ನ್ಯಾಸಾ ದೇವಗನ್, ಜಾನ್ವಿ ಕಪೂರ್ ಇಬ್ಬರಿಗೂ ಈತನೇ ಬೆಸ್ಟ್ ಫ್ರೆಂಡ್.

 

 

ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿ ನೈಸಾ ದೇವಗನ್ ಸ್ಟಾರ್ ಕಿಡ್ಸ್ ಜೊತೆ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಾರೆ.ಆಕೆಯ ಫ್ಯಾಷನ್ ಸೆನ್ಸ್ ಕೂಡ ಅನೇಕರ ಗಮನಸೆಳೆದಿದೆ. ಇತ್ತೀಚಿಗೆ ಸ್ನೇಹಿತ ಓರಿ ಜೊತೆಗಿನ ಫೋಟೋಗಳು ಸಹ ಸಖತ್ ವೈರಲ್ ಆಗಿತ್ತು.ನ್ಯಾಸಾ ಏಕೈಕ ಆಪ್ತ ಸ್ನೇಹಿತ ಓರ್ಹಾನ್ ಅವತ್ರಮಣಿ ಜೊತೆ ಹೆಚ್ಚು ಪಾರ್ಟಿಗಳಲ್ಲಿ ಕಾಣಿಸಿಕೊಳ್ತಾರೆ. ಈತನನ್ನೇ ಸ್ವೀಟ್ ಆಗಿ ಓರಿ ಎಂದು ಕರೆಯುತ್ತಾರೆ. ಜೊತೆಗೆ ನ್ಯಾಸಾ ಸ್ಟಾರ್ ಕಿಡ್ಸ್ ಜೊತೆ ಸೇರಿ ವಿದೇಶಗಳಲ್ಲಿ ಮೋಜಿ, ಮಸ್ತಿಯಲ್ಲಿ ಭಾಗಿಯಾಗ್ತಾರೆ. ಓರಿ ಜೊತೆಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡ ಆಗಾಗೆಕಾಣಿಸಿಕೊಳ್ತಾರೆ. ಇತ್ತ ಓರಿ ನನ್ನ ಬೆಸ್ಟ್ ಫ್ರೆಂಡ್ ಅತನನ್ನು ನಾನು ಬಹಳ ನಂಬಿರೋದಾಗಿ ಅನೇಕ ಬಾರಿ ನಟಿ ಜಾನ್ವಿ ಕಪೂರ್ ಹೇಳಿದ್ದಾರೆ. ಜಾನ್ವಿ ಕಪೂರ್ ಕೂಡ ತನ್ನ ಆತ್ಮೀಯ ಗೆಳೆಯನನ್ನು ಭೇಟಿಯಾಗಲು ಸಿಂಗಾಪುರಕ್ಕೆ ಹಲವು ಬಾರಿ ಹೋಗ್ತಾರೆ. ನ್ಯಾಸಾ ಕೂಡ ಸಿಂಗಾಪುರದಲ್ಲೇ ಓದುತ್ತಿದ್ದಾರೆ. ಸಿಂಗಾಪುರದಲ್ಲಿ ಓದುತ್ತಿರುವ ಕಾರಣ ನ್ಯಾಸಾ ತನ್ನ ಪೋಷಕರಿಂದ ದೂರ ಉಳಿದಿದ್ದಾಳೆ. ಜಾನ್ವಿ ಕಪೂರ್ ಕೂಡ ನ್ಯಾಸ ಹಾಗೂ ಓರಿಯನ್ನು ಮೀಟ್ ಮಾಡಲು ಸಮಯ ಸಿಕ್ಕಾಗ ಸಿಂಗಾಪುರಕ್ಕೆ ಹೋಗುತ್ತಾಳೆ. ಇತ್ತೀಚೆಗೆ ಜಾನ್ವಿ ಮತ್ತು ನೈಸಾ ಕೂಡ ಆಮ್ ಸ್ಟರ್ ಡ್ಯಾಮ್​ನಲ್ಲಿ ಕಾಣಿಸಿಕೊಂಡರು. ಜಾನ್ವಿ-ನ್ಯಾಸಾ ಕೂಡ ಪಾರ್ಟಿ ಮಾಡಲು ಇಷ್ಟಪಡುತ್ತಾರೆ. ಸ್ನೇಹಿತರ ಜೊತೆ ಎಂಜಾಯ್ ಮಾಡ್ತಾರೆ. ಆಮ್ ಸ್ಟರ್ ಡ್ಯಾಮ್​ ಪಾರ್ಟಿಯಲ್ಲಿ ಜಾನ್ವಿ-ನ್ಯಾಸಾ ಜೊತೆ ಓರಿ ಕೂಡ ಕಾಣಿಸಿಕೊಂಡಿದ್ದಾಳೆ. ಈ ಪಾರ್ಟಿಯಲ್ಲಿ ಜಾನ್ವಿ ಮತ್ತು ನ್ಯಾಸಾ ಅದ್ಭುತವಾಗಿ ಕಾಣುತ್ತಿದ್ದರು. ನ್ಯಾಸಾ ಅವರಂತೆ ಜಾನ್ವಿ ಕೂಡ ಫ್ಯಾಷನ್ ವಿಷಯದಲ್ಲಿ ಯಾರಿಗೂ ಕಡಿಮೆ ಇಲ್ಲ ಜಾನ್ವಿಯನ್ನು ‘ಭಾರತೀಯ ಕಿಮ್ ಕರ್ದಾಶಿಯಾನ್’ ಎಂದು ಕರೆಯುತ್ತಾರೆ. ಜಾನ್ವಿ ಕೂಡ ಕಿಮ್ ಕರ್ದಾಶಿಯಾನ್ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ವಲ್ಪ ದೂರ ನಿಲ್ಲಿ, ನನ್ನ ಮದ್ವೆಯಾಗಿದೆ.

Mon Jan 16 , 2023
ರಾಖಿ ಸಾವಂತ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಾಗ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರು ಈಗ ಸುದ್ದಿಯಾಗಿದ್ದಾರೆ. ನಟಿಯ ಈ ಸೆಲ್ಫಿ ಘಟನೆ ಈಗ ಎಲ್ಲೆಡೆ ವೈರಲ್ ಆಗಿದೆ. ನಟಿಯ ಅಭಿಮಾನಿ ರಾಖಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅಂತರವನ್ನು ಕಾಯ್ದುಕೊಳ್ಳುವಂತೆ ರಾಖಿ ಹೇಳಿದ್ದಾರೆ. ನಾನು ವಿವಾಹಿತ ಮಹಿಳೆಯಾಗಿದ್ದು, ನನ್ನನ್ನು ನೀವು ಮುಟ್ಟಬಾರದು ಎಂದು ಹೇಳಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಅವರ ಅಭಿಮಾನಿ ಅವರ ಹತ್ತಿರ ಬಂದಿದ್ದರು. ರಾಖಿ ಅವರಿಗೆ, ಸ್ವಲ್ಪ […]

Advertisement

Wordpress Social Share Plugin powered by Ultimatelysocial