ಕೋವಿಡ್ ಸುನಾಮಿಗೆ ತತ್ತರಿಸಿದ ಚೀನಾ:

ಬೆಂಗ್ಬೂ (ಚೀನಾ):ಕೊರೊನಾ ಸುನಾಮಿಯಿಂದ ತತ್ತರಿಸಿರುವ ಚೀನಾ ಈ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಹೊರಗೆ ಬರಲು ಹರಸಾಹಸ ನಡೆಸುತ್ತಿದೆ. ಬೀಜಿಂಗ್, ಶಾಂಘೈನಂಥಾ ದೊಡ್ಡ ನಗರಗಳಲ್ಲಿ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದರೆ, ಚೀನಾ ದೇಶದ ಗ್ರಾಮೀಣ ಭಾಗ ಕೂಡಾ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದೆ.

ಚೀನಾದ ಗ್ರಾಮೀಣ ಭಾಗಗಳಾದ ಬೆಂಗ್ಬೂ, ಅನ್ಹುಯಿ ಸೇರಿದಂತೆ ಹಲವೆಡೆ ಸೂಕ್ತ ಆರೋಗ್ಯ ಮೂಲ ಸೌಕರ್ಯಗಳೇ ಇಲ್ಲ. ಆಸ್ಪತ್ರೆಯಲ್ಲಿ ಬೆಡ್, ಐಸಿಯು, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಯಾವುದೇ ಸೌಲಭ್ಯಗಳು ಇಲ್ಲವಾದ ಕಾರಣ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಪರದಾಡುತ್ತಿದ್ದಾರೆ. ಚೀನಾದ ಪೂರ್ವ ಪ್ರಾಂತ್ಯವು ಇಡೀ ದೇಶದಲ್ಲೇ ಅತ್ಯಂತ ಬಡತನದಿಂದ ಕೂಡಿದ ಪ್ರದೇಶವಾಗಿದ್ದು, ಕೊರೊನಾರ್ಭಟ ಇಲ್ಲೇ ಹೆಚ್ಚಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿತ್ಯವೂ ಈ ಯೋಗಾಸನಗಳನ್ನು ಮಾಡಿ.

Wed Jan 11 , 2023
            ದೇಹದ ಎಲ್ಲಾ ಭಾಗಗಳ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಯೋಗಾಸನಗಳು ಸಹಕಾರಿಯಾಗಿವೆ. ಅದೇ ರೀತಿ ಮೆದುಳಿನ ಕಾರ್ಯ ಸರಿಯಾಗಿರಲು, ಜೀವಕೋಶಗಳ ಸುಸ್ಥಿತಿಯಿಂದ ಹಿಡಿದು ಎಲ್ಲಾ ರೀತಿಯ ಆರೋಗ್ಯಕ್ಕೂ ಯೋಗಾಸನಗಳು ಹೆಚ್ಚು ಒಳ್ಳೆಯದು. ಹಾಗಾದರೆ ಮರೆವಿನ ಕಾಯಿಲೆ ಆಲ್ಝೈಮರ್‌ ನ್ನು ತಡೆಗಟ್ಟಲು, ಮೆದುಳನ್ನು ಆರೋಗ್ಯಯುತವಾಗಿಸಿಕೊಳ್ಳಲು ಯಾವೆಲ್ಲಾ ಯೋಗಾಸನಗಳು ಸಹಕಾರಿಯಾಗಿವೆ ಎನ್ನುವ ಬಗ್ಗೆ ನೋಡೋಣ. ಸಂಸ್ಕೃತದಲ್ಲಿ ಪದ್ಮಾಸನ ಎಂದರೆ ಕಮಲದ ಹೂವು, ಆದ್ದರಿಂದ ಆಸನವು ಕಮಲದ ಭಂಗಿ […]

Advertisement

Wordpress Social Share Plugin powered by Ultimatelysocial