ಚುನಾವಣೆ ಮುಕ್ತಾಯ: ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ ₹15 ಹೆಚ್ಚಳ ಸಾಧ್ಯತೆ

ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ₹15 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಪೂರ್ವದಲ್ಲಿ ತೈಲ ಕಂಪನಿಗಳು ಇಂಧನ ದರದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದರಿಂದಾಗಿ ನಷ್ಟಕ್ಕೆ ಗುರಿಯಾಗಿದ್ದವು.

ರಷ್ಯಾ- ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರಿ ಏರಿಕೆ ಕಂಡಿದೆ. ಜತೆಗೆ, ತೈಲ ಅಮದು ಮತ್ತು ರಫ್ತು ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿರುವುದರಿಂದ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ತಜ್ಞರು ತಿಳಿಸಿದ್ದಾರೆ.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, ಒಂದು ಡಾಲರ್‌ಗೆ ₹ 76.43ಕ್ಕೆ ತಲುಪಿದೆ. ಬ್ರೆಂಟ್‌ ತೈಲ ದರ ಶೇ 4.91ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 116.6 ಡಾಲರ್‌ ಆಗಿದೆ.

ನಷ್ಟ ಸರಿದೂಗಿಸುವ ಉದ್ದೇಶದಿಂದ ಪೆಟ್ರೋಲ್, ಡೀಸೆಲ್‌ ದರ ಪ್ರತಿ ಲೀಟರ್‌ಗೆ ₹10ರಿಂದ ₹15.1ರಷ್ಟು ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿರುವುದಾಗಿ ವರದಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈಡೇರದ ಕೈಗಾರಿಕೀಕರಣ ಹಂಬಲ

Fri Mar 11 , 2022
ಚಿಕ್ಕಬಳ್ಳಾಪುರ: ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ನಡುವಿನ ಅಂತರ 60 ಕಿ.ಮೀ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಚಿಕ್ಕಬಳ್ಳಾಪುರ ನಡುವಿನ ಅಂತರ ಕೇವಲ 35 ಕಿ.ಮೀ.ಹೀಗೆ ರಾಜಧಾನಿ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದ ಜಿಲ್ಲಾ ಕೇಂದ್ರ ಎನಿಸಿದ್ದರೂ ಚಿಕ್ಕಬಳ್ಳಾಪುರ ಕೈಗಾರಿಕೀಕರಣದಿಂದ ಬಹುದೂರವೇ ಉಳಿದಿವೆ.ಬೆಂಗಳೂರಿನ ಆಸುಪಾಸು ಜಿಲ್ಲೆಗಳಲ್ಲಿ ಈಗಾಗಲೇ ಕೈಗಾರಿಕಾ ಹಬ್‌ಗಳು ಮತ್ತು ಬೃಹತ್ ಕೈಗಾರಿಕಾ ಯೋಜನೆಗಳು ನಿರ್ಮಾಣವಾಗಿವೆ. ತುಮಕೂರಿನಲ್ಲಿ ವಸಂತ ನರಸಾಪುರ, ಕೋಲಾರದಲ್ಲಿ ನರಸಾಪುರ ಮತ್ತು ರಾಮನಗರದ ಬಿಡದಿಯ ಬಳಿ […]

Advertisement

Wordpress Social Share Plugin powered by Ultimatelysocial