ಡಬಲ್ ಸೆಂಚುರಿಯೊಂದಿಗೆ ಅಬ್ಬರಿಸಿದ ಕಿವೀಸ್ ನಾಯಕ ಟಾಮ್…

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ದ್ವಿಶತಕದೊಂದಿಗೆ ಅಬ್ಬರಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಇದು ಅವರ ಎರಡನೇ ದ್ವಿಶತಕವಾಗಿದೆ .

373 ಎಸೆತಗಳನ್ನು ಎದುರಿಸಿದ ಲ್ಯಾಥಮ್ 34 ಬೌಂಡರಿ, 2 ಸಿಕ್ಸರ್ ನೆರವಿನಿಂದ 252 ರನ್ ಗಳಿಸಿದರು. ಇನ್ನೂ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನ್ನು 521-6ಕ್ಕೆ ಡಿಕ್ಲೇರ್ ಮಾಡಿಕೊಂಡಿತು.

ಲ್ಯಾಥಮ್ ಜೊತೆಗೆ ಕಾನ್ವೇ ಕೂಡಾ ಶತಕ ಬಾರಿಸಿದ್ದರಿಂದ ನ್ಯೂಜಿಲೆಂಡ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು. ಟಾಪ್ ಲ್ಯಾಥಮ್ (252) ಕಾನ್ವೇ (109) ಹಾಗೂ ಬ್ಲಂಡೆಲ್ (57)  ನ್ಯೂಜಿಲೆಂಡ್ ಇನ್ನಿಂಗ್ಸ್ ನಲ್ಲಿ ಗರಿಷ್ಠ ಸ್ಕೋರರ್ ಗಳು.

ಇನ್ನೂ ಬಾಂಗ್ಲಾದೇಶದ ಪರ ತಸ್ಕಿನ್ ಅಹ್ಮದ್ 4 ವಿಕೆಟ್ ಪಡೆದರೆ, ಶರೀಫುಲ್ ಇಸ್ಲಾಂ ಒಂದು ವಿಕೆಟ್ ಪಡೆದರು. ಮೊದಲ ಟೆಸ್ಟ್ ನಲ್ಲಿ ಎದುರಾದ ಸೋಲಿಗೆ ಈ ಗೆಲುವಿನೊಂದಿಗೆ ಸೇಡು ತೀರಿಸಿಕೊಳ್ಳಲು ನ್ಯೂಜಿಲೆಂಡ್ ಕಾಯುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಖಾತೆಗೆ ಇನ್ನೂ ಬಂದಿಲ್ಲವೇ ಪಿಎಂ ಕಿಸಾನ್ ಹಣ? ಹಾಗಾದರೆ ಹೀಗೆ ಮಾಡಿ.

Mon Jan 10 , 2022
ಕೇಂದ್ರ ಸರ್ಕಾರವು ʻಪ್ರಧಾನಮಂತ್ರಿ ಕಿಸಾನ್ ಯೋಜನೆʼ ಯಲ್ಲಿ  ರೈತರಿಗೆ 10,000 ರೂ.ನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಈ ವರ್ಷದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು 10ನೇ ಕಂತಿನ ನಿಧಿಯನ್ನು ಬಿಡುಗಡೆ ಮಾಡಿದರು. ಹೊಸ ವರ್ಷದ ಉಡುಗೊರೆಯಾಗಿ   ʻಪ್ರಧಾನಮಂತ್ರಿ ಕಿಸಾನ್ ಯೋಜನೆʼ ರೈತರ ಖಾತೆಗೆ 2000 ರೂ. ಹಾಕಿದ್ದಾರೆ. ಆದರೆ ಇನ್ನೂ ಕೆಲ ರೈತರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು […]

Advertisement

Wordpress Social Share Plugin powered by Ultimatelysocial