‘ಶಾರೀರಿಕ ಸಂಬಂಧʼದಿಂದ ದೂರವಿರಿ ! ಈ ಸಮಸ್ಯೆಯಿದ್ದಾಗ

ದಾಂಪತ್ಯ ಜೀವನದಲ್ಲಿ ಪ್ರೀತಿ ಹಾಗೂ ವಿಶ್ವಾಸ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಸುಖಕರ ದಾಂಪತ್ಯಕ್ಕೆ ಶಾರೀರಿಕ ಸಂಬಂಧ ಅವಶ್ಯ. ಆದ್ರೆ ಕೆಲವೊಂದು ಪರಿಸ್ಥಿತಿಯಲ್ಲಿ ಸೆಕ್ಸ್ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ಸೋಂಕು ಹರಡುವ ಕ್ಷಯ, ದಡಾರ ಕಾಣಿಸಿಕೊಂಡಾಗ ಸಂಬಂಧ ಬೆಳೆಸಬೇಡಿ.ಹಾಗೆ ಮಾಡಿದಲ್ಲಿ ಸಂಗಾತಿಗೆ ಕೂಡ ಈ ರೋಗ ಹರಡುತ್ತದೆ.ಶಸ್ತ್ರಚಿಕಿತ್ಸೆಯಾದ ಕೆಲ ದಿನ ಶಾರೀರಿಕ ಸಂಬಂಧ ಬೇಡ. ಈ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.ಗರ್ಭಿಣಿಯಾದಾಗ ಏನು ಮಾಡಬೇಕೆಂಬ ಗೊಂದಲ ಅನೇಕರನ್ನು ಕಾಡುತ್ತದೆ. ಸಾಮಾನ್ಯವಾಗಿ ಮೊದಲ ಮೂರು ತಿಂಗಳು ದೂರವಿರುವುದು ಒಳ್ಳೆಯದು.ನಿಮಗೆ ಅಥವಾ ನಿಮ್ಮ ಸಂಗಾತಿಗೆ ಹಾರ್ಟ್ ಸಮಸ್ಯೆ ಇದ್ದರೆ ಸಂಬಂಧ ಬೆಳೆಸಬೇಡಿ. ಸೆಕ್ಸ್ ವೇಳೆ ಹೃದಯ ಬಡಿತ ಹೆಚ್ಚಾಗಿ ಸಮಸ್ಯೆ ಜಾಸ್ತಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.ಶಾರೀರಿಕ ಸಂಬಂಧ ಬೆಳೆಸುವ ವೇಳೆ ಮಾನಸಿಕ ಆರೋಗ್ಯ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಮಾನಸಿಕ ಸ್ಥಿತಿ ಸರಿಯಿಲ್ಲದ ಸಮಯದಲ್ಲಿ ಸಂಬಂಧ ಬೇಡ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುರತ್ಕಲ್:6-2 ತಂಡದಿಂದ ಯುವಕನ ಕೊಲೆಯತ್ನ

Wed Feb 2 , 2022
ಮಂಗಳೂರು, ಫೆ.2: ತಂಡವೊಂದು ಯುವಕನ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ಕಾಟಿಪಳ್ಳದಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಯುವಕನನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.ಕಾಟಿಪಳ್ಳದ ಮುಹಮ್ಮದ್ ಅನಸ್ (29) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ.ಬಾಡಿಗೆ ಮನೆ ತೆರವು ವಿಚಾರಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಮುಹಮ್ಮದ್ ಅನಸ್ ತನ್ನ ಸ್ನೇಹಿತರಾದ ಅಬೂಬಕರ್ ಮತ್ತು ಹ್ಯಾರಿಸ್ ಅವರೊಂದಿಗೆ 6ನೇ ಬ್ಲಾಕ್‌ನ ಮನೆಯ ಮುಂದೆ ನಿಂತು […]

Advertisement

Wordpress Social Share Plugin powered by Ultimatelysocial