ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ. ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

 

ಬೆಂಗಳೂರು: ತಮ್ಮನ್ನು ತಳ್ಳಿ ಅವಮಾನಿಸುವ ಯಾವುದೇ ಉದ್ದೇಶ ಇಲ್ಲ, ನನ್ನ ಅರಿವಿನಲ್ಲೂ ಇಲ್ಲ. ಜನರ ಗುಂಪಿನಲ್ಲಿ ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ದರೆ ವಿಷಾದಿಸುವೆ… ಎಂದು ಮಾಜಿ ಶಾಸಕ ಬಿ.ಆರ್​. ಪಾಟೀಲ್​ ಅವರಿಗೆ ಪತ್ರ ಬರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕ್ಷಮೆ ಕೋರಿದ್ದಾರೆಮೇಕೆದಾಟು ಪಾದಯಾತ್ರೆಯ ವೇಳೆ ಬಿ.ಆರ್​. ಪಾಟೀಲ್​ ಅವರನ್ನು ತಳ್ಳಿ, ಟೋಪಿ ಕಿತ್ತು ಹಾಕಿದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆಶಿ ಪತ್ರ ಬರೆದು ಕ್ಷಮೆ ಕೋರಿದ್ದಾರೆ. ಪಾದಯಾತ್ರೆ ಅರಮನೆ ಮೈದಾನಕ್ಕೆ ಬಂದ ಸಂದರ್ಭದಲ್ಲಿ ಪಾಟೀಲ್​ ಅವರನ್ನು ಅನುಚಿತವಾಗಿ ನಡೆಸಿಕೊಂಡರೆಂಬ ಆರೋಪ ಕೇಳಿ ಬಂದಿತ್ತು. ಪಾಟೀಲ್​ ಈ ಬಗ್ಗೆ ಪಕ್ಷದ ಹೈಕಮಾಂಡ್​ಗೂ ದೂರು ನೀಡಿದ್ದರು. ಹಿರಿಯ ಮುಖಂಡರಿಗೆ ಅಪಮಾನ ಮಾಡಿದ ಬಗ್ಗೆ ಹೈಕಮಾಂಡ್​ ಸಹ ಅಸಮಾಧಾನ ವ್ಯಕ್ತಪಡಿಸಿತ್ತು. ಆ ಹಿನ್ನೆಲೆಯಲ್ಲಿ ಡಿಕೆಶಿ ಗುರುವಾರ ಪತ್ರ ಬರೆದಿದ್ದಾರೆ. ಗೋವಾದಿಂದ ವಾಪಸಾದ ಬಳಿಕ ಖುದ್ದು ಭೇಟಿ ಮಾಡುವುದಾಗಿಯೂ ಪತ್ರದಲ್ಲಿ ಡಿಕೆಶಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲಿಗೆ ಕಪ್ಪು ದಾರ ಯಾಕೆ ಕಟ್ಟುತ್ತಾರೆ ಗೊತ್ತಾ..? ಇಲ್ಲಿದೆ ನೋಡಿ ಕುತೂಹಲಕಾರಿ ಸಂಗತಿ

Fri Mar 11 , 2022
  ಪೂರ್ವಜರು ನಡೆಸಿಕೊಂಡು ಬಂದಿರುವ ಆಚರಣೆಗಳಿಗೆ ಅನೇಕ ಕಾರಣಗಳಿವೆ. ಶರೀರ ಮತ್ತು ಮನಸ್ಸಿನ ಸ್ವಾಸ್ಥ್ಯ ವೃದ್ಧಿಯಾಗಲು ಹಲವಾರು ರೀತಿಯ ಆಚರಣೆಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ. ನೀರಿಗೆ ಅರಿಶಿಣ ಸೇರಿಸಿ ಸ್ನಾನ ಮಾಡುವುದು, ತಿಲಕವಿಟ್ಟು ಕೊಳ್ಳುವುದು, ಪೂಜಿಸಿದ ದಾರ ಕಟ್ಟಿಕೊಳ್ಳುವುದು ಹೀಗೆ ಅನೇಕ ಆಚರಣೆ, ನಿಯಮಗಳನ್ನು ಪಾಲಿಸುತ್ತಾ ಬಂದಿದ್ದೇವೆ. ಹಾಗೆಯೇ ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದು ಸಹ ಅಂತಹ ಆಚರಣೆಗಳಲ್ಲೊಂದು. ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರ ಹಿಂದೆ ಅನೇಕ ಲಾಭಗಳಿವೆ ಎಂಬುದನ್ನು ಶಾಸ್ತ್ರ […]

Advertisement

Wordpress Social Share Plugin powered by Ultimatelysocial