ಖಂಡಾಲಾದಲ್ಲಿ ಅಥಿಯಾ ಶೆಟ್ಟಿ-ಕೆ ಎಲ್ ರಾಹುಲ್ ಅದ್ಧೂರಿ ಕಲ್ಯಾಣ.

 

 

 

 

 

ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಕೆ.ಎಲ್ ರಾಹುಲ್ ಹಾಗೂ ಅಥಿಯಾಶೆಟ್ಟಿ ತುದಿಗಾಲಿನಲ್ಲಿ ನಿಂತಿದ್ದಾರೆ. ಇ-ಟೈಮ್ಸ್ ವರದಿ ಪ್ರಕಾರ ಜನವರಿ 20ರ ಬಳಿಕ ಕೆಎಲ್ ರಾಹುಲ್, ಅಥಿಯಾ ವಿವಾಹ ಅದ್ಧೂರಿಯಾಗಿ ನಡೆಯಲಿದೆಯಂತೆ.ರಾಹುಲ್, ಅಥಿಯಾ ಜೋಡಿಯ ಡೇಟಿಂಗ್, ಮದುವೆ ಬಗ್ಗೆ ನಾನಾ ವದಂತಿಗಳು ಹಬ್ಬಿತ್ತು, ಇದೀಗ ಈ ಜೋಡಿ ಜನವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿದೆ. ಸುನೀಲ್ ಶೆಟ್ಟಿಯ ಭವ್ಯ ಬಂಗಲೆಯಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿಯಲು ರಾಹುಲ್ ಹಾಗೂ ಅಥಿಯಾ ಶೆಟ್ಟಿ ರೆಡಿಯಾಗಿದ್ದಾರೆ. ಏಪ್ರಿಲ್ ನಲ್ಲಿ ಕೆ.ಎಲ್ ರಾಹುಲ್, ಅಥಿಯಾ ಶೆಟ್ಟಿ ಆರತಕ್ಷತೆ ಅದ್ಧೂರಿಯಾಗಿ ನಡೆಯಲಿದೆ. ಬಾಲಿವುಡ್ ನಲ್ಲಿ ಮತ್ತೆ ಮದುವೆಯ ಸೀಸನ್ ಆರಂಭವಾಗಲಿದ್ದು, ಈ ವರ್ಷ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಜೊತೆ ಮದುವೆ ಆಗಲಿದ್ದಾರೆ. ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಮದುವೆ ಜನವರಿ 23 ರಂದು ನಡೆಯಲಿದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಥಿಯಾ ಫ್ಯಾಮಿಲಿಯಿಂದ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಜನವರಿ 20ರ ಮದುವೆಯ ಅಧಿಕೃತ ಘೋಷಣೆ ಹೊರಬೀಳಲಿದೆ. ಖಂಡಾಲಾದಲ್ಲಿ ಸುನೀಲ್ ಶೆಟ್ಟಿ ಅವರ ಅದ್ದೂರಿ ಬಂಗಲೆ ಇದ್ದು, ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆ ಶಾಸ್ತ್ರಗಳು ಅಲ್ಲೇ ನಡೆಯಲಿದೆ. ಖಂಡಾಲಾದಲ್ಲಿ 3 ದಿನ ಮದುವೆಯ ಸಂಭ್ರಮ ಮನೆ ಮಾಡಲಿದೆ. ಖಂಡಾಲಾದ ಬೆಟ್ಟಗಳ ನಡುವೆ ನಿರ್ಮಿಸಲಾದ ಸುನೀಲ್ ಶೆಟ್ಟಿ ಬಂಗಲೆ ತುಂಬಾ ಐಷಾರಾಮಿಯಾಗಿದೆ. ಬಂಗಲೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪಲೋಡ್ ಮಾಡಲಾಗಿದೆ. ಸುನೀಲ್ ಶೆಟ್ಟಿ ಅವರ ಐಷಾರಾಮಿ ಬಂಗಲೆಯಲ್ಲಿ ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ ಎಂದು ಹೇಳಲಾಗುತ್ತಿದೆಸುನೀಲ್ ಶೆಟ್ಟಿ ಈ ಬಂಗಲೆಯನ್ನು ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ನೋಡಲು ತುಂಬಾ ಬ್ಯೂಟಿಫುಲ್ ಆಗಿ ಬಂಗಲೆ ಕಂಗೊಳಿಸುತ್ತಿದೆ. ಪ್ರಕೃತಿ ನಡುವೆ ಅಥಿಯಾ ಕಲ್ಯಾಣ ಜರುಗಲಿದೆ. ಸುನಿಲ್ ಶೆಟ್ಟಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಈ ಬಂಗಲೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದು ಯಾವ ಐಷಾರಾಮಿ ರೆಸಾರ್ಟ್ ಗಿಂತ ಕಡಿಮೆಯಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಕಂಗನಾ ರಣಾವತ್ ಸದ್ಯ ಎಮರ್ಜೆನ್ಸಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Mon Jan 16 , 2023
ನಟಿ ಕಂಗನಾ ರಣಾವತ್ ಸದ್ಯ ಎಮರ್ಜೆನ್ಸಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಮನಾಲಿಯಲ್ಲಿರುವ ಮನೆಯ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಬಾಲಿವುಡ್ ನಟಿ ಕಂಗನಾ ರಣಾವತ್ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ಮನಾಲಿಯಲ್ಲಿರುವ ತಮ್ಮ ಮನೆಯನ್ನು ನೆನಪು ಮಾಡಿಕೊಂಡಿದ್ದಾರೆ.ಕಂಗನಾ ಶೇರ್ ಮಾಡಿರುವ ಫೋಟೋಗಳಲ್ಲಿ ನಟಿ ಮನೆ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ಮನಾಲಿ ಅದ್ಬುತ ಪ್ರವಾಸಿತಾಣವಾಗಿದೆ. ಕಂಗನಾ ರಣಾವತ್ 2019ರಲ್ಲಿ ಮನಾಲಿಯಲ್ಲಿರುವ ಮನೆಯನ್ನು ನವೀಕರಿಸಿದ್ರು. ಕಂಗನಾ ರಣಾವತ್ ಮನಾಲಿ ಹೆಚ್ಚು […]

Advertisement

Wordpress Social Share Plugin powered by Ultimatelysocial