ಚಿಕನ್​ ಪ್ರಿಯರಿಗೆ ಶಾಕಿಂಗ್​ ನ್ಯೂಸ್​! ಈ ಒಂದು ಕಾರಣದಿಂದ ಕೋಳಿ ಮಾಂಸದ ಬೆಲೆ ಇನ್ನಷ್ಟು ಹೆಚ್ಚಲಿದೆ

ಹೈದರಾಬಾದ್​: ಮಾಂಸ ಪ್ರಿಯರಿಗೆ ಅದರಲ್ಲೂ ಚಿಕನ್​ ಪ್ರಿಯರಿಗೆ ಇದು ಕಹಿ ಸುದ್ದಿಯಾಗಿದೆ. ಕೆಲವು ದಿನಗಳ ಹಿಂದೆ 200 ರೂಪಾಯಿ ಒಳಗಿದ್ದ ಚಿಕನ್​ ಬೆಲೆ ಇದೀಗ 200ರ ಗಡಿ ದಾಟಿ 300 ರೂಪಾಯಿಯ ಆಸುಪಾಸಿಗೆ ಬಂದಿದ್ದು, ಮಟನ್​ ಬೆಲೆಗೆ ಚಿಕನ್​ ಪೈಪೋಟಿ ನೀಡುತ್ತಿದೆಮಟನ್​ಗಿಂತ ಚಿಕನ್​ ತಿನ್ನುವವರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದ್ದು, ನಿರಂತರ ದರ ಏರಿಕೆ ಚಿಕನ್​ ಪ್ರಿಯರ ಜೇಬು ಸುಡುತ್ತಿದೆ. ಸದ್ಯ ಹಲವೆಡೆ ಒಂದು ಕೆಜಿ ಚಿಕನ್​ಗೆ 280 ರೂಪಾಯಿ ಇದೆ. ಸ್ಕಿನ್​ಲೆಸ್​​ ಚಿಕನ್​ 300 ರೂಪಾಯಿ ಗಡಿ ದಾಟಿದ್ದು, ಚಿಕನ್​ ಪ್ರಿಯರನ್ನು ಕಂಗಾಲಾಗಿಸಿದೆ.

 

ಜೀವಂತ ಕೋಳಿ ಫಾರ್ಮ್​ನಲ್ಲಿ ಪ್ರತಿ ಕೆಜಿಗೆ 100 ರಿಂದ 120 ರೂಪಾಯಿ ಇತ್ತು ಇದೀಗ ಅದೇ ಫಾರ್ಮ್​ಗಳಲ್ಲಿ ಜೀವಂತ ಕೋಳಿ ಬೆಲೆ ಪ್ರತಿ ಕೆಜಿಗೆ 140 ರಿಂದ 150 ರೂಪಾಯಿ ಆಗಿದೆ. ಕೆಲವೇ ದಿನಗಳ ಅಂತರದಲ್ಲಿ ಭಾರೀ ಏರಿಕೆಯಾಗಿರುವುದು ಮಾಂಸ ಪ್ರಿಯರಿಗೆ ಭಾರೀ ನಿರಾಶೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆಯು ಇದೆ.

ಬೆಲೆ ಏರಿಕೆಗೆ ಕಾರಣ ಏನೆಂದು ನೋಡಿದರೆ, ಪ್ರಮುಖವಾಗಿ ಕೋಳಿಗಳ ಕೊರತೆ. ಕೋಳಿ ಫಾರ್ಮ್​ಗಳ ಸಂಖ್ಯೆ ತುಂಬಾ ವಿರಳವಾಗಿರುವುದರಿಂದ ಕೋಳಿಗಳ ಉತ್ಪಾದನಾ ಕೊರತೆಯಿಂದಾಗಿ ಮಾಂಸದ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಪರಿಣಿತರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣೆ ಮುಕ್ತಾಯ: ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ ₹15 ಹೆಚ್ಚಳ ಸಾಧ್ಯತೆ

Fri Mar 11 , 2022
ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ₹15 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.   ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಪೂರ್ವದಲ್ಲಿ ತೈಲ ಕಂಪನಿಗಳು ಇಂಧನ ದರದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದರಿಂದಾಗಿ ನಷ್ಟಕ್ಕೆ ಗುರಿಯಾಗಿದ್ದವು. ರಷ್ಯಾ- ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರಿ ಏರಿಕೆ ಕಂಡಿದೆ. ಜತೆಗೆ, ತೈಲ […]

Advertisement

Wordpress Social Share Plugin powered by Ultimatelysocial