ನಿಮ್ಮ ಮನೆಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿದ್ದಾರಾ? ಹಾಗಾದ್ರೆ, ಮಿಸ್‌ ಮಾಡ್ದೇ ಈ ಸ್ಟೋರಿ ಓದಿ..!

ನಿಮ್ಮ ಮನೆಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿದ್ದಾರಾ? ಹಾಗಾದ್ರೆ, ಮಿಸ್‌ ಮಾಡ್ದೇ ಈ ಸ್ಟೋರಿ ಓದಿ..!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಅಂಚೆ ಇಲಾಖೆಯು ವಿವಿಧ ರೀತಿಯ ಯೋಜನೆ(Post office scheme‌)ಗಳನ್ನ ನಡೆಸುತ್ತಿದೆ. ಅದ್ರಲ್ಲಿ ನಿಮ್ಮ ಅಗತ್ಯತೆಗಳು ಮತ್ತು ಹಣಕಾಸಿನ ಗುರಿಗಳಿಗೆ ಸೂಕ್ತವಾದ ಯೋಜನೆಯನ್ನ ಆರಿಸಿ. ನಂತ್ರ ನೀವು ಯೋಜನೆಗೆ ಸೇರುವುದರಿಂದ ಪ್ರಯೋಜನ ಪಡೆಯುತ್ತೀರಿ.

ಹಾಗಾಗಿ ಯೋಜನೆಯ ಆಯ್ಕೆಯಲ್ಲಿ ನೀವು ಎಚ್ಚರಿಕೆ ವಹಿಸಬೇಕು. ಎರಡು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಅಂದ್ಹಾಗೆ, ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ(Monthly Income Plan) ಕೂಡ ಒಂದು. ಇದ್ರಲ್ಲಿ ಸೇರುವುದರಿಂದ ಪ್ರತಿ ತಿಂಗಳು(Every month) ಕೈಗೆ ಹಣ ಬರುತ್ತೆ. ಮನೆಯಲ್ಲಿ ಹತ್ತು ವರ್ಷಕ್ಕಿಂತ ಮೇಲ್ಪಟ್ಟ(Over ten years of age) ಮಕ್ಕಳಿರುವವರು ಈ ಯೋಜನೆಯಡಿ ಹೂಡಿಕೆ ಮಾಡಬೋದು.ಈ ಯೋಜನೆಯಡಿ ನಿಮ್ಮ ಮಗುವಿನ ಹೆಸರಿನಲ್ಲಿ ಖಾತೆ ತೆರೆದ್ರೆ, ಪ್ರತಿ ತಿಂಗಳು ಹಣ ಬರುತ್ತದೆ. ಅವರ ಬೋಧನಾ ಶುಲ್ಕ ಸೇರಿದಂತೆ ಇತರ ವೆಚ್ಚಗಳನ್ನ ಸರಿದೂಗಿಸಲು ಇವು ಸಾಕಾಗ್ಬೋದು. ಹಾಗಾದ್ರೆ, ನಾವು ಈಗ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯನ್ನ ತಿಳಿದುಕೊಳ್ಳೋಣಾ ಬನ್ನಿ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ಸೇರುವವರು ಒಂದು ವಿಷಯವನ್ನ ಗಮನದಲ್ಲಿಟ್ಟುಕೊಳ್ಳಬೇಕು. ನೀವು ಈ ಯೋಜನೆಗೆ ಸೇರಿದ್ರೆ, ನೀವು ಒಮ್ಮೆಗೆ ನಿರ್ದಿಷ್ಟ ಮೊತ್ತವನ್ನ ಹೂಡಿಕೆ ಮಾಡಬೇಕಾಗುತ್ತದೆ. ನಂತ್ರ ಪ್ರತಿ ತಿಂಗಳು ಹಣ ಬರುತ್ತದೆ. ಇದ್ರಲ್ಲಿ ಏಕ ಖಾತೆ ಮತ್ತು ಜಂಟಿ ಖಾತೆ ಎಂಬ ಎರಡು ವಿಧದ ಆಯ್ಕೆಗಳಿವೆ. ನೀವು ಇಷ್ಟಪಡುವ ಆಯ್ಕೆಯನ್ನ ಆಯ್ಕೆ ಮಾಡಬಹುದು.

ನೀವು ಒಂದೇ ಖಾತೆಯನ್ನ ಆಯ್ಕೆ ಮಾಡಿದ್ರೆ, ನೀವು 4.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಅದೇ ಜಂಟಿ ಖಾತೆಯಲ್ಲಿ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ನೀವು ಯಾವ ಆಯ್ಕೆಯನ್ನ ಆರಿಸಿದ್ದೀರಿ ಎಂಬುದರ ಮೇಲೆ ಠೇವಣಿ ಮಾಡಬೇಕಾಗುತ್ತದೆ. ಕನಿಷ್ಠ ರೂ.1000 ಠೇವಣಿ ಇಡಬಹುದು. ಹತ್ತು ವರ್ಷ ಮೇಲ್ಪಟ್ಟವರು ಈ ಯೋಜನೆಗೆ ಸೇರಬಹುದು. ಇದರರ್ಥ ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆಯನ್ನ ತೆರೆಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಬ್ಯಾಂಕುಗಳಲ್ಲಿ ಶೇ.7ಕ್ಕಿಂತಲೂ ಸಿಗಲಿದೆ ಕಡಿಮೆ ಬಡ್ಡಿಗೆ ಗೃಹಸಾಲ, ಇಲ್ಲಿದೆ ಮಾಹಿತಿ

Fri Dec 24 , 2021
ನವದೆಹಲಿ: ಭಾರತದ ಅತಿದೊಡ್ಡ ಸಾಲದಾತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಳೆದ ವಾರ ತನ್ನ ಮೂಲ ದರವನ್ನು 10 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಹೆಚ್ಚಿಸಿದೆ. ಹೀಗಾಗಿ ಮನೆ ಕಟ್ಟುವವರಿಗೆ ಇದರಿಂದ ಸಿಹಿ ಸುದ್ದಿ ಸಿಗಲಿದೆ. ಪರಿಷ್ಕೃತ ಮೂಲ ದರವು ಡಿಸೆಂಬರ್ 15, 2021 ರಿಂದ ಜಾರಿಗೆ ಬರುವಂತೆ ಶೇಕಡಾ 7.55 ಆಗಿದೆ. ಮೂಲ ದರವು ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ನೀಡಬಹುದಾದ ಕಡಿಮೆ ಬಡ್ಡಿ ದರವಾಗಿದೆ. ನೀವು ಗೃಹ […]

Advertisement

Wordpress Social Share Plugin powered by Ultimatelysocial