ಬಜೆಟ್ ಚರ್ಚೆ ಬಿಟ್ಟು ಸದನದಲ್ಲಿ ಸಿನಿಮಾ ವಿಚಾರವಾಗಿ ಗದ್ದಲ; ಪ್ರತಿಭಟಿಸಿದ ಕಾಂಗ್ರೆಸ್; ಆರ್ಭಟ ನಡೆಯಲ್ಲ ಎಂದ ಬಿಜೆಪಿ; ಕಲಾಪ ಮುಂದೂಡಿದ ಸ್ಪೀಕರ್

 

 

ಬೆಂಗಳೂರು: ಸಚಿವರು, ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸರ್ಕಾರದಿಂದ ವಿಶೇಷ ಘೋಷಣೆ ವಿಚಾರ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ.ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಪ್ರಕಟಣೆ ಹೊರಡಿಸುತ್ತಿದ್ದಂತೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ‘ಫರ್ಜಾನಾ’ ಹಾಗೂ ‘ವಾಟರ್’ ಎಂಬ ಎರಡು ಸಿನಿಮಾಗಳಿವೆ ಅವನ್ನೂ ತೋರಿಸಿ ಎಂದು ಕಿಡಿಕಾರಿದರು.ನಾವು ಯಾವ ಸಿನಿಮಾ ನೋಡಬೇಕು ಎಂದು ಸದನದಲ್ಲಿ ಸರ್ಕಾರ ಹೇಳುವ ಅಗತ್ಯವಿಲ್ಲ. ನಮಗೆ ಗೊತ್ತಿದೆ.. ಕೆಲವರು ಸದನದಲ್ಲಿಯೇ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವು ಅದನ್ನೂ ನೋಡಬೇಕಾ ? ಸರ್ಕಾರ ಇರುವುದು ಪಿಕ್ಚರ್ ತೋರಿಸೊದಿಕ್ಕಾ ? ಸಭಾಪತಿಯಾದವರು ನಿಸ್ಪಕ್ಷಪಾತವಾಗಿರಬೇಕು. ಸಿನಿಮಾ ನೋಡಲು ಆದೇಶ ಹೊರಡಿಸುವುದು ಸರಿಯಲ್ಲ. ಮೊದಲು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಹರಿಪ್ರಸಾದ್ ಹೇಳಿಕೆಗೆ ಧ್ವನಿಗೂಡಿಸಿದ ಸಲೀಂ ಅಹ್ಮದ್, ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸಲು ಹೊರಟಿದೆ ? ಬಜೆಟ್ ಮೇಲಿನ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ? ಎಂದು ಪ್ರಶ್ನಿಸಿದ್ದಾರೆ. ಸಿನಿಮಾ ನೋಡಬೇಕು ಎಂದು ಸದನದಲ್ಲಿ ಮಾಡಿದ ಘೋಷಣೆಯನ್ನು ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದಾರೆ.ʼಕಾಶ್ಮೀರ್ ಫೈಲ್ಸ್ʼ ಸಿನಿಮಾ ನೋಡಲೇಬೇಕು ಎಂದು ಕಡ್ಡಾಯವಿಲ್ಲ, ಇಷ್ಟ ಇದ್ದವರು ನೋಡಬಹುದು ಎಂದು ಸಚಿವ ಸೋಮಶೇಖರ್ ಸಮಜಾಯಿಷಿ ಕೊಟ್ಟಿದ್ದಾರೆ. ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ ಆರಂಭವಾಗಿದೆ. ಕಾಂಗ್ರೆಸ್ ಸದಸ್ಯರು ಘೋಷಣೆ ವಾಪಸ್ ಪಡೆಯುವಂತೆ ಆಗ್ರಹಿಸಿ ಪರಿಷತ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದಕ್ಕೆ ಬಿಜೆಪಿ ಸದಸ್ಯರು ಎಷ್ಟೇ ಧರಣಿ ನಡೆಸಿದರೂ ಸರ್ಕಾರದ ಘೋಷಣೆ ಹಿಂಪಡೆಯಲ್ಲ ಎಂದು ಗುಡುಗಿದರು. ಸದನದಲ್ಲಿ ಗದ್ದಲ-ಕೋಲಾಹಲ ತೀವ್ರಗೊಳ್ಳುತ್ತಿದ್ದಂತೆ ಪರಿಷತ್ ಕಲಾಪನ್ನು ಸ್ಪೀಕರ್ ಹೊರಟ್ಟಿ ಕೆಲಕಾಲ ಮುಂದೂಡಿ ಆದೇಶ ಹೊರಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್​ ಕುರಿತು ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಪರೀಕ್ಷೆ ಬರೆಯದೆ ಮನೆಗೆ ಹೋದ ವಿದ್ಯಾರ್ಥಿನಿಯರು

Tue Mar 15 , 2022
ಯಾದಗಿರಿ: ಶಾಲಾ-ಕಾಲೇಜುಗಲ್ಲಿ ಹಿಜಾಬ್​ಗೆ ಅವಕಾಶವಿಲ್ಲ. ಸರ್ಕಾರದ ವಸ್ತ್ರಸಂಹಿತೆ ನೀತಿಯನ್ನು ಪ್ರಶ್ನಿಸುವಂತಿಲ್ಲ. ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್​ನ ಪೂರ್ಣ ಪೀಠವು ಐತಿಹಾಸಿಕ ತೀರ್ಪು ನೀಡಿದೆ.   ತೀರ್ಪು ಪ್ರಕಟ ಆಗುತ್ತಿದ್ದಂತೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬಿಟ್ಟು 35 ಮುಸ್ಲಿಂ ವಿದ್ಯಾರ್ಥಿನಿಯರು ಮನೆಗೆ ವಾಪಸ್​ ಆಗಿದ್ದಾರೆ. ನಾವು ಮತ್ತು ಪೊಲೀಸರು ಕೋರ್ಟ್ ಆದೇಶ ಪಾಲಿಸಿ […]

Advertisement

Wordpress Social Share Plugin powered by Ultimatelysocial