ಅಮೆರಿಕದ ವಾಯುಗಡಿಗೆ ಸಮೀಪದಲ್ಲಿಯೇ ಬಾಂಬರ್‌ ವಿಮಾನಗಳನ್ನು ಹಾರಿಸಿದ ರಷ್ಯಾ!

ಚೀನಾದ ಬೇಹುಗಾರಿಕಾ ಬಲೂನೊಂದು ಅಮೆರಿಕದ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿದ್ದ ಘಟನೆಯಿನ್ನೂ ಹಸಿಯಾಗಿರುವಾಗಲೇ ಅಮೆರಿಕದ ಅಂತರಾಷ್ಟ್ರೀಯ ವಾಯು ಗಡಿ ರೇಖೆಯ ಬಳಿ ಇನ್ನೊಂದು ಘಟನೆ ವರದಿಯಾಗಿದೆ. ಆದರೆ ಈ ಬಾರಿ ಇದು ವಾಯುಪ್ರದೇಶದ ಉಲ್ಲಂಘನೆ ಅಥವಾ ಮಾನವರಹಿತ ವಾಯುವಾಹಕಗಳ ಹಾರಾಟವೂ ಅಲ್ಲ.

ಬದಲಾಗಿ ಅಮೆರಿಕದ ಪರಮ ವೈರಿ ರಷ್ಯಾವು ಅಮೆರಿಕದ ವಾಯುಗಡಿಗೆ ಸಮೀಪದಲ್ಲಿಯೇ ಬಾಂಬರ್‌ ವಿಮಾನಗಳನ್ನು ಹಾರಿಸಿದೆ. ಪ್ರಸ್ತುತ ನಡೆಯುತ್ತಿರೋ ರಷ್ಯಾ ಉಕ್ರೇನ್‌ ಯುದ್ಧಕ್ಕೂ ಈ ಘಟನೆಗೂ ಒಂದಕ್ಕೊಂದು ಸಂಬಂಧವಿಲ್ಲ, ಆದರೆ ರಷ್ಯಾದ ಬಾಂಬರ್‌ ವಿಮಾನಗಳು ಅಮೆರಿಕದ ವಾಯುಗಡಿಗೆ ಅತ್ಯಂತ ಸಮೀಪದಲ್ಲಿ ಹಾರಾಟ ನಡೆಸಿರುವುದನ್ನು ಅಮೆರಿಕದ ವಿಮಾನಗಳು ಪತ್ತೆಹಚ್ಚಿವೆ ಎಂದು ಉತ್ತರ ಅಮೆರಿಕದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ (NORAD) ಹೇಳಿದೆ.

ಸೋಮವಾರ ಈ ವಿಮಾನಗಳು ಹಾರಾಟ ನಡೆಸಿರುವುದನ್ನು ಅಮೆರಿಕವು ಪತ್ತೆಹಚ್ಚಿದೆ. ಆದರೆ ರಷ್ಯಾದ ಈ ವಿಮಾನಗಳು ಯುಎಸ್ ಅಥವಾ ಕೆನಡಾದ ವಾಯುಪ್ರದೇಶವನ್ನು ಪ್ರವೇಶಿಸಿಲ್ಲ, ಯಾವುದೇ ಬೆದರಿಕೆ ಉಂಟು ಮಾಡಿಲ್ಲ. “NORAD ಈ ರಷ್ಯಾದ ಚಟುವಟಿಕೆಯನ್ನು ನಿರೀಕ್ಷಿಸಿತ್ತು .ಅಮೆರಿಕದ ಎರಡು NORAD F-16 ಯುದ್ಧವಿಮಾನಗಳು ರಷ್ಯಾದ ವಿಮಾನವನ್ನು ತಡೆದಿವೆ” ಎಂದು NORAD ಹೇಳಿದೆ.

ಈ ಕುರಿತು ರಷ್ಯಾ ಪ್ರತಿಕ್ರಿಯಿಸಿದ್ದು ಅಲಾಸ್ಕಾ ಮತ್ತು ರಷ್ಯಾ ನಡುವಿನ ಬೇರಿಂಗ್ ಸಮುದ್ರ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಎಂದಿನ ಕಾರ್ಯಾಚರಣೆಗಳ ಭಾಗವಾಗಿ ಅಂತರರಾಷ್ಟ್ರೀಯ ನೀರಿನ ಮೇಲೆ ಹಲವಾರು ವಿಮಾನಗಳ ಹಾರಾಟ ನಡೆಸಿವೆ. ಎರಡು Tu-95MS ಕಾರ್ಯತಂತ್ರದ ಕ್ಷಿಪಣಿ ವಾಹಕಗಳು Su-30 ಜೆಟ್‌ಗಳೊಂದಿಗೆ ಬೇರಿಂಗ್ ಸಮುದ್ರದ ಮೇಲೆ ಹಾರಾಟ ನಡೆಸಿವೆ ಎಂದು ಹೇಳಿದೆ. ಆದರೆ ಅದರ ವಿಮಾನಗಳು ತಡೆಹಿಡಿಯಲ್ಪಟ್ಟಿವೆಯೇ ಎಂಬುದರ ಕುರಿತು ರಷ್ಯಾ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. “ದೀರ್ಘ-ಶ್ರೇಣಿಯ ವಾಯುಯಾನ ಪೈಲಟ್‌ಗಳು ಆರ್ಕ್ಟಿಕ್, ಉತ್ತರ ಅಟ್ಲಾಂಟಿಕ್, ಕಪ್ಪು ಸಮುದ್ರ, ಬಾಲ್ಟಿಕ್ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರದ ತಟಸ್ಥ ನೀರಿನ ಮೇಲೆ ನಿಯಮಿತವಾಗಿ ಹಾರಾಟ ನಡೆಸುತ್ತಾರೆ” ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಣಬೆ ವಿವಾದಕ್ಕೆ ಅಂತ್ಯ ಹಾಡೀತೇ ಶಾ ಎಚ್ಚರಿಕೆ

Thu Feb 16 , 2023
ಪುತ್ತೂರು: ಕೇಂದ್ರ ಗೃಹಸಚಿವ, ಬಿಜೆಪಿಯ ಚುನಾವಣ ಚಾಣಕ್ಯ ಅಮಿತ್‌ ಶಾ ಮಂಗಳೂರಿನಲ್ಲಿ ನಡೆಸಿದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಕೆಲವು ಕ್ಷೇತ್ರ ಗಳಲ್ಲಿ ಶಾಸಕರ ವಿರುದ್ಧ ವ್ಯಕ್ತವಾಗಿರುವ ಅಸಮಾ ಧಾನಗಳನ್ನು ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಉದ್ಭವಿಸಿರುವ ಅಣಬೆ ಹೇಳಿಕೆ ವಿವಾದವನ್ನು ಶಮನಗೊಳಿಸಲೇಬೇಕಾದ ಅನಿವಾರ್ಯ ಬಿಜೆಪಿಗೆ ಎದುರಾಗಿದೆ. ಫೆ. 11ರಂದು ಪುತ್ತೂರಿಗೆ ಆಗಮಿಸಿದ ಅಮಿತ್‌ ಶಾಗೆ ಶುಭಕೋರಿ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಹೆಸರಿನಲ್ಲಿ ಅವರ ಬೆಂಬಲಿಗರು […]

Advertisement

Wordpress Social Share Plugin powered by Ultimatelysocial