ಕೋವಿಡ್ ಚೀನಾ ದಕ್ಷತೆಯಿಂದ ವರ್ತಿಸಲಿ.

 

ಕೊರೊನಾ ಮೂಲದ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕೋವಿಡ್-೧೯ ಸಾಂಕ್ರಾಮಿಕದ ಉಗಮದ ಬಗ್ಗೆ ಚೀನಾ ಮತ್ತಷ್ಟು ಪ್ರಾಮಾಣಿಕವಾಗಿ ವರ್ತಿಸಬೇಕು ಎಂದು ಚೀನಾದಲ್ಲಿನ ಅಮೆರಿಕಾ ರಾಯಭಾರಿ ನಿಕೋಲಾಸ್ ಬರ್ನ್ಸ್ ತಿಳಿಸಿದ್ದಾರೆ.ಚೀನಾದ ಪ್ರಯೋಗಾಲಯದ ಸೋರಿಕೆಯಿಂದ ಕೋವಿಡ್-೧೯ ಸಾಂಕ್ರಾಮಿಕ ರೋಗ ಹುಟ್ಟಿಕೊಂಡಿದೆ ಎಂಬ ಅಮೆರಿಕಾದ ಇಂಧನ ಇಲಾಖೆಯ ವರದಿಯ ಬಳಿಕ ನಿಕೋಲಾಸ್ ಬರ್ನ್ಸ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಯುಎಸ್ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮದಲ್ಲಿ ವಿಡಿಯೋ ಲಿಂಕ್ ಮೂಲಕ ಮಾತನಾಡಿದ ಬರ್ನ್ಸ್, ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯನ್ನು ಹೆಚ್ಚು ಬಲಪಡಿಸಬೇಕಾದರೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ (ಡಬ್ಲ್ಯುಹೆಚ್‌ಒ) ಹೆಚ್ಚು ಸಕ್ರಿಯ ಪಾತ್ರ ವಹಿಸುವ ನಿಟ್ಟಿನಲ್ಲಿ ಚೀನಾವನ್ನು ಮತ್ತಷ್ಟು ಎಚ್ಚರಿಸುವ ಅಗತ್ಯವಿದೆ. ಅಲ್ಲದೆ ಕೋವಿಡ್-೧೯ ಸೋಂಕಿನ ಉಗಮದ ಬಗ್ಗೆ ಕಳೆದ ಮೂರು ವರ್ಷಗಳ ಹಿಂದೆ ವುಹಾನ್‌ನ ಲ್ಯಾಬ್‌ನಲ್ಲಿ ಏನು ನಡೆಯಿತು ಎಂಬ ಬಗ್ಗೆ ಚೀನಾ ಪ್ರಾಮಾಣಿಕವಾಗಿ ವರ್ತಿಸಬೇಕಿದೆ. ಸದ್ಯ ಚೀನಾ-ಅಮೆರಿಕಾ ನಡುವೆ ಕಠಿಣ ಪರಿಸ್ಥಿತಿ ಏರ್ಪಟ್ಟಿದೆ. ನಾವು ಈಗ ಈ ಅತಿವಾಸ್ತವಿಕ ಕ್ಷಣದಲ್ಲಿದ್ದೇವೆ. ಸದ್ಯ ಬಲೂನ್ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಜಾಗತಿಕವಾಗಿ ಚರ್ಚೆಯಲ್ಲಿ ಸೋಲುಂಡಿದೆ ಎಂದು ಭಾವಿಸಿಸುತ್ತೇನೆ. ಸದ್ಯ ಪ್ರಪಂಚದಾದ್ಯಂತ ಪ್ರಭಾವ ಹಾಗೂ ವಿಶ್ವಾರ್ಹತೆಯನ್ನು ಚೀನಾದವರು ಕಳೆದುಕೊಂಡಿದ್ದಾರೆ. ಇದೀಗ ಅವರು ನಮ್ಮ ಮೇಲೆ ದೂಷಿಸುತ್ತಿದ್ದಾರೆ. ಆದರೆ ಎಲ್ಲರೂ ಸತ್ಯ ಏನೆಂದು ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಣ್ಣಿನ ಆರೋಗ್ಯಕ್ಕಾಗಿ ಈ ವ್ಯಾಯಾಮಗಳನ್ನು ಫಾಲೋ ಮಾಡಿ!

Wed Mar 1 , 2023
ಕಣ್ಣುಗಳ ಒತ್ತಡ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಹೆಚ್ಚಿಸಲು ಕೆಲವು ಕಣ್ಣಿನ ಸ್ನಾಯು ವ್ಯಾಯಾಮಗಳು ಇಲ್ಲಿವೆ. ಇವುಗಳನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಪ್ರಯತ್ನಿಸಬಹುದು.ಹೆಚ್ಚಿನ ಜನರು ಸಾಮಾನ್ಯವಾಗಿ ಉತ್ತಮ ಮತ್ತು ಆರೋಗ್ಯಕರಜೀವನಶೈಲಿಗಾಗಿ ವ್ಯಾಯಾಮದ ಮೂಲಕ ದೇಹವನ್ನು ದಂಡಿಸಲು ಮುಂದಾಗುತ್ತಾರೆ. ಆದರೆ ಉತ್ತಮ ಕಣ್ಣಿನ ದೃಷ್ಟಿಗಾಗಿ ಕಣ್ಣಿನ ವ್ಯಾಯಾಮಗಳುಇದೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಕಣ್ಣುಗಳನ್ನು ಆರೋಗ್ಯಗೊಳಿಸಲು ಈ ಕೆಳಗಿನ ವ್ಯಾಯಾಮಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಿ. ಕಣ್ಣುಗಳ ಒತ್ತಡ ಮತ್ತು […]

Advertisement

Wordpress Social Share Plugin powered by Ultimatelysocial