ಗೋ ಸಾಗಾಟ: ಪೊಲೀಸರೇನು ಹಫ್ತಾ ವಸೂಲಿಗೆ ನಿಂತಿದ್ದಾರಾ?: ಪ್ರಮೋದ್ ಮುತಾಲಿಕ್

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ‘ಪಟ್ಟಣದಿಂದ ವಾರಕ್ಕೆ ಎರಡು ಬಾರಿ ಗೋವುಗಳನ್ನು ಕಸಾಯಿ ಖಾನೆಗೆ ರವಾನಿಸಲಾಗುತ್ತಿದೆ. ಹೀಗಿದ್ದರೂ ಪೊಲೀಸರೇಕೇ ಸುಮ್ಮನಾಗಿದ್ದಾರೆ. ಪೊಲೀಸರು ಅದರ ಹಫ್ತಾ ವಸೂಲಿಗೆ ನಿಂತಿದ್ದಾರಾ? ಸೆಗಣಿ ತಿನ್ನುತ್ತಿದ್ದಾರಾ?

ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮಸೇನೆ ತಾಲ್ಲೂಕು ಘಟಕದಿಂದ ಗುರುಪೂರ್ಣಿಮೆ ಅಂಗವಾಗಿ ಬುಧವಾರ ಸಂಜೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತುಲಾಭಾರದಲ್ಲಿ ಭಾಗವಹಿಸಿ ಮಾತನಾಡಿದರು.

ಗೋಹತ್ಯೆ ಕಾನೂನು ಜಾರಿಗೆ ಬಂದಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಗೋಹತ್ಯೆ ನಿರ್ಭಯವಾಗಿ ನಡೆಯುತ್ತಿದೆ. ರಾಜ್ಯದಲ್ಲಿ 30 ಜನ ಹಿಂದೂಗಳ ಕೊಲೆಯಾಗಿದೆ. ಅದು ಪಟ್ಟಣಕ್ಕೆ ವ್ಯಾಪಿಸುತ್ತದೆ. ಮುಸ್ಲಿಮರ ಹಿಂಸೆಯ ಮಾನಸಿಕತೆ ವಿರುದ್ಧ ಹಿಂದೂ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದರು.

ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಜೈಲು ಕೇಸು ಅಂದರೆ ಅಡುಗೆ ಮನೆ, ಬಚ್ಚಲು ಮನೆ ಇದ್ದಂತೆ. ಒಂದು ಪ್ರಕರಣ ದಾಖಲಾದರೆ ಭುಜಕ್ಕೆ ಸ್ಟಾರ್ ಬಿದ್ದಂತೆ ಎಂದು ಹೇಳಿದರು.

ಹಿರೇಹಡಗಲಿಯ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಮಾತನಾಡಿ, ಶಾಸ್ತ್ರಕ್ಕೆ ಮಾತು ಕೇಳದಿದ್ದರೆ ಶಸ್ತ್ರ ಹಿಡಿಯುತ್ತೇವೆ ಎಂದರು. ಪಟ್ಟಣದ ಹಾಲಸಿದ್ದೇಶ್ವರ ಸ್ವಾಮೀಜಿ, ಹಂಪಸಾಗರದ ನವಲಿ ಹಿರೇಮಠದ ಸ್ವಾಮೀಜಿ, ಗಂಗಾಧರ ಕುಲಕರ್ಣಿ, ಮೈಲಾರದ ವೆಂಕಟಪ್ಪ ಒಡೆಯರ್, ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ, ರವಿ ಬಡಿಗೇರ, ರಾಜು ಖಾನಾಪುರ, ಚಂದ್ರಶೇಖರ್, ಸಂತೋಷ್ ಪೂಜಾರ್ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಟರಾದ ಸುಶಾಂತ್​ ಸಿಂಗ್​ ಮತ್ತು ಸಿದ್ಧಾರ್ಥ್​ ಶುಕ್ಲಾ ಮೃತಪಟ್ಟಿದರೂ ಟ್ವಿಟರ್​ ಖಾತೆಯಲ್ಲಿ ಇನ್ನು ಬ್ಲೂ ಟಿಕ್​

Thu Jul 14 , 2022
ಬೆಂಗಳೂರು: ‘ನಗುಮುಖದ ರಾಜಕುಮಾರ’, ಸ್ಯಾಂಡಲ್​ವುಡ್​ನ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಬಾರದ ಲೋಕಕ್ಕೆ ಹೋಗಿ 8 ತಿಂಗಳು ಕಳೆದರೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೋವು ಮಾತ್ರ ಕರಗಿಲ್ಲ. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್​ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ. ಆದರೆ, ಈ ಸುದ್ದಿ ಅಪ್ಪು ಅಭಿಮಾನಿಗೆ ಕೊಂಚ ಬೇಸರ ಉಂಟು ಮಾಡುವುದಂತೂ ನಿಜ. ಹೌದು, ಇದುವರೆಗೂ ಪುನೀತ್​ […]

Advertisement

Wordpress Social Share Plugin powered by Ultimatelysocial