ಸ್ವಲ್ಪ ದೂರ ನಿಲ್ಲಿ, ನನ್ನ ಮದ್ವೆಯಾಗಿದೆ.

ರಾಖಿ ಸಾವಂತ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಾಗ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರು ಈಗ ಸುದ್ದಿಯಾಗಿದ್ದಾರೆ. ನಟಿಯ ಈ ಸೆಲ್ಫಿ ಘಟನೆ ಈಗ ಎಲ್ಲೆಡೆ ವೈರಲ್ ಆಗಿದೆ. ನಟಿಯ ಅಭಿಮಾನಿ ರಾಖಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅಂತರವನ್ನು ಕಾಯ್ದುಕೊಳ್ಳುವಂತೆ ರಾಖಿ ಹೇಳಿದ್ದಾರೆ. ನಾನು ವಿವಾಹಿತ ಮಹಿಳೆಯಾಗಿದ್ದು, ನನ್ನನ್ನು ನೀವು ಮುಟ್ಟಬಾರದು ಎಂದು ಹೇಳಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಅವರ ಅಭಿಮಾನಿ ಅವರ ಹತ್ತಿರ ಬಂದಿದ್ದರು. ರಾಖಿ ಅವರಿಗೆ, ಸ್ವಲ್ಪ ದೂರ ನಿಲ್ಲಿ, ನನ್ನನ್ನು ಮುಟ್ಟಬೇಡಿ, ನನ್ನ ಮದುವೆಯಾಗಿದೆ ಎಂದಿದ್ದಾರೆ. ಈ ಹಿಂದಿನ ಹಾಗಲ್ಲ. ಆ ಕಥೆ ಮುಗಿದಿದೆ. ಈಗ ನೀವು ನನ್ನನ್ನು ಮುಟ್ಟಬಾರದು ಎಂದು ನಟಿ ಗೋಡೆಯ ಆಸರೆಯನ್ನು ತೆಗೆದುಕೊಂಡು ವೀಡಿಯೊದ ಕೊನೆಯಲ್ಲಿ ಹೇಳುತ್ತಲೇ ಇದ್ದರು. ವೀಡಿಯೊಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, ಅಕ್ಕಾ ನೀವು ರಸ್ತೆಬದಿಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಏಕೆ ಹುಡುಕುತ್ತಿದ್ದೀರಿ ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬ ವ್ಯಕ್ತಿ ನೀವು ಇಷ್ಟು ದಿನ ಮದುವೆಯಾಗಿರಲಿಲ್ಲವೇ? ನೀವು ಮೇ ತಿಂಗಳಿನಲ್ಲಿಯೇ ಮದುವೆಯಾಗಿದ್ದೀರಿ, ಅಲ್ವೇ ಎಂದು ಪ್ರಶ್ನೆ ಮಾಡಿದ್ದಾರೆ.ಕಳೆದ ವಾರ ರಾಖಿ ತನ್ನ ಬಾಯ್ ಫ್ರೆಂಡ್ ಆದಿಲ್ ಖಾನ್ ಜೊತೆಗಿನ ಮದುವೆಯನ್ನು ಅನೌನ್ಸ್ ಮಾಡಿದ್ದರು. ಆಕೆಯ ರಹಸ್ಯ ವಿವಾಹವು 2 ಜುಲೈ 2022 ರಂದು ನಡೆಯಿತು ಎಂದು ಅವರು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಜೂಮ್ ಕಾಲ್" ಮೂಲಕ ಆನ್ ಲೈನ್ ಶಿಕ್ಷಕಿಯಾದ ರೇಣುಕಾ

Mon Jan 16 , 2023
ಹೊಸಬರು ಸೇರಿಕೊಂಡು ಮಾಡುತ್ತಿರುವ “ಜೂಮ್ ಕಾಲ್” ಚಿತ್ರದಲ್ಲಿ ಆನ್ ಲೈನ್ ಶಿಕ್ಷಕಿಯಾಗಿ ರೇಣುಕಾ ಅಭಿನಯಿಸಿದ್ದಾರೆ. ವಿಷ್ಣುವರ್ಧನ್, ಗಣೇಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳಲ್ಲಿ ನಟಿಸಿರುವ ರೇಣುಕಾ ಈಗ ಹೊಸಬರ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಸಹನಟರ ಜೊತೆ ನಟಿಸುತ್ತಿದೆ. ಆದರೆ ಈ ಚಿತ್ರದಲ್ಲಿ ಒಬ್ಬಳೆ ನಟಿಸಿದ್ದೇನೆ. ಈ ಅನುಭವ ಹೊಸದಾಗಿತ್ತು ಮತ್ತು ವಿಶೇಷವಾಗಿತ್ತು. “ಜೂಮ್ ಕಾಲ್” ಪ್ರಯೋಗಾತ್ಮಕ ಚಿತ್ರವಾಗಿದ್ದು, ಮೇಕಿಂಗ್ ವಿಭಿನ್ನವಾಗಿದೆ. ಈ ಸಿನಿಮಾದಲ್ಲಿ […]

Related posts

Advertisement

Wordpress Social Share Plugin powered by Ultimatelysocial