ನಟಿ ಕಂಗನಾ ರಣಾವತ್ ಸದ್ಯ ಎಮರ್ಜೆನ್ಸಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಟಿ ಕಂಗನಾ ರಣಾವತ್ ಸದ್ಯ ಎಮರ್ಜೆನ್ಸಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಮನಾಲಿಯಲ್ಲಿರುವ ಮನೆಯ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಬಾಲಿವುಡ್ ನಟಿ ಕಂಗನಾ ರಣಾವತ್ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ಮನಾಲಿಯಲ್ಲಿರುವ ತಮ್ಮ ಮನೆಯನ್ನು ನೆನಪು ಮಾಡಿಕೊಂಡಿದ್ದಾರೆ.ಕಂಗನಾ ಶೇರ್ ಮಾಡಿರುವ ಫೋಟೋಗಳಲ್ಲಿ ನಟಿ ಮನೆ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ಮನಾಲಿ ಅದ್ಬುತ ಪ್ರವಾಸಿತಾಣವಾಗಿದೆ. ಕಂಗನಾ ರಣಾವತ್ 2019ರಲ್ಲಿ ಮನಾಲಿಯಲ್ಲಿರುವ ಮನೆಯನ್ನು ನವೀಕರಿಸಿದ್ರು. ಕಂಗನಾ ರಣಾವತ್ ಮನಾಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರಂತೆ. ಕಂಗನಾ ರಣಾವತ್, ಮನಾಲಿಯಲ್ಲಿರುವ ತಮ್ಮ ಮನೆಯನ್ನು ಹೆಚ್ಚಾಗಿ ನೆನಪು ಮಾಡಿಕೊಳ್ತಾರಂತೆ. ಜೊತೆಗೆ ತನ್ನ ತಾಯಿಯ ಎಳ್ಳು ಮತ್ತು ಅರಿಶಿನ ಲಡ್ಡುಗಳು ನೆನಪಾಗ್ತುದೆ ಎಂದು ಕಂಗನಾ ಬರೆದುಕೊಂಡಿದ್ದಾರೆ. ಹಿಮದ ಮಳೆಯಾಗುವ ಸೀಸನ್​ ನಲ್ಲಿ ನಟಿ ಕಂಗನಾ ರಣಾವತ್ ಮನೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ನಟಿ ಕಂಗನಾ ಮನೆಯ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಮನಾಲಿಯಲ್ಲಿರುವ ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳೋದಾಗಿ ಹೇಳಿದ್ದಾರೆ. ಸದ್ಯ ಕಂಗನಾ ರಣಾವತ್ ಮುಂಬರುವ ಎಮರ್ಜೆನ್ಸಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳು ಕಂಗಾನ ಸಿನಿಮಾಗಾಗಿ ಕಾಯ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯಾಸಾ ದೇವಗನ್, ಜಾನ್ವಿ ಕಪೂರ್ ಇಬ್ಬರಿಗೂ ಈತನೇ ಬೆಸ್ಟ್ ಫ್ರೆಂಡ್.

Mon Jan 16 , 2023
    ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿ ನೈಸಾ ದೇವಗನ್ ಸ್ಟಾರ್ ಕಿಡ್ಸ್ ಜೊತೆ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಾರೆ.ಆಕೆಯ ಫ್ಯಾಷನ್ ಸೆನ್ಸ್ ಕೂಡ ಅನೇಕರ ಗಮನಸೆಳೆದಿದೆ. ಇತ್ತೀಚಿಗೆ ಸ್ನೇಹಿತ ಓರಿ ಜೊತೆಗಿನ ಫೋಟೋಗಳು ಸಹ ಸಖತ್ ವೈರಲ್ ಆಗಿತ್ತು.ನ್ಯಾಸಾ ಏಕೈಕ ಆಪ್ತ ಸ್ನೇಹಿತ ಓರ್ಹಾನ್ ಅವತ್ರಮಣಿ ಜೊತೆ ಹೆಚ್ಚು ಪಾರ್ಟಿಗಳಲ್ಲಿ ಕಾಣಿಸಿಕೊಳ್ತಾರೆ. ಈತನನ್ನೇ ಸ್ವೀಟ್ ಆಗಿ ಓರಿ ಎಂದು ಕರೆಯುತ್ತಾರೆ. ಜೊತೆಗೆ ನ್ಯಾಸಾ ಸ್ಟಾರ್ ಕಿಡ್ಸ್ […]

Advertisement

Wordpress Social Share Plugin powered by Ultimatelysocial