ಸ್ಯಾಮ್​ಸಂಗ್​ ಕಂಪೆನಿಯಿಂದ ಧೂಳೆಬ್ಬಿಸುವ ಸ್ಮಾರ್ಟ್​​ಫೋನ್​ ಬಿಡುಗಡೆ!

ಮೊಬೈಲ್​ ಮಾರುಕಟ್ಟೆಯಲ್ಲಿ (Mobile Market) ಹಲವಾರು ಸ್ಮಾರ್ಟ್​​ಫೋನ್​ ಕಂಪೆನಿಗಳು ಹೊಸ ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದಿವೆ. ಜನರು ಕೂಡ ಕೆಲವೊಂದು ಕಂಪೆನಿಗಳ ಸ್ಮಾರ್ಟ್​​ಫೋನ್​ಗಳ (Smartphones) ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ.ಈ ಸಾಲಿನಲ್ಲಿ ಸ್ಯಾಮ್​ಸಂಗ್​ ಕಂಪೆನಿ (Samsung Company) ಸಹ ಸೇರಿದೆ ಎಂದರೆ ತಪ್ಪಾಗಲಾರದು. ಸ್ಯಾಮ್​ಸಂಗ್​ ಕಂಪೆನಿ ಸ್ಮಾರ್ಟ್​​ಫೋನ್ ವಲಯದಲ್ಲಿ ಭಾರೀ ಸದ್ದು ಮಾಡಿರುವಂತಹ ಕಂಪೆನಿಯಾಗಿದೆ. ಇದರ ಫೀಚರ್ಸ್​ ಮೂಲಕವೇ ಎಲ್ಲರನ್ನೂ ತನ್ನ ಆಕರ್ಷಿಸಿಕೊಂಡಿದೆ. ಸ್ಯಾಮ್​ಸಂಗ್​ ಕಂಪೆನಿ ಹಿಂದಿನಿಂದಲೂ ಗುಣಮಟ್ಟದ ಫೀಚರ್ಸ್​​ಗಳುಲ್ಲ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ತನ್ನ ಗ್ರಾಹಕರಿಗೆ ಕಂಪೆನಿ ಗುಡ್​ನ್ಯೂಸ್​ ಒಂದನ್ನು ನೀಡಿದೆ. ಅದೇನೆಂದರೆ ಸ್ಯಾಮ್​ಸಂಗ್​ ಕಂಪೆನಿಯಿಂದ ಹೊಸ ಸ್ಮಾರ್ಟ್​​ಫೋನ್​ ಬಿಡುಗಡೆಯಾಗುತ್ತಿದೆ.
ಹೌದು, ಜನಪ್ರಿಯ ಮೊಬೈಲ್ ಕಂಪೆನಿಯಾಗಿರುವ ಸ್ಯಾಮ್​ಸಂಗ್ ಇದೀಗ ಮಾರುಕಟ್ಟೆಗೆ ಸ್ಯಾಮ್​ಸಂಗ್​ ಎ24 ಎಂಬ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಈ ವರ್ಷ ಮಾರುಕಟ್ಟೆಯಲ್ಲಿ ಹೊಸ ರೀತಿಯ ಮಾರಾಟವನ್ನು ಸೃಷ್ಟಿಸಲಿದೆ ಎಂದು ಕಂಪೆನಿ ಹೇಳಿದೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್​ ಫೀಚರ್ಸ್​, ಬೆಲೆ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.ಫೀಚರ್ಸ್​​ ಬಗ್ಗೆ ನಿರೀಕ್ಷೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ24 ಸ್ಮಾರ್ಟ್‌ಫೋನ್‌ 4ಜಿ ನೆಟ್​ವರ್ಕ್​ ಅನ್ನು ಬೆಂಬಲಿಸುವ ಸ್ಮಾರ್ಟ್​ಫೋನ್​ ಎಂದು ವರದಿಯಾಗಿದೆ.ಇನ್ನು ಈ ಸ್ಮಾರ್ಟ್​ಫೋನ್​ನ ಡಿಸ್​ಪ್ಲೇ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲ್ಡ್​​ ಡಿಸ್‌ಪ್ಲೇಯನ್ನು ಹೊಂದಿರಬಹುದು ಎನ್ನಲಾಗಿದೆ. ಇನ್ನು ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಬಹುದು. ಅಲ್ಲದೆ ಇದು 90Hz ರಿಫ್ರೆಶ್ ರೇಟ್‌ ಬೆಂಬಲಿಸಬಹುದು ಎಂದು ನಿರೀಕ್ಷಿಸಲಾಗಿದೆ.ಕ್ಯಾಮೆರಾ ಫಿಚರ್ಸ್​ ಹೇಗಿರಲಿದೆ?ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ24 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ, ಇದಲ್ಲದೆ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ 16 ಮೆಗಾಪಿಕ್ಸೆಲ್​ ಸೆನ್ಸಾರ್​ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎನ್ನಲಾಗಿದೆ.ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ24 ಸ್ಮಾರ್ಟ್‌ಫೋನ್‌ ಪ್ರೊಸೆಸರ್ ಸಾಮರ್ಥ್ಯಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ24 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 ಎಸ್​​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿರಬಹುದು ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್​ಫೋನ್​ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎ24 ಸ್ಮಾರ್ಟ್​​ಫೋನ್​ 6ಜಿಬಿ ರ್‍ಯಾಮ್ ಮತ್ತು 128 ಜಿಬಿ ಇಂಟರ್ನಲ್​ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಿದ್ದಾರೆ. ಜೊತೆಗೆ ಮೆಮೊರಿ ಕಾರ್ಡ್‌ ಸ್ಲಾಟ್​​ ಅನ್ನು ಇದು ಹೊಂದಿರಲಿದ್ದು, ಈ ಮೂಲಕ 1 ಟಿಬಿ ವರೆಗೆ ಸ್ಟೋರೇಜ್​ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶ ನೀಡಲಿದೆ.ಬ್ಯಾಟರಿ ಫೀಚರ್ಸ್​ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ24 ಸ್ಮಾರ್ಟ್‌ಫೋನ್‌ 4,000mAh ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಈ ಬ್ಯಾಟರಿ 15W ವೇಗದ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆ ಇದೆ.ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ24 ಸ್ಮಾರ್ಟ್‌ಫೋನ್‌ಇತರೆ ಫೀಚರ್ಸ್​ ಇನ್ನು ಈ ಸ್ಮಾರ್ಟ್​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌ ಅನ್ನು ಬೆಂಬಲಿಸಬಹುದು.ಇನ್ನು ಈ ಸ್ಮಾರ್ಟ್​​ಫೋನ್​ ಮಾರುಕಟ್ಟೆಗೆ ಬಜೆಟ್​ ಬೆಲೆಯಲ್ಲಿ ಬರುವ ಸಾಧ್ಯತೆಯಿದೆ. ಹಾಗೂ ಇದರ ಬಿಡುಗಡೆಯ ದಿನಾಂಕವನ್ನು ಕಂಪೆನಿ ಇದುವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಹಾಗೇ ಈ ಸ್ಮಾರ್ಟ್​​ಫೋನ್​ನ ವಿನ್ಯಾಸ ಮತ್ತು ಫೀಚರ್ಸ್​ನಲ್ಲಿ ಇನ್ನಷ್ಟು ಬದಲಾಗಬಹುದು ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಸುನಾಮಿಗೆ ತತ್ತರಿಸಿದ ಚೀನಾ:

Wed Jan 11 , 2023
ಬೆಂಗ್ಬೂ (ಚೀನಾ):ಕೊರೊನಾ ಸುನಾಮಿಯಿಂದ ತತ್ತರಿಸಿರುವ ಚೀನಾ ಈ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಹೊರಗೆ ಬರಲು ಹರಸಾಹಸ ನಡೆಸುತ್ತಿದೆ. ಬೀಜಿಂಗ್, ಶಾಂಘೈನಂಥಾ ದೊಡ್ಡ ನಗರಗಳಲ್ಲಿ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದರೆ, ಚೀನಾ ದೇಶದ ಗ್ರಾಮೀಣ ಭಾಗ ಕೂಡಾ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಚೀನಾದ ಗ್ರಾಮೀಣ ಭಾಗಗಳಾದ ಬೆಂಗ್ಬೂ, ಅನ್ಹುಯಿ ಸೇರಿದಂತೆ ಹಲವೆಡೆ ಸೂಕ್ತ ಆರೋಗ್ಯ ಮೂಲ ಸೌಕರ್ಯಗಳೇ ಇಲ್ಲ. ಆಸ್ಪತ್ರೆಯಲ್ಲಿ ಬೆಡ್, ಐಸಿಯು, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಯಾವುದೇ ಸೌಲಭ್ಯಗಳು ಇಲ್ಲವಾದ […]

Advertisement

Wordpress Social Share Plugin powered by Ultimatelysocial