ನಟಿ ರಮ್ಯಾ ಅವರ ಕಮ್ ಬ್ಯಾಕ್ ಸಿನಿಮಾ ಅನೌನ್ಸ್ ಆಗಿದೆ.

 

ನಟಿ ರಮ್ಯಾ ಅವರ ಕಮ್ ಬ್ಯಾಕ್ ಸಿನಿಮಾ ಅನೌನ್ಸ್ ಆಗಿದೆ. ಅವರು ಡಾಲಿ ಧನಂಜಯ್ ಜೊತೆಗೆ ಕನ್ನಡ ಸಿನಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಉತ್ತರಕಾಂಡ ಸಿನಿಮಾದಲ್ಲಿ ಧನಂಜಯ್​ಗೆ ಹೀರೋಯಿನ್ ಆಗಿ ರಮ್ಯಾ ಅವರು ನಟಿಸಲಿದ್ದು ಇವರ ಕಾಂಬಿನೆಷನ್ ಸಿನಿಮಾಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದೀಗ ಚಿಕ್ಕಬಳ್ಳಾಪುರ ಉತ್ಸವದಲ್ಲಿ ನಟಿ ರಮ್ಯಾ ಅವರು ಉತ್ತರಕಾಂಡ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಒಂದನ್ನು ಕೊಟ್ಟಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಟಿ ರಮ್ಯಾ ಅವರು ಉತ್ತರಕಾಂಡ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟಿದ್ದು ಸಿನಿಮಾದ ಶೂಟಿಂಗ್ ಮಾರ್ಚ್​ನಲ್ಲಿ ಆರಂಭವಾಗಲಿದ್ದು ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಈ ವಿಚಾರವನ್ನು ತಿಳಿದು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಅಂತೂ ರಮ್ಯಾ ಅವರು ಈ ಇನ್ನೆರಡು ತಿಂಗಳಲ್ಲಿ ಶೂಟಿಂಗ್ ಸೆಟ್​ನಲ್ಲಿರುತ್ತಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ರಮ್ಯಾ ಹಾಗೂ ಡಾಲಿಯ ಉತ್ತರಕಾಂಡ ಸಿನಿಮಾ ನಿರ್ಮಾಣವಾಗಲಿದೆ. ಕಳೆದ ವರ್ಷವೇ ಈ ಸಿನಿಮಾ ಘೋಷಣೆ ಆಗಿತ್ತು. ಈಗ ಸಿನಿಮಾದ ಹೀರೋ ಹೀರೋಯಿನ್ ಯಾರು ಎನ್ನುವುದು ಕೂಡಾ ರಿವೀಲ್ ಆಗಿದೆ. ಡಾಲಿ ಬರ್ತ್‌ಡೇಗೆ ಸಿನಿಮಾ ಘೋಷಿಸಿ ಕೆಆರ್‌ಜಿ ಬ್ಯಾನರ್ ಸರ್‌ಪ್ರೈಸ್‌ ಕೊಟ್ಟಿತ್ತು. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರ್ಯಾಪ್ ಸಿಂಗರ್ ಬ್ರೋಧ. ವಿ ಹೊಸ ಸಾಂಗ್ ‘ಬಸ್ತಿ ಬೌನ್ಸ್’ ರಿಲೀಸ್.

Mon Jan 16 , 2023
ಬೆಂಗಳೂರು ಮೂಲದ ಖ್ಯಾತ ರ್ಯಾಪರ್ ಹಾಗೂ ಸಂಗೀತ ನಿರ್ದೇಶಕ ಬ್ರೋಧ. ವಿ ಮತ್ತೊಂದು ಕಿಕ್ ಕೊಡೋ ಹಾಡಿನೊಂದಿಗೆ ಹೊಸ ವರ್ಷವನ್ನು ಆರಂಭಿಸಿದ್ದಾರೆ. ಬ್ರೋಧ. ವಿ ಹೊಸ ರ್ಯಾಪ್ ಸಾಂಗ್ ‘ಬಸ್ತಿ ಬೌನ್ಸ್’ ಬಿಡುಗಡೆಯಾಗಿ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.‘ಬಸ್ತಿ ಬೌನ್ಸ್’ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆದ ‘ವೈಂಕೋ’ ಹಾಡಿನ ಸೀಕ್ವಲ್ ಆಗಿದೆ. ‘ವೈಂಕೋ’ ಸಾಂಗ್ ಬ್ರೋಧ. ವಿ ಸೂಪರ್ ಡೂಪರ್ ಹಿಟ್ ಸಾಂಗ್ ಗಳಲ್ಲೊಂದಾಗಿದ್ದು, […]

Advertisement

Wordpress Social Share Plugin powered by Ultimatelysocial