“ಜೂಮ್ ಕಾಲ್” ಮೂಲಕ ಆನ್ ಲೈನ್ ಶಿಕ್ಷಕಿಯಾದ ರೇಣುಕಾ

ಹೊಸಬರು ಸೇರಿಕೊಂಡು ಮಾಡುತ್ತಿರುವ “ಜೂಮ್ ಕಾಲ್” ಚಿತ್ರದಲ್ಲಿ ಆನ್ ಲೈನ್ ಶಿಕ್ಷಕಿಯಾಗಿ ರೇಣುಕಾ ಅಭಿನಯಿಸಿದ್ದಾರೆ.
ವಿಷ್ಣುವರ್ಧನ್, ಗಣೇಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳಲ್ಲಿ ನಟಿಸಿರುವ ರೇಣುಕಾ ಈಗ ಹೊಸಬರ ಈ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರತಿ ಸಿನಿಮಾದಲ್ಲಿ ಸಹನಟರ ಜೊತೆ ನಟಿಸುತ್ತಿದೆ. ಆದರೆ ಈ ಚಿತ್ರದಲ್ಲಿ ಒಬ್ಬಳೆ ನಟಿಸಿದ್ದೇನೆ. ಈ ಅನುಭವ ಹೊಸದಾಗಿತ್ತು ಮತ್ತು ವಿಶೇಷವಾಗಿತ್ತು. “ಜೂಮ್ ಕಾಲ್” ಪ್ರಯೋಗಾತ್ಮಕ ಚಿತ್ರವಾಗಿದ್ದು, ಮೇಕಿಂಗ್ ವಿಭಿನ್ನವಾಗಿದೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಖುಷಿಯಾಗಿದೆ ಎಂದು ರೇಣುಕಾ ತಿಳಿಸಿದ್ದಾರೆ.

ಮಹೇಶ್ ಹೆಚ್ ಎಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಚಿತ್ರೀಕರಣ ಮುಕ್ತಾಯವಾಗಿದೆ.

ಶ್ರೀವಾರಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನ, ವಿಜಯ್ ರಾಜ್ ಅವರ ಸಂಗೀತ ನಿರ್ದೇಶನವಿದೆ.

ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು “ಜೂಮ್ ಕಾಲ್” ನಲ್ಲಿ ಅಭಿನಯಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ರಮ್ಯಾ ಅವರ ಕಮ್ ಬ್ಯಾಕ್ ಸಿನಿಮಾ ಅನೌನ್ಸ್ ಆಗಿದೆ.

Mon Jan 16 , 2023
  ನಟಿ ರಮ್ಯಾ ಅವರ ಕಮ್ ಬ್ಯಾಕ್ ಸಿನಿಮಾ ಅನೌನ್ಸ್ ಆಗಿದೆ. ಅವರು ಡಾಲಿ ಧನಂಜಯ್ ಜೊತೆಗೆ ಕನ್ನಡ ಸಿನಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಉತ್ತರಕಾಂಡ ಸಿನಿಮಾದಲ್ಲಿ ಧನಂಜಯ್​ಗೆ ಹೀರೋಯಿನ್ ಆಗಿ ರಮ್ಯಾ ಅವರು ನಟಿಸಲಿದ್ದು ಇವರ ಕಾಂಬಿನೆಷನ್ ಸಿನಿಮಾಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದೀಗ ಚಿಕ್ಕಬಳ್ಳಾಪುರ ಉತ್ಸವದಲ್ಲಿ ನಟಿ ರಮ್ಯಾ ಅವರು ಉತ್ತರಕಾಂಡ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಒಂದನ್ನು ಕೊಟ್ಟಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಟಿ […]

Advertisement

Wordpress Social Share Plugin powered by Ultimatelysocial