ಮೂಲಂಗಿ ದೋಸೆ ಮಾಡುವ ವಿಧಾನ : Radish waffle : Speed news kannada Banglore

 

 

 

 

ಬೇಕಾಗುವ ಪದಾರ್ಥಗಳು

 

ಅಕ್ಕಿ-250 ಗ್ರಾಂ

ಮೂಲಂಗಿ- 2

ತೆಂಗಿನಕಾಯಿ ತುರಿ- ಒಂದು ಸಣ್ಣ ಬಟ್ಟಲು

ಹಸಿಮೆಣಸಿನ ಕಾಯಿ- 2-3

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು

ಜೀರಿಗೆ-ಅರ್ಧ ಚಮಚ

ಮಾಡುವ ವಿಧಾನ…

 

ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಯಲು ಬಿಡಬೇಕು. ನಂತರ ಮೂಲಂಗಿಯನ್ನು ಚೆನ್ನಾಗಿ ತೊಳೆದು ಕೊಬ್ಬರಿ ತುರಿಯುವ ಮಣೆಯಲ್ಲಿ ತುರಿದುಕೊಳ್ಳಬೇಕು.

ಅಕ್ಕಿ ನೆಂದ ಬಳಿಕ ನೀರನ್ನು ಬಸಿದು, ಇದರ ಜೊತೆಗೆ ಹಸಿಮೆಣಸಿನ ಕಾಯಿ, ತುರಿದುಕೊಂಡ ಮೂಲಂಗಿ ಹಾಗೂ ತೆಂಗಿನ ತುರಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಉಪ್ಪು, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ತಟ್ಟೆ ಮುಚ್ಚಿ ಇಡಬೇಕು.

ನಂತರ ಕಾವಲಿಯನ್ನು ಒಲೆಯ ಮೇಲಿಟ್ಟು, ಕಾವಲಿ ಕಾದ ನಂತರ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಬೇಯಿಸಿದರೆ, ರುಚಿಕರವಾದ ಹಾಗೂ ಆರೋಗ್ಯಕರವಾದ ಮೂಲಂಗಿ ದೋಸೆ ಸವಿಯಲು ಸಿದ್ಧ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೇಲದ ಹಣ್ಣು ಬಹುಪಯೋಗಿ. The fruit of the fern.Speed news kannada

Fri Jan 14 , 2022
    ಇದು ರಕ್ತ ಶುದ್ಧೀಕರಣ ಮಾಡಲು ಸಹಾಯ ಮಾಡುತ್ತದೆ, ಇದರಲ್ಲಿ ಖನಿಜಾಂಶಗಳು ಸಮೃದ್ಧವಾಗಿರುವುದರಿಂದ ದೇಹದಿಂದ ಎಲ್ಲಾ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಕಾರಿ.ಇದು ನೈಸರ್ಗಿಕ ಡಿಟಾಕ್ಸಿಫೈಯಿಂಗ್ ಏಜೆಂಟ್ ಮತ್ತು ಹೀಗಾಗಿ, ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ತೊಂದರೆಗಳನ್ನು ತಡೆಯುತ್ತದೆ. ಆಸ್ತಮಾ ವಿರೋಧಿ ಗುಣಲಕ್ಷಣಗಳಿಂದ ಕೂಡಿದ ಬೇಲದ ಹಣ್ಣು, ನೆಗಡಿ, ಕೆಮ್ಮು ಮತ್ತು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ  ಪ್ರಯೋಜನ ನೀಡುತ್ತದೆ. ಬ್ರಾಂಕೈಟಿಸ್ ಮತ್ತು ಆಸ್ತಮಾ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹ […]

Advertisement

Wordpress Social Share Plugin powered by Ultimatelysocial