಲ್ಲವಾದರೆ ನಿಮ್ಮ ಆಪ್ತರಿಗೆ ಫೋನ್‌ ಮಾಡಿ ಮಾತನಾಡಿ. ಮಾತನಾಡುತ್ತಾ ಸಾಗಿದಂತೆ ನಿಮಗೆ ಆಯಾಸ ಅನ್ನಿಸುವುದಿಲ್ಲ.

7. ಜೊತೆಗಾರರ ಜೊತೆಗೆ ವಾಕಿಂಗ್‌ ಹೋಗಿ

ನೀವು ಒಬ್ಬರೆ ವಾಕಿಂಗ್‌ಗೆ ಹೋದರೆ ಬೋರ್‌ ಅನ್ನಿಸಬಹುದು. ಅದರ ಬದಲಿಗೆ ನಿಮ್ಮ ಸ್ನೇಹಿತೆಯರನ್ನು ಕರೆದುಕೊಂಡು ಹೋಗಿ. ಸ್ನೇಹಿತರು ಜೊತೆಗಿದ್ದಾಗ ಆರಾಮಾಗಿ ನಡೆದುಕೊಂಡು ಹೋಗಬಹುದು.

8. ಗುರಿ ಇಟ್ಟುಕೊಳ್ಳಿ

ಪ್ರತಿನಿತ್ಯ ಹತ್ತು ಸಾವಿರ ಹೆಜ್ಜೆಗಳನ್ನು ಸಂಪೂರ್ಣ ಮಾಡಲೇಬೇಕು ಎಂಬ ಗುರಿ ಇಟ್ಟುಕೊಳ್ಳಿ. ಚಹಾ ಅಥವಾ ಕಾಫಿ ಕುದಿಯುತ್ತಿರುವಾಗಲೂ ಎಷ್ಟು ಆಗುತ್ತೋ ಅಷ್ಟು ಹೆಜ್ಜೆಗಳನ್ನು ಅಡುಗೆ ಕೋಣೆಯಲ್ಲೇ ವಾಕ್‌ ಮಾಡಿ. ಈ ರೀತಿ ಏನಾದರೂ ಸರಿ ಹತ್ತು ಸಾವಿರ ಹೆಜ್ಜೆಗಳನ್ನು ಸಂಪೂರ್ಣಗೊಳಿಸದೇ ಬಿಡುವುದಿಲ್ಲ ಎಂಬ ಕಿಚ್ಚು ನಿಮ್ಮಲಿರಲಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಚೀನಾ ದಕ್ಷತೆಯಿಂದ ವರ್ತಿಸಲಿ.

Wed Mar 1 , 2023
  ಕೊರೊನಾ ಮೂಲದ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕೋವಿಡ್-೧೯ ಸಾಂಕ್ರಾಮಿಕದ ಉಗಮದ ಬಗ್ಗೆ ಚೀನಾ ಮತ್ತಷ್ಟು ಪ್ರಾಮಾಣಿಕವಾಗಿ ವರ್ತಿಸಬೇಕು ಎಂದು ಚೀನಾದಲ್ಲಿನ ಅಮೆರಿಕಾ ರಾಯಭಾರಿ ನಿಕೋಲಾಸ್ ಬರ್ನ್ಸ್ ತಿಳಿಸಿದ್ದಾರೆ.ಚೀನಾದ ಪ್ರಯೋಗಾಲಯದ ಸೋರಿಕೆಯಿಂದ ಕೋವಿಡ್-೧೯ ಸಾಂಕ್ರಾಮಿಕ ರೋಗ ಹುಟ್ಟಿಕೊಂಡಿದೆ ಎಂಬ ಅಮೆರಿಕಾದ ಇಂಧನ ಇಲಾಖೆಯ ವರದಿಯ ಬಳಿಕ ನಿಕೋಲಾಸ್ ಬರ್ನ್ಸ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಯುಎಸ್ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮದಲ್ಲಿ ವಿಡಿಯೋ ಲಿಂಕ್ ಮೂಲಕ ಮಾತನಾಡಿದ […]

Advertisement

Wordpress Social Share Plugin powered by Ultimatelysocial