ಕಾಲಿಗೆ ಕಪ್ಪು ದಾರ ಯಾಕೆ ಕಟ್ಟುತ್ತಾರೆ ಗೊತ್ತಾ..? ಇಲ್ಲಿದೆ ನೋಡಿ ಕುತೂಹಲಕಾರಿ ಸಂಗತಿ

 

ಪೂರ್ವಜರು ನಡೆಸಿಕೊಂಡು ಬಂದಿರುವ ಆಚರಣೆಗಳಿಗೆ ಅನೇಕ ಕಾರಣಗಳಿವೆ. ಶರೀರ ಮತ್ತು ಮನಸ್ಸಿನ ಸ್ವಾಸ್ಥ್ಯ ವೃದ್ಧಿಯಾಗಲು ಹಲವಾರು ರೀತಿಯ ಆಚರಣೆಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ. ನೀರಿಗೆ ಅರಿಶಿಣ ಸೇರಿಸಿ ಸ್ನಾನ ಮಾಡುವುದು, ತಿಲಕವಿಟ್ಟು ಕೊಳ್ಳುವುದು, ಪೂಜಿಸಿದ ದಾರ ಕಟ್ಟಿಕೊಳ್ಳುವುದು ಹೀಗೆ ಅನೇಕ ಆಚರಣೆ, ನಿಯಮಗಳನ್ನು ಪಾಲಿಸುತ್ತಾ ಬಂದಿದ್ದೇವೆ.

ಹಾಗೆಯೇ ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದು ಸಹ ಅಂತಹ ಆಚರಣೆಗಳಲ್ಲೊಂದು. ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರ ಹಿಂದೆ ಅನೇಕ ಲಾಭಗಳಿವೆ ಎಂಬುದನ್ನು ಶಾಸ್ತ್ರ ತಿಳಿಸಿದೆ.

ಅಂತಹ ಪರಿಣಾಮಕಾರಿ ಲಾಭಗಳ ಬಗ್ಗೆ ತಿಳಿಯೋಣ.. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಬಣ್ಣ ಶನಿ ದೇವನನ್ನು ಪ್ರತಿನಿಧಿ ಸುತ್ತದೆ. ಹಾಗಾಗಿ ಶನಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಕಪ್ಪು ಬಣ್ಣವನ್ನು ಹೆಚ್ಚು ಬಳಸುತ್ತಾರೆ. ಹಾಗಾಗಿ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡ ವ್ಯಕ್ತಿಗಳು ಶನಿ ದೇವರಿಂದ ರಕ್ಷಣೆ ಪಡೆದುಕೊಳ್ಳುತ್ತಾರೆ.

ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದಂತಹ ಆಚರಣೆ ಆಗಿದೆ. ತಾಯಿ ಮಗುವಿಗೆ ಕೆಟ್ಟದೃಷ್ಟಿ ತಾಗದಿರಲೆಂದು ಕಪ್ಪು ದಾರ ಕಟ್ಟಿದರೆ, ಹೆಂಗಳೆಯರು ಚೆಂದವಾಗಿ ಕಾಣಲೆಂದು ಕಟ್ಟಿಕೊಳ್ಳುತ್ತಾರೆ. ಆದರೆ ಇನ್ನೂ ಅನೇಕ ಉತ್ತಮ ಪ್ರಯೋಜನಗಳು ಈ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಇದೆ.

ರಾಹು ಮತ್ತು ಕೇತು ಗ್ರಹಗಳ ಅಶುಭ ಪ್ರಭಾವದಿಂದ ರಕ್ಷಣೆ:

ಕಾಲಿಗೆ ಕಪ್ಪುಜನರ ಕಟ್ಟಿಕೊಳ್ಳುವುದು ಚೆಂದ ಅಷ್ಟೇ ಅಲ್ಲದೆ ಗ್ರಹಗಳ ಅಶುಭ ಪ್ರಭಾವದಿಂದಲೂ ರಕ್ಷಣೆ ದೊರೆಯುತ್ತದೆ. ಛಾಯಾ ಗ್ರಹಗಳೆಂದು ಕರೆಯಲ್ಪಡುವ ರಾಹು ಮತ್ತು ಕೇತು ಗ್ರಹಗಳು ಅಶುಭ ಪ್ರಭಾವಗಳನ್ನು ಬೀರುತ್ತಿದ್ದರೆ ಅಥವಾ ಶತ್ರು ಮನೆಯಲ್ಲಿ ಸ್ಥಿತವಾಗಿದ್ದರೆ ಅಂಥ ಸಂದರ್ಭದಲ್ಲಿ ಹಣ ಕಳೆದುಕೊಳ್ಳುವುದು, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಪರಿಹಾರವಾಗಿ ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಛಾಯಾ ಗ್ರಹಗಳ ಅಶುಭ ಪ್ರಭಾವದಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಕೆಟ್ಟ ದೃಷ್ಟಿಯಿಂದ ರಕ್ಷಣೆ:

ಒಬ್ಬ ವ್ಯಕ್ತಿಯ ಸಂಪತ್ತು, ಸುಖ- ಸಮೃದ್ಧಿ ಮತ್ತು ಸಂತೋಷಗಳನ್ನು ನೋಡಿ ಸಹಿಸಲಾಗದ ವ್ಯಕ್ತಿಗಳು ಅನೇಕರಿರುತ್ತಾರೆ. ಅಂಥ ಸಂದರ್ಭದಲ್ಲಿ ಆ ಜನಗಳ ಕೆಟ್ಟ ದೃಷ್ಟಿ ತಾಗಿದಾಗ ಸಮಸ್ಯೆಗಳು ಉಂಟಾಗುತ್ತವೆ. ಕೆಟ್ಟ ದೃಷ್ಟಿಯಿಂದ ಬಚಾವಾಗಲು ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳಬೇಕಾಗುತ್ತದೆ. ಇದು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ಮಾಟ – ಮಂತ್ರಗಳ ಅಂಥ ಕೆಟ್ಟ ಶಕ್ತಿಗಳು ತಾಗದಂತೆ ರಕ್ಷಣೆ ನೀಡುತ್ತದೆ.

ಅನೇಕ ಆರೋಗ್ಯ ಲಾಭ ಇದೆ:

ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಪರಿಹಾರವನ್ನು ಕಾಣಬಹುದಾಗಿದೆ. ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದರಲ್ಲೂ ಮುಖ್ಯವಾಗಿ ಹೊಟ್ಟೆ ನೋವು ಗುಣವಾಗುತ್ತದೆ ಎಂದು ಹೇಳಲಾಗುತ್ತದೆ.ಗಾಯಗಳನ್ನು ಗುಣಪಡಿಸುವಲ್ಲಿಯೂ ಇದು ಸಹಕಾರಿಯಾಗಿದೆ. ಕಾಲಿಗೆ ಗಾಯವಾಗಿದ್ದರೂ ಅದನ್ನು ಬೇಗ ಗುಣಪಡಿಸುವಲ್ಲಿ ಕಪ್ಪು ದಾರ ಸಹಾಯಕವಾಗುತ್ತದೆ. ಆರ್ಥರೈಟಿಸ್‌ನಿಂದ ಉಂಟಾದ ಕಾಲು ನೋವು ಬೇಗ ಗುಣವಾಗಲು ಸಹ ಇದು ಸಹಕಾರಿಯಾಗಿದೆ.

ಅದೃಷ್ಟ ಮತ್ತು ಸಂಪತ್ತು ನೆಲೆಸುವಂತೆ ಮಾಡುತ್ತದೆ:

ಶನಿಯು ಶಕ್ತಿಶಾಲಿ ಗ್ರಹವಾಗಿದೆ. ಶನಿಯ ಕೃಪೆ ದೊರಕಿದರೆ ಸುಖ, ಸಂಪತ್ತು ಮತ್ತು ಅದೃಷ್ಟ ಬರುತ್ತದೆ. ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಶನಿ ದೇವರ ರಕ್ಷಣೆ ಸಿಗುತ್ತದೆ. ಅಷ್ಟೇ ಅಲ್ಲದೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿವಾದಗಳು ಬೇಗ ಇತ್ಯರ್ಥವಾಗುತ್ತವೆ. ಜಾತಕದಲ್ಲಿ ಶನಿದೋಷ ಇರುವವರು ಕಾಲಿಗೆ ಕಪ್ಪುದಾರವನ್ನು ಕಟ್ಟಿಕೊಂಡರೆ ದೋಷದ ಪ್ರಮಾಣ ತಗ್ಗುತ್ತದೆ. ಪದೇ ಪದೆ ಅನಾರೋಗ್ಯ ಸಮಸ್ಯೆ ಉಂಟಾಗುವ ಮಕ್ಕಳಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಪ್ರಿಲ್​​​ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ..! ನಮೋ ಅದ್ದೂರಿ ಸ್ವಾಗತ ಕೋರಲು ಸಜ್ಜಾಗ್ತಿದೆ ಬಿಜೆಪಿ..!

Fri Mar 11 , 2022
ಬೆಂಗಳೂರು: ಏಪ್ರಿಲ್​​​ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಬರಲಿದ್ದು, ಪ್ರಧಾನಿಗೆ ಅದ್ದೂರಿ ಸ್ವಾಗತ ಕೋರಲು ಬಿಜೆಪಿ ಸಜ್ಜಾಗುತ್ತಿದೆ.ಪಂಚರಾಜ್ಯ ಫಲಿತಾಂಶ ನಂತರ ನಮೋ ಬರುತ್ತಿದ್ದು, ಹೀಗಾಗಿ ಪಕ್ಷ ಸಂಘಟನೆಗೆ ಈ ಭೇಟಿ ಬಳಸಿಕೊಳ್ಳಲು ತಂತ್ರಗಾರಿಕೆ ನಡೆಸಲಾಗುತ್ತಿದೆ.ಬೆಂಗಳೂರಿನಲ್ಲಿ ಬೃಹತ್​ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ಲಾನ್ ಮಾಡಲಾಗುತ್ತಿದ್ದು, 2023ರ ಚುನಾವಣೆಗೆ ಈಗಿನಿಂದಲೇ ಬ್ಲೂ ಪ್ರಿಂಟ್ ತಯಾರಿ ನಡೆಸಲಾಗಿದೆ. ಮೋದಿ ರಾಜ್ಯ ಭೇಟಿ ನಂತರ ಪಕ್ಷ ಸಂಘಟನೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಸಾಲು-ಸಾಲು ಸಮಾವೇಶ, ಸಮಾರಂಭಕ್ಕೆ ಪ್ಲಾನ್​​​ ನಡೆಯುತ್ತಿದೆ. ಮೋದಿ ಭೇಟಿಗೂ […]

Advertisement

Wordpress Social Share Plugin powered by Ultimatelysocial