ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಕೇಸ್​ಗೆ ಟ್ವಿಸ್ಟ್​; ಹತ್ಯೆ ಹಿಂದೆ ತ್ರಿಕೋನ ಪ್ರೇಮಕಥೆ

ತಿಥಿ ಶಿಕ್ಷಕನಿಂದ (Guest Teacher) ನಾಲ್ಕನೇ ವಿದ್ಯಾರ್ಥಿ ಕೊಲೆ (Student Murder Case) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯ ಹಿಂದಿನ ತ್ರಿಕೋನ ಪ್ರೇಮಕಥೆ ಪೊಲೀಸರ ತನಿಖೆಯಲ್ಲಿ (Police Investigation) ಬೆಳಕಿಗೆ ಬಂದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿಯನ್ನು ಮೊದಲನೇ ಮಹಡಿಯಿಂದ ಕೆಳಗೆಸೆದು ಹತ್ಯೆಗೈದಿದ್ದ ಅತಿಥಿ ಶಿಕ್ಷಕ ಮುತ್ತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಶಿಕ್ಷಕ, ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಬಾಲಕ ಭರತ್ ತಾಯಿ, ಶಿಕ್ಷಕಿಯೂ ಆಗಿದ್ದ ಗೀತಾ ಬಾರಕೇರಿ ಎಂಬವರ ಮೇಲೂ ಹಲ್ಲೆ ಮಾಡಿದ್ದು, ಸದ್ಯ ಶಿಕ್ಷಕಿಯ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ (KIMS Hubballi) ದಾಖಲು ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿಥಿ ಶಿಕ್ಷಕ ಮುತ್ತಪ್ಪ ಮತ್ತು ವಿದ್ಯಾರ್ಥಿ ತಾಯಿ ಗೀತಾ ನಡುವೆ ಪ್ರೇಮಾಂಕುರವಿತ್ತು.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಮುತ್ತಪ್ಪ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಗೀತಾ ಅವರ ಮೇಲೆ ಮುತ್ತಪ್ಪನಿಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಪ್ರತಿನಿತ್ಯ ಸಲುಗೆಯಿಂದಲೇ ಇರುತ್ತಿದ್ದರು. ಮೆಸೇಜ್, ಫೋನ್​​ನಲ್ಲಿ ಮಾತನಾಡೋದು ಜೋರಾಗಿತ್ತು.
ಮತ್ತೋರ್ವನ ಜೊತೆ ಸಲುಗೆಯಿಂದ ಇದ್ದ ಗೀತಾ
ಕೆಲವು ದಿನಗಳ ಹಿಂದೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಲಾಗಿತ್ತು. ಪ್ರವಾಸದ ವೇಳೆ ಶಾಲೆಯ ಮತ್ತೋರ್ವ ಸಹ ಶಿಕ್ಷಕ ಸಂಗನಗೌಡ ಎಂಬವರ ಜೊತೆ ಸಲುಗೆಯಿಂದ ಇರೋದನ್ನು ಮುತ್ತಪ್ಪ ಗಮನಿಸಿದ್ದಾನೆ. ಗೀತಾ ನಡೆಯಿಂದ ಮುತ್ತಪ್ಪ ಕೋಪಗೊಂಡಿದ್ದನು.
ಇದರಿಂದ ಕೋಪಗೊಂಡ ಮುತ್ತಪ್ಪ ಶಾಲೆಗೆ ಬಂದು ಗೀತಾಳ ಮಗ ಭರತನಿಗೆ ಜೋರಾಗಿ ಹೊಡೆದಿದ್ದಾನೆ. ನಂತರ ತರಗತಿಯಿಂದ ಹೊರಗೆ ಕರೆದುಕೊಂಡು ಬಂದು ಮೊದಲ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ.

Thu Dec 22 , 2022
ಬಸವಕಲ್ಯಾಣ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆ.ಪ್ರಧಾನಿ ನರೇಂದ್ರ ಮೊದಿ ಅವರು ವಿರುದ್ಧ ಹಗುರವಾಗಿ ಮತ್ತು ಅಸಭ್ಯ ಪದ ಬಳಸಿದ ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೋ ಹಾಗು ಭಯೊತ್ಪಾದನೆಗೆ ಬೆಂಬಲಿಸುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದ ಬಸವಕಲ್ಯಾಣ ಬಿಜೆಪಿ ಕಾರ್ಯಕರ್ತರು.ಬಿಲಾವಲ್ ಭುಟ್ಟೋ ಅವರ ಪ್ರತಿಕೃತಿ ದಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ .ಮೊದಿಯವರ ವಿಶ್ವಮಟ್ಟದ ಜನಪ್ರಿಯತೆ ಮತ್ತು ಚಾಣಾಕ್ಷ ನಡೆ ಪಾಕಿಸ್ತಾನ ದೇಶಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಹಾಗಾಗಿ […]

Advertisement

Wordpress Social Share Plugin powered by Ultimatelysocial