ಶಿವಾಜಿಯ ‘ವಾಘ್ ನಖ್’ ಡ್ಯಾಗರ್ ಬ್ರಿಟನ್‌ನಿಂದ ವಾಪಸ್ ತರಲಾಗುವುದು: ಕೇಂದ್ರ

ನವದೆಹಲಿ: ಮರಾಠ ರಾಜ ಛತ್ರಪತಿ ಶಿವಾಜಿಗೆ ಸಂಬಂಧಿಸಿದ ಅಪರೂಪದ ಕಲಾಕೃತಿಯನ್ನು ಯುನೈಟೆಡ್ ಬ್ರಿಟನ್‌ನಿಂದ ಸ್ವದೇಶಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಚಿವಾಲಯವು, ‘ನಮ್ಮ ಅಮೂಲ್ಯವಾದ ಕಲಾಕೃತಿಗಳನ್ನು ಸ್ವದೇಶಕ್ಕೆ ವಾಪಸ್ ತರುತ್ತಿರುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಗೆಲುವು’ ಎಂದು ಅದು ಹೇಳಿದೆ.

ಶನಿವಾರ ದೆಹಲಿಯಲ್ಲಿ ಆರಂಭವಾದ ಜಿ 20 ನಾಯಕರ ಶೃಂಗಸಭೆಯ ಸಂದರ್ಭದಲ್ಲೇ ಈ ಘೋಷಣೆ ಆಗಿದೆ.

‘ನಮ್ಮ ವೈಭವಯುತ ಪರಂಪರೆ ಮರಳುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ ‘ವಾಘ್ ನಖ್’ ಭಾರತಕ್ಕೆ ಮರಳಲು ಸಜ್ಜಾಗಿದ್ದು, ವಿಜಯೋತ್ಸಾಹ ಮುಂದಾಗಿ’ಎಂದು ಸಚಿವಾಲಯ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ಪೋಸ್ಟ್‌ನೊಂದಿಗೆ #CultureUnitesAll ಮತ್ತು #G20India ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದೆ.

ಸಚಿವಾಲಯವು “India reclaims its history’ ಎಂಬ ಅಡಿಬರಹನ್ನು ಹೊಂದಿರುವ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದೆ. ‘ವಾಘ್ ನಖ್’ ಅನ್ನು ಅಫ್ಜಲ್ ಖಾನ್‌ನನ್ನು ಸೋಲಿಸಲು ಬಳಸಿದ ಅಸ್ತ್ರ’ ಎಂದು ಉಲ್ಲೇಖಿಸಲಾಗಿದೆ.ವಾಘ್ ನಖ್ ಮೊದಲು ಯಾರ ಬಳಿ ಇತ್ತೆಂಬ ಬಗ್ಗೆ ಬೇರೆ ಬೇರೆ ಉಲ್ಲೇಖಗಳಿವೆ. ವಿಷಪೂರಿತ ವಾಘ್ ನಖ್ ಅನ್ನು ರಜಪೂತರು ಶತ್ರುಗಳ ಹತ್ಯೆಗೆ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಬಿಜಾಪುರದ ಸೇನಾಪತಿ ಅಫ್ಜಲ್ ಖಾನ್‌ನನ್ನು ಕೊಲ್ಲಲು ಬಿಚುವಾ ಮತ್ತು ವಾಘ್ ನಖ್ ಅನ್ನು ಮೊದಲು ಬಳಸಿದ್ದು ಮರಾಠ ನಾಯಕ ಛತ್ರಪತಿ ಶಿವಾಜಿ ಎಂಬ ಉಲ್ಲೇಖಗಳೂ ಇವೆ. ಇದು ನಿಹಾಂಗ್ ಸಿಖ್ಖರ ಜನಪ್ರಿಯ ಆಯುಧವಾಗಿದೆ. ಅಪಾಯಕಾರಿ ಪ್ರದೇಶಗಳಿಗೆ ಒಂಟಿಯಾಗಿ ಹೋಗುವಾಗ ನಿಹಾಂಗ್ ಮಹಿಳೆಯರು ವಾಘ್ ನಖ್ ಅನ್ನು ಒಯ್ಯುತ್ತಿದ್ದರು ಎಂಬ ಮಾತುಗಳಿವೆ.

Please follow and like us:

tmadmin

Leave a Reply

Your email address will not be published. Required fields are marked *

Next Post

Ram Mandir: 2024ರ ಜನವರಿ 22ಕ್ಕೆ ರಾಮಮಂದಿರ ಲೋಕಾರ್ಪಣೆ; ಮೋದಿಯಿಂದಲೇ ಚಾಲನೆ, 4 ದಿನ ಪೂಜೆ

Sun Sep 10 , 2023
ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ (Ram Mandir) ಚಾಲನೆ ನೀಡಲು ದಿನಾಂಕ ನಿಗದಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2024ರ ಜನವರಿ 22ರಂದು ರಾಮಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮಮಂದಿರ ಲೋಕಾರ್ಪಣೆಗೆ ಈಗಾಗಲೇ ಭರದ ಸಿದ್ಧತೆಗಳು ಆರಂಭವಾಗಿದೆ ಎಂದೂ ತಿಳಿದುಬಂದಿದೆ. ‘ಜನವರಿ 21ರಿಂದ 24ರವರೆಗೆ ಒಳ್ಳೆಯ ಮುಹೂರ್ತಗಳಿವೆ. ಈ ದಿನಾಂಕದಲ್ಲೇ ರಾಮಮಂದಿರ ಲೊಕಾರ್ಪಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರವನ್ನು ದೇಶಕ್ಕೆ […]

Advertisement

Wordpress Social Share Plugin powered by Ultimatelysocial