ಈಡೇರದ ಕೈಗಾರಿಕೀಕರಣ ಹಂಬಲ

ಚಿಕ್ಕಬಳ್ಳಾಪುರ: ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ನಡುವಿನ ಅಂತರ 60 ಕಿ.ಮೀ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಚಿಕ್ಕಬಳ್ಳಾಪುರ ನಡುವಿನ ಅಂತರ ಕೇವಲ 35 ಕಿ.ಮೀ.ಹೀಗೆ ರಾಜಧಾನಿ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದ ಜಿಲ್ಲಾ ಕೇಂದ್ರ ಎನಿಸಿದ್ದರೂ ಚಿಕ್ಕಬಳ್ಳಾಪುರ ಕೈಗಾರಿಕೀಕರಣದಿಂದ ಬಹುದೂರವೇ ಉಳಿದಿವೆ.ಬೆಂಗಳೂರಿನ ಆಸುಪಾಸು ಜಿಲ್ಲೆಗಳಲ್ಲಿ ಈಗಾಗಲೇ ಕೈಗಾರಿಕಾ ಹಬ್‌ಗಳು ಮತ್ತು ಬೃಹತ್ ಕೈಗಾರಿಕಾ ಯೋಜನೆಗಳು ನಿರ್ಮಾಣವಾಗಿವೆ. ತುಮಕೂರಿನಲ್ಲಿ ವಸಂತ ನರಸಾಪುರ, ಕೋಲಾರದಲ್ಲಿ ನರಸಾಪುರ ಮತ್ತು ರಾಮನಗರದ ಬಿಡದಿಯ ಬಳಿ ಕೈಗಾರಿಕಾ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ತಲೆಎತ್ತಿವೆ. ಇಲ್ಲಿ ವಿದೇಶಿ ಸಂಸ್ಥೆಗಳು ತಮ್ಮ ಘಟಕಗಳನ್ನು ಆರಂಭಿಸಿವೆ. ಆಯಾ ಜಿಲ್ಲೆಯಷ್ಟೇ ಅಲ್ಲ ಆಸುಪಾಸಿನ ಜಿಲ್ಲೆಯ ಜನರಿಗೂ ಉದ್ಯೋಗ ನೀಡುತ್ತಿವೆ. ಆದರೆ, ಚಿಕ್ಕಬಳ್ಳಾಪುರ ಇಂದಿಗೂ ಕೈಗಾರಿಕೀಕರಣದ ವಿಚಾರದಲ್ಲಿ ಬಳಲುತ್ತಲೇ ಇದೆ.ಬೆಂಗಳೂರಿನ ಮೇಲಿನ ಕೈಗಾರಿಕೀಕರಣದ ಒತ್ತಡ ತಗ್ಗಿಸಲು ಮತ್ತು ಸಂಚಾರ ದಟ್ಟಣೆ ಮತ್ತಿತರ ದೃಷ್ಟಿಯಿಂದ ಸರ್ಕಾರ ರಾಜಧಾನಿಗೆ ಆಸುಪಾಸಿನ ಜಿಲ್ಲೆಗಳಲ್ಲಿ ಕೈಗಾರಿಕೀಕರಣ ವಿಸ್ತರಿಸುತ್ತಿದೆ. ಈ ಫಲವಾಗಿಯೇ ವಸಂತನರಸಾಪುರ, ನರಸಾಪುರ ಕೈಗಾರಿಕಾ ಹಬ್‌ಗಳು ತಲೆ ಎತ್ತಿವೆ. ಆದರೆ, ಜಿಲ್ಲೆ ರಚನೆಯಾಗಿ 15 ವರ್ಷಗಳಾದರೂ ಯಾವುದೇ ಸರ್ಕಾರಗಳು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕಾ ಹಬ್ ನಿರ್ಮಾಣಕ್ಕೆ ಮುಂದಾಗಿಲ್ಲ.ಪ್ರತಿವರ್ಷದ ಬಜೆಟ್‌ನಲ್ಲಿ ಕೈಗಾರಿಕೀಕರಣದ ಬಗ್ಗೆ ಜನರಲ್ಲಿ ಆಶಾವಾದಗಳು ಮೊಳೆಯುತ್ತವೆ. ಬಜೆಟ್ ಪ್ರಕಟಣೆ ತರುವಾಯ ಆಶಾವಾದಗಳು ಕಮರುತ್ತವೆ. ಜಿಲ್ಲೆಯಲ್ಲಿ ಇಂದಿಗೂ ದೊಡ್ಡಮಟ್ಟದ ಕೈಗಾರಿಕೀಕರಣವಿಲ್ಲ. ಈ ಕಾರಣದಿಂದ ಜಿಲ್ಲೆಯ ಯುವ ಸಮುದಾಯ ಉದ್ಯೋಗಗಳಿಗಾಗಿ ಬೆಂಗಳೂರನ್ನು ಆಶ್ರಯಿಸಬೇಕಾಗಿದೆ.ಪ್ರಸಕ್ತ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನಲ್ಲಿ ಶಿಡ್ಲಘಟ್ಟದಲ್ಲಿ ಸೀರೆ ಕ್ಲಸ್ಟರ್ ಮತ್ತು ಚಿಕ್ಕಬಳ್ಳಾಪುರದಲ್ಲಿ ಚರ್ಮದ ಗೊಂಬೆ ತಯಾರಿಕೆ ಘಟಕಗಳ ಆರಂಭದ ಪ್ರಸ್ತಾಪ ಮಾತ್ರವಿದೆ. ಇದರ ಹೊರತಾಗಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳು ಜಾರಿಯಾಗಿಲ್ಲ.ಜಿಲ್ಲೆಯಲ್ಲಿ ‌ಹೂ, ಹಣ್ಣು, ತರಕಾರಿ, ಹಾಲು ಪ್ರಮುಖ ಉತ್ಪನ್ನ. ಇವುಗಳ ಮೌಲ್ಯವರ್ಧನೆ, ಸಂಗ್ರಹ ಅಥವಾ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ. ದ್ರಾಕ್ಷಿ, ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳು ಬೆಲೆ ಕಳೆದುಕೊಂಡಾಗ ಸ್ಥಳೀಯವಾಗಿ ಅವುಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡುವ ಕೈಗಾರಿಕೆಗಳು ಇಂದಿನ ತುರ್ತು ಅಗತ್ಯ. ಅವುಗಳಿಂದ ಉದ್ಯೋಗ ಸೃಷ್ಟಿ ಕೂಡ ಆಗುತ್ತದೆ. ಈ ಬೇಡಿಕೆ ಬಹುವರ್ಷಗಳಿಂದ ಇದೆ. ಆದರೆ, ಇಂದಿಗೂ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳು ಜಿಲ್ಲೆಯಲ್ಲಿ ಇಲ್ಲ.ಚಿಕ್ಕಬಳ್ಳಾಪುರ ನಗರ ಹೊರವಲಯದ ಕೈಗಾರಿಕಾ ಪ್ರದೇಶವಿದೆ. ಇಲ್ಲಿ ಮಧ್ಯಮ ಗಾತ್ರದ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತವೆ. ಇಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳೇನೂ ಇಲ್ಲ. ನೆರೆಯ ಆಂಧ್ರಪ್ರದೇಶದಲ್ಲಿ ಕೊರಿಯಾ ದೇಶದ ಕಿಯಾ ಮೋಟರ್ಸ್ ಈಗಾಗಲೇ ದೊಡ್ಡ ಕೈಗಾರಿಕಾ ಘಟಕಗಳನ್ನು ಹೊಂದಿದೆ. ಅವರು ನೆರೆಯ ಬಾಗೇಪಲ್ಲಿಯಲ್ಲಿ ತಮ್ಮ ನೆಲೆ ವಿಸ್ತರಿಸಲು ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಸಹ ಮಾಡಿದ್ದರು. ಕೊರಿಯಾ ಕೈಗಾರಿಕೋದ್ಯಮಿಗಳು ಬಾಗೇಪಲ್ಲಿಯಲ್ಲಿ ಜಮೀನು ದೊರೆತರೆ ಘಟಕಗಳನ್ನು ಸ್ಥಾಪಿಸುವ ಮನಸ್ಸು ಹೊಂದಿದ್ದಾರೆ ಎನ್ನುತ್ತವೆ ಜಿಲ್ಲಾ ಕೈಗಾರಿಕಾ ಇಲಾಖೆ ಮೂಲಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ. ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

Fri Mar 11 , 2022
  ಬೆಂಗಳೂರು: ತಮ್ಮನ್ನು ತಳ್ಳಿ ಅವಮಾನಿಸುವ ಯಾವುದೇ ಉದ್ದೇಶ ಇಲ್ಲ, ನನ್ನ ಅರಿವಿನಲ್ಲೂ ಇಲ್ಲ. ಜನರ ಗುಂಪಿನಲ್ಲಿ ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ದರೆ ವಿಷಾದಿಸುವೆ… ಎಂದು ಮಾಜಿ ಶಾಸಕ ಬಿ.ಆರ್​. ಪಾಟೀಲ್​ ಅವರಿಗೆ ಪತ್ರ ಬರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕ್ಷಮೆ ಕೋರಿದ್ದಾರೆಮೇಕೆದಾಟು ಪಾದಯಾತ್ರೆಯ ವೇಳೆ ಬಿ.ಆರ್​. ಪಾಟೀಲ್​ ಅವರನ್ನು ತಳ್ಳಿ, ಟೋಪಿ ಕಿತ್ತು ಹಾಕಿದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆಶಿ ಪತ್ರ ಬರೆದು ಕ್ಷಮೆ ಕೋರಿದ್ದಾರೆ. ಪಾದಯಾತ್ರೆ ಅರಮನೆ ಮೈದಾನಕ್ಕೆ […]

Advertisement

Wordpress Social Share Plugin powered by Ultimatelysocial