ಶ್ರೀದೇವಿ ಕೊನೆಯದಾಗಿ ನನ್ನನ್ನು ಅಪ್ಪಕೊಂಡಿದ್ದಳು

ನಟಿ ಶ್ರೀದೇವಿಯ ಸೌಂದರ್ಯಕ್ಕೆ ಕೋಟ್ಯಂತರ ಅಭಿಮಾನಿಗಳು. ಅವರು ಅಗಲಿದ್ದರೂ ಸಹ ಅವರ ಸೌಂದರ್ಯ ಕಣ್ಣಿನಿಂದ ಮರೆಯಾಗಿಲ್ಲ. ಶ್ರೀದೇವಿ ಅವರ ಸಿನಿ ಪಯಣದ ಆರಂಭದ ದಿನಗಳಲ್ಲಿ ಅವರ ಸೌಂದರ್ಯಕ್ಕೆ ಮಾರುಹೋದವರೆಷ್ಟೋ. ಕೇವಲ ಸಿನಿ ಪ್ರೇಕ್ಷಕರು ಮಾತ್ರವಲ್ಲ, ನಟ-ನಿರ್ದೇಶಕರೂ ಸಹ ಶ್ರೀದೇವಿ ಅವರ ಅಭಿಮಾನಿಗಳಾಗಿದ್ದರು. ಆದರೆ ಅಂತಹ ಸುರ ಸುಂದರಿಯನ್ನು ವಿವಾಹವಾಗುವ ಅವಕಾಶ ತಾನಾಗಿಯೇ ಹುಡುಕಿಕೊಂಡು ಬಂದರೂ ಸಹ ಬೇಡ ಎಂದು ದೂರ ಸರಿದಿದ್ದರಂತೆ ಖ್ಯಾತ ನಟ ಕಮಲ್ ಹಾಸನ್. ಕಮಲ್ ಹಾಸನ್-ಶ್ರೀದೇವಿ ಬಹು ಆಪ್ತರಾಗಿದ್ದರು..

ಶ್ರೀದೇವಿ ಅವರ ಆರಂಭದ ದಿನಗಳಲ್ಲಿ ಕಮಲ್ ಹಾಸನ್ ಸಾಕಷ್ಟು ಸಹಾಯ ಮಾಡಿದ್ದರಂತೆ. ಕಮಲ್ ಹಾಸನ್ ಕುಟುಂಬ ಮತ್ತು ಶ್ರೀದೇವಿ ಕುಟುಂಬ ಪರಸ್ಪರ ಆಪ್ತವಾಗಿದ್ದವು. ಶ್ರೀದೇವಿ ತಾಯಿ ಕಮಲ್ ಹಾಸನ್ ಅನ್ನು ಕೇಳಿದ್ದರು ಒಮ್ಮೆ ಶ್ರೀದೇವಿ ತಾಯಿ ರಾಜೇಶ್ವರಿ ಅವರು ಕಮಲ್ ಬಳಿ, ‘ನನ್ನ ಮಗಳನ್ನು ನೀವು ಮದುವೆ ಏಕಾಗಬಾರದು’ ಎಂದು ಕೇಳಿದ್ದರಂತೆ. ಆದರೆ ಈ ಮನವಿಯನ್ನು ಕಮಲ್ ಹಾಸನ್ ನಿರಾಕರಿಸಿದರಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಶ್ರೀದೇವಿಯನ್ನು ಮದುವೆ ಆಗಲಿಲ್ಲ ಕಮಲ್ ಹಾಸನ್ ‘ಶ್ರೀದೇವಿ ನಾನು ಎಷ್ಟು ಒಳ್ಳೆಯ ಗೆಳೆಯರಾಗಿದ್ದೆವೆಂದರೆ ಇಬ್ಬರೂ ಒಂದೇ ಕುಟುಂಬದವರಂತೆ ಇದ್ದೆವು. ಶ್ರೀದೇವಿ ನಮ್ಮ ಕುಟುಂಬದವರೇ ಎಂದು ನಾನು ಅಂದುಕೊಂಡಿದ್ದೆ. ‘ನನ್ನದೇ ಕುಟುಂಬದವರನ್ನು ನಾನು ಹೇಗೆ ಮದುವೆ ಆಗಲಿ, ಹಾಗಾಗಿ ಶ್ರೀದೇವಿಯೊಂದಿಗೆ ಮದುವೆ ಆಗುವ ಅವಕಾಶವನ್ನು ನಾನು ಒಪ್ಪಿಕೊಳ್ಳಲಿಲ್ಲ’ ಎಂದು ಕಮಲ್ ಹಾಸನ್ ಹೇಳಿದ್ದಾರೆ. ನಮ್ಮಿಬ್ಬರ ಆತ್ಮೀಯತೆಯಿಂದ ನಮ್ಮ ನಡುವೆ ಪ್ರೇಮವಿದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ ಅದು ಹಾಗಿರಲಿಲ್ಲ. ಶ್ರೀದೇವಿ ಎಂದೂ ಸಹ ನನ್ನನ್ನು ಹೆಸರಿನಿಂದ ಕರೆದಿದ್ದೇ ಇಲ್ಲ. ಯಾವಾಗಲೂ ಸರ್ ಎಂದೇ ಕರೆಯುತ್ತಿದ್ದರು. ಶ್ರೀದೇವಿ ಅವರನ್ನು ಕೊನೆಯ ಬಾರಿಗೆ ನೋಡಿದ್ದ ಘಟನೆ ಬಗ್ಗೆ ಮಾತನಾಡಿರುವ ಅವರು, ನಾನೊಂದು ಕಾರ್ಯಕ್ರಮದಲ್ಲಿ ಆಕೆಯನ್ನು ಭೇಟಿಯಾಗಿದ್ದೆ, ಅಂದು ಆಕೆ ನನ್ನನ್ನು ಅಪ್ಪಿಕೊಂಡರು. ಸಾಮಾನ್ಯವಾಗಿ ಹಾಗೆ ಆಕೆ ಮಾಡುತ್ತಿರಲಿಲ್ಲ. ಅದೇ ಕೊನೆ ಶ್ರೀದೇವಿಯನ್ನು ನಾನು ನೋಡಿದ್ದು’ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಚೀನಾ ಪರ ನಿಂತ WHO

Tue May 5 , 2020
ನ್ಯೂಯಾರ್ಕ್: ಕೊರೊನಾ ವೈರಸ್ ಮಾನವ ನಿರ್ಮಿತ ಇದು ಚೀನಾ ಲ್ಯಾಬ್‌ನಲ್ಲಿಯೇ ಸೃಷ್ಟಿಯಾಗಿದೆ ಎಂದು ಅಮೆರಿಕ ಹೇಳುತ್ತಿದ್ದು, ಆದರೆ ಯಾವುದೇ ಸಾಕ್ಷ್ಯಗಳು ಅವರ ಬಳಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಮೆರಿಕಾದಲ್ಲಿ ನಾವು ಆತಂಕದಿಂದ ಬದುಕ್ತಿದ್ದೀವಿ, ಭಾರತ ನೋಡಿ ಅಮೆರಿಕಾ ಬುದ್ಧಿ ಕಲಿಯಬೇಕು ಎಂದು ಭಾರತೀಯ ಮೂಲದ ಅಮೇರಿಕಾ ನಿವಾಸಿ ಹೇಳಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಕೊರೊನಾ ನೈಸರ್ಗಿಕವೇ ಅಥವಾ ಮಾನವ ನಿರ್ಮಿತವೇ ಎಂಬ ವಾದ ವಿವಾದಗಳು ನಡೆಯುತ್ತಲೇ […]

Advertisement

Wordpress Social Share Plugin powered by Ultimatelysocial