ಷೇರು ಮಾರುಕಟ್ಟೆಯು ಬುಧವಾರ ಭಾರೀ ಇಳಿಕೆ ಕಂಡಿದೆ ̤

ಷೇರು ಮಾರುಕಟ್ಟೆಯು ಬುಧವಾರ ಭಾರೀ ಇಳಿಕೆ ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಸುಮಾರು ಶೇಕಡ 1.60ರಷ್ಟು ಕುಸಿದಿದೆ. ಫೆಬ್ರವರಿ 22ರಂದು ಸ್ಟಾಕ್ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 927.74 ಅಂಕ ಅಥವಾ ಶೇಕಡ 1.53ರಷ್ಟು ಕುಸಿದಿದ್ದು, 59,744.98ಕ್ಕೆ ತಲುಪಿದೆ.

ನಿಫ್ಟಿ 272.40 ಅಂಕ ಅಥವಾ ಶೇಕಡ 1.53ರಷ್ಟು ಇಳಿದು 17,554.30ಕ್ಕೆ ತಲುಪಿದೆ. 928 ಷೇರುಗಳು ಏರಿಕೆಯಾದರೆ, 2451 ಷೇರುಗಳು ಕುಸಿತ ಕಂದಿದೆ, 127 ಷೇರುಗಳು ಸ್ಥಿರವಾಗಿದೆ.

ಎಲ್ಲ ಸೆಕ್ಟರ್‌ಗಳು ರೆಡ್‌ ಜೋನ್‌ನಲ್ಲಿದ್ದು, ಶೇಕಡ 2.54ರಷ್ಟು ಕುಸಿದಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಬಜಾಜ್ ಫೈನಾನ್ಸ್ ಪ್ರಮುಖವಾಗಿ ನಷ್ಟವನ್ನು ಕಂಡಿದೆ. ಐಟಿಸಿ, ಬಜಾಜ್ ಆಟೋ, ದಿವೀಸ್ ಲ್ಯಾಬೋರೇಟರಿಸ್ ಸ್ಟಾಕ್ ಲಾಭವನ್ನು ಕಂಡಿದೆ. ಸ್ಟಾಕ್ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ 5 ಕಾರಣಗಳನ್ನು ನಾವಿಲ್ಲಿ ವಿವರಿಸಿದ್ದೇವೆ, ಮುಂದೆ ಓದಿ…

ಸ್ಟಾಕ್ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣವೇನು?

ಜಾಗತಿಕ ಮಾರುಕಟ್ಟೆ: ಯುಎಸ್ ಸ್ಟಾಕ್ ಮಾರುಕಟ್ಟೆಯು 700 ಅಂಕಗಳಷ್ಟು ಕುಸಿತ ಕಂಡಿದೆ. ಡಾ ಜಾನ್ಸ್ ಇಂಡಸ್ಟ್ರೀಸ್ ಸರಾಸರಿ 697.10 ಅಂಕ ಅಥವಾ ಶೇಕಡ 2.06ರಷ್ಟು ಇಳಿದು, 33,129.59ಕ್ಕೆ ತಲುಪಿದೆ. ಡಿಸೆಂಬರ್ 15ರ ಬಳಿಕ ಮಂಗಳವಾರ ಜಾಗತಿಕ ಮಾರುಕಟ್ಟೆ ಭಾರೀ ಕುಸಿದಿದೆ.

ಯುಎಸ್‌ ಫೆಡ್‌ ಸಭೆ: ಯುಎಸ್‌ ಫೆಡರಲ್ ರಿಸರ್ವ್ ಮೀಟಿಂಗ್‌ನ ನಿರ್ಧಾರಕ್ಕಾಗಿ ಹೂಡಿಕೆದಾರರು ಕಾಯುತ್ತಿದ್ದಾರೆ. ಫೆಡ್‌ ತಮ್ಮ ಬಡ್ಡಿದರ ಬದಲಾವಣೆ ಮಾಡಲಿದೆಯೇ, ಯುಎಸ್‌ ಹಣದುಬ್ಬರ ನಿಯಂತ್ರಣವಾಗಲಿದೆಯೇ ಎಂಬ ಬಗ್ಗೆ ಹೂಡಿಕೆದಾರರು ಗಮನಹರಿಸಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ: ಫೆಬ್ರವರಿ 24ರಂದು ಶುಕ್ರವಾರದಂದು ಉಕ್ರೇನ್ ಮೇಲೆ ರಷ್ಯಾವು ದಾಳಿಯನ್ನು ಆರಂಭಿಸಿದೆ ಒಂದು ವರ್ಷವಾಗಲಿದೆ. ರಷ್ಯಾದ ಅಧ್ಯಕ್ಷ ಮಂಗಳವಾರ ಯುಎಸ್‌ನೊಂದಿಗೆ ಅಣು ಅಸ್ತ್ರ ಒಪ್ಪಂದವನ್ನು ವಜಾಗೊಳಿಸಿದೆ. ಅಣು ಅಸ್ತ್ರ ಪ್ರಯೋಗ ಮಾಡುವ ಎಚ್ಚರಿಕೆಯನ್ನು ರಷ್ಯಾ ನೀಡಿದೆ.

ಆರ್‌ಬಿಐನ ನಿರ್ಧಾರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರವರಿಯಲ್ಲಿ ನಡೆದ ತನ್ನ ಸಭೆಯ ಸಂಪೂರ್ಣ ಮಾಹಿತಿಯನ್ನು ಬಿಡುಗಡೆ ಮಾಡಲಿದೆ. ಫೆಬ್ರವರಿಯಲ್ಲಿ ಈಗಾಗಲೇ ಕೇಂದ್ರ ಬ್ಯಾಂಕ್ ರೆಪೋ ದರ ಏರಿಸಿದೆ.

ಅದಾನಿ ಸ್ಟಾಕ್ ಕುಸಿತ: ಹಿಂಡನ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಸ್ಟಾಕ್ ಭಾರೀ ಕುಸಿತವಾಗುತ್ತಿದೆ. ಅದಾನಿ ಗ್ರೂಪ್ ಸಂಸ್ಥೆಯ ಮೌಲ್ಯವು 100 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟವನ್ನು ಕಂಡಿದೆ. ಅದಾನಿ ಗ್ರೂಪ್‌ನ ಎಲ್ಲ ಸ್ಟಾಕ್‌ಗಳು ಇಳಿದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸಿ.ಆರ್. ಕೇಶವನ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

Thu Feb 23 , 2023
ನವದೆಹಲಿ: ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರ ಮೊಮ್ಮಗ ಸಿ.ಆರ್. ಕೇಶವನ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.ಸಿ.ಆರ್. ಕೇಶವನ್ ಅವರು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಪತ್ರವನ್ನು ಹಂಚಿಕೊಂಡಿದ್ದಾರೆ. ಎರಡು ದಶಕಗಳಿಂದ ಪಕ್ಷಕ್ಕಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಲು ಕಾರಣವಾದ ಯಾವುದೇ ಮೌಲ್ಯಗಳ ಕುರುಹುಗಳನ್ನು ನಾನು ನೋಡಿಲ್ಲ. ನಾನು ಇನ್ನು ಮುಂದೆ ಪಕ್ಷದಲ್ಲಿರಲು ಸಾಧ್ಯವಿಲ್ಲ. ಪಕ್ಷವು ಪ್ರಸ್ತುತವಾಗಿ ಏನನ್ನು ಸಂಕೇತಿಸುತ್ತದೆಯೋ, ಪ್ರತಿನಿಧಿಸುತ್ತದೆಯೋ […]

Advertisement

Wordpress Social Share Plugin powered by Ultimatelysocial