‘ಫ್ರೆಂಡ್‌ಶೋರಿಂಗ್‌’ಗೆ ಒತ್ತು.

ಬೆಂಗಳೂರು: ಭಾರತವು ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಅಮೆರಿಕದ ಹಣಕಾಸು ಸಚಿವೆ ಜಾನೆಟ್ ಯೆಲನ್ ಹೇಳಿದ್ದು, ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ‘ಫ್ರೆಂಡ್‌ಶೋರಿಂಗ್‌’ ನೀತಿಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.ಜಿ20 ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆಯ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ತಂತ್ರಜ್ಞಾನ ಉದ್ದಿಮೆಗಳ ಪ್ರಮುಖರನ್ನು ಉದ್ದೇಶಿಸಿ ಅವರು ಮಾತನಾಡಿದರು.ತಂತ್ರಜ್ಞಾನ ವಲಯದಲ್ಲಿ ನಮ್ಮ ಒಪ್ಪಂದವನ್ನು ಬಲಪಡಿಸಲು ನಾನು ಉತ್ಸುಕಳಾಗಿದ್ದೇನೆ. ನಮ್ಮ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲು ‘ಫ್ರೆಂಡ್‌ಶೋರಿಂಗ್‌’ ನೀತಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇದಕ್ಕಾಗಿ ಭಾರತದಂತಹ ನಮ್ಮ ನಂಬಿಕಸ್ಥ ವ್ಯಾಪಾರ ಪಾಲುದಾರರೊಂದಿಗಿನ ಸಂಘಟನೆಯನ್ನು ಬಲಗೊಳಿಸಲಾಗುತ್ತಿದೆ. ಇದು ಪ್ರಗತಿಯಲ್ಲಿದೆ. ಆಯಪಲ್‌ ಮತ್ತು ಗೂಗಲ್‌ ಕಂಪನಿಗಳು ತಮ್ಮ ಫೋನ್‌ ತಯಾರಿಕೆಯನ್ನು ಭಾರತದಲ್ಲಿ ವಿಸ್ತರಣೆ ಮಾಡುತ್ತಿರುವುದು ಒಂದು ಉದಾಹರಣೆಯಷ್ಟೆ ಎಂದು ಮಾಹಿತಿ ನೀಡಿದ್ದಾರೆ.ಸಮಾನ ಮನಸ್ಕ ದೇಶಗಳ ನಡುವೆ ಕಚ್ಚಾ ವಸ್ತುಗಳು ಮತ್ತು ಉತ್ಪನ್ನಗಳ ಕೊಡು-ಕೊಳ್ಳುವಿಕೆ ಹಾಗೂ ಅವುಗಳನ್ನು ಜಾಗತಿಕ ಮಾರುಕಟ್ಟೆಗೆ ವಿಸ್ತರಿಸುವುದನ್ನು ‘ಫ್ರೆಂಡ್‌ಶೋರಿಂಗ್’ ಎಂದು ಅಮೆರಿಕದ ಕರೆದಿದೆ.ಭಾರತ ಮತ್ತು ಅಮೆರಿಕವು ಪರಸ್ಪರ ಅವಲಂಬಿತವಾಗಿವೆ. ಸಂವಹನ ನಡೆಸಲು ಭಾರತೀಯರು ವಾಟ್ಸ್‌ಆಯಪ್ ಬಳಸುತ್ತಿದ್ದರೆ, ಅಮೆರಿಕದ ಕಂಪನಿಗಳು ಇನ್ಫೊಸಿಸ್ ಮೇಲೆ ಅವಲಂಬಿತವಾಗಿವೆ ಎಂದು ಯೆಲನ್‌ ತಿಳಿಸಿದ್ದಾರೆ.ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ, ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪಟೇಲ್‌, ಇಂಟೆಲ್‌ ಇಂಡಿಯಾದ ಮುಖ್ಯಸ್ಥೆ ನಿವೃತಿ ರಾಯ್‌, ಫಾಕ್ಸ್‌ಕಾನ್‌ ಇಂಡಿಯಾದ ಮುಖ್ಯಸ್ಥ ಜೋಶ್‌ ಪೌಲ್ಗರ್‌ ಅವರು ಸಂವಾದದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ̲ 'ಕಬ್ಜ' ಹಾಡುಗಳ ಹಬ್ಬ

Sun Feb 26 , 2023
ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಸಿನಿಮಾ ‘ಕಬ್ಜ’ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ನೆಹರು ಮಧ್ಯಾಹ್ನದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಇಂದು ಸಂಜೆ 6 ಗಂಟೆಗೆ ‘ಕಬ್ಜ’ ಹಾಡುಗಳ ಹಬ್ಬ ನಡೆಯಲಿದ್ದು, ಇದರಲ್ಲಿ ಖ್ಯಾತ ಸಿನಿಮಾ ನಟರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ […]

Advertisement

Wordpress Social Share Plugin powered by Ultimatelysocial