ಶತಶೃಂಗ ಬೆಟ್ಟ, ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕೋಲಾರ

ಶತ ಶೃಂಗ ಬೆಟ್ಟ, ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕೋಲಾರ ನಗರವನ್ನು ತನ್ನ ಮಡಿಲಲ್ಲಿ ಇಟ್ಟಿಕೊಂಡಿರುವ ಅಂತರಗಂಗೆ ಇದೀಗ ನೋಡುಗರ ಮೈ ಮರೆಸುವಂತಿದೆ. ಬಿಸಿಲಿನ ಬೇಗೆಗೆ ಇಷ್ಟು ದಿನ ಬರುಡಾಗಿದ್ದ, ಶತ ಶೃಂಗ ಬೆಟ್ಟ ಇದೀಗ ಹಚ್ಚ ಹಸಿರಿನಿಂದ ಕೂಡಿ ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆದಿದೆ. ಕಳೆದ ವಾರದಿಂದ ನಿರಂತರವಾಗಿ ಸುರಿದ ಬಾರಿ ಮಳೆಯಿಂದ ದಕ್ಷಿಣ ಕಾಶಿ ಅಂತರ ಗಂಗೆ ಈಗ ಜೋಗ ಜಲಪಾತದಂತೆ ನೀರು ಝಲುಪಿಸುತ್ತಿದ್ದು, ಅದನ್ನು ಇಲ್ಲಿನ ಪರಿಸರ ಪ್ರೇಮಿಗಳು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನೂ ಈ ಪರಿಸರದ ರೋಮಾಂಚನವನ್ನು ಅನುಭವಿಸಲು ಪರಿಸರ ಪ್ರೇಮಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹ

Mon Jul 20 , 2020
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಗೆ. ಬರುವ ಸೋಮನಮರಡಿ,ಗಲಗ, ಚಿಂಚೋಡಿ, ಅಮಪೂರ, ಮುಂಡರಗಿ ಜಾಲಹಳ್ಳಿಗಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಮನವಿ ಪತ್ರದಲ್ಲಿ ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ  ಮೂಲಭೂತ ಸೌಕರ್ಯಗಳ […]

Advertisement

Wordpress Social Share Plugin powered by Ultimatelysocial